'ವಿಷ ಕೊಡಿ' ಎಂದು ಅವಲತ್ತುಕೊಂಡಿದ್ದ Darshan: ನಟ ರಮೇಶ್​ ಅರವಿಂದ್​ ರಿಯಾಕ್ಷನ್​ ಏನು?

Published : Sep 14, 2025, 06:50 PM IST
Ramesh Aravind about Darshan

ಸಾರಾಂಶ

ರೇಣುಕಾಸ್ವಾಮಿ ಕೇಸ್​​ನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ‌ ಅವರು ಸರಿಯಾದ ವ್ಯವಸ್ಥೆ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ನಟ ರಮೇಶ್​ ಅರವಿಂದ್​ ಮತ್ತು ತರುಣ್​ ಸುಧೀರ್​ ಪ್ರತಿಕ್ರಿಯಿಸಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ವಾಯು ವಿಹಾರಕ್ಕೆ ಅವಕಾಶ ನೀಡಲಾಗಿದೆ.

ರೇಣುಕಾಸ್ವಾಮಿ ಕೇಸ್​​ನಲ್ಲಿ (Renukaswamy case) ನಟ ದರ್ಶನ್‌ ತೂಗುದೀಪ‌ ಅವರು ಸದ್ಯ ಜೈಲಿನಲ್ಲಿದ್ದಾರೆ. ಆದರೆ, ಜೈಲಿನಲ್ಲಿ ಸರಿಯಾದ ವ್ಯವಸ್ಥೆ ನೀಡುತ್ತಿಲ್ಲ ಎಂದು ಕೋರ್ಟ್​ನಲ್ಲಿ ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡಿದ್ದ ನಟ, “ಜೈಲಿನಲ್ಲಿ ನಾನು ಬೆಳಕು ನೋಡಿಲ್ಲ. ದಯಮಾಡಿ ನನಗೆ ವಿಷ ಕೊಡಿ” ಎಂದು ಹೇಳಿದ್ದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಅವರು ವಿಚಾರಣೆಗೆ ಹಾಜರಾಗಿದ್ದರು. ಆ ವೇಳೆ ಅವರು, “ಜೈಲಿನಲ್ಲಿ ಏನೂ ಕೇಳಿದರೂ ಸಿಗುತ್ತಿಲ್ಲ. ಹೀಗಾಗಿ ನನಗೆ ಸ್ವಲ್ಪ ವಿಷ ಕೊಡಿ” ಎಂದು ಅವರು ಹೇಳಿದ್ದರು. ಈ ಮೂಲಕ ತಾವು ಜೈಲಿನಲ್ಲಿ ಅಕ್ಷರಶಃ ನರಕಯಾತನೆ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

ನಟ ರಮೇಶ್​ ಅರವಿಂದ್​ ಹೇಳಿದ್ದೇನು?

ಇದಕ್ಕೆ ದರ್ಶನ್​ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿರುವ ನಡುವೆಯೇ, ಇದೀಗ ಅದರ ಬಗ್ಗೆ ನಟ ರಮೇಶ್​ ಅರವಿಂದ್​ (Ramesh Aravind) ಮಾತನಾಡಿದ್ದಾರೆ. ಈ ಬಗ್ಗೆ ನನಗೆ ಅಷ್ಟೊಂದು ಸರಿಯಾದ ಮಾಹಿತಿ ಇಲ್ಲ. ಆದರೆ, ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ, ಇದು ತುಂಬಾ ನೋವಿನ ಸಂಗತಿ. ಆದರೆ ಕಾನೂನಿಗೂ ಅದರದ್ದೇ ಆದ ರೀತಿ-ನೀತಿಗಳು ಇರುತ್ತವೆ. ಕಾನೂನು ಅದರ ಪ್ರಕಾರ ನಡೆಯುತ್ತದೆ ಎಂದು ಹೇಳಿದ್ದಾರೆ. ಈಚೆಗಷ್ಟೇ, ದರ್ಶನ್​ ಅವರ ಆಪ್ತರಲ್ಲಿ ಒಬ್ಬರಾಗಿರುವ, ನಟ- ನಿರ್ದೇಶಕ ತರುಣ್​ ಸುಧೀರ್​ (Tharun Sudhir) ಅವರು ಈ ಬಗ್ಗೆ ಮಾತನಾಡಿದ್ದರು. ಕೋರ್ಟ್​ನಲ್ಲಿ ನಡೆದ ಪ್ರೊಸೀಡಿಂಗ್ಸ್​ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಒಂದು ವೇಳೆ ದರ್ಶನ್​ ಅವರಂಥ ವ್ಯಕ್ತಿನೇ ವಿಷ ಕೇಳ್ತಾರೆ ಅಂದ್ರೆ ಎಷ್ಟು ನೊಂದಿರಬೇಕು ಎಂದು ಪ್ರಶ್ನಿಸಿದ್ದಾರೆ. ನಾನು ನೋಡಿದ ಹಾಗೆ ಅವರು ತುಂಬಾ ಸ್ಟ್ರಾಂಗ್​. ಆದರೂ ಅವರ ಬಾಯಲ್ಲಿಯೇ ಈ ಮಾತು ಬಂದಿದೆ ಎಂದು ಎಷ್ಟು ಕಷ್ಟ ಅನುಭವಿಸುತ್ತಿರಬೇಕು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿಷ ಕೊಟ್ಟುಬಿಡಿ ಎಂದು ಕೋರ್ಟ್​ನಲ್ಲಿ ಹೇಳಿದ Darshan: ನಿರ್ದೇಶಕ ತರುಣ್​ ಸುಧೀರ್​ ಹೇಳಿದ್ದೇನು?

ಕೈದಿಗಳಿಗೆ ಸೌಕರ್ಯ ಕಲ್ಪಿಸಬೇಕು ಎಂದ ತರುಣ್​

'ದರ್ಶನ್‌ ಸರ್‌ ಇನ್ನೂ ಈ ಕೇಸ್‌ನಲ್ಲಿ ಆಪಾದಿತ ಅಷ್ಟೇ, ಅಪರಾಧಿ ಅಲ್ಲ. ಹಾಗಾಗಿ ಅಲ್ಲಿ ಏನೆಲ್ಲ ಮೂಲ ಸೌಕರ್ಯಗಳಿರುತ್ತೋ ಅವು ಸಿಗಬೇಕು. ನಾನು ಕೂಡ ಚೌಕ ಸಿನಿಮಾದ ಸಂದರ್ಭದಲ್ಲಿ ಶೂಟಿಂಗ್​ನ ಅರ್ಧಭಾಗ ಜೈಲಿನಲ್ಲೇ ಕಳೆದಿದ್ದೇನೆ. ಜೈಲಿನಲ್ಲಿ ಹೇಗೆಲ್ಲ ಇರುತ್ತೆ ಅನ್ನೋದನ್ನ ನಾನು ಆ ಸಂದರ್ಭದಲ್ಲಿ ಚೆನ್ನಾಗಿ ನೋಡಿದ್ದೀನಿ ಎಂದಿರುವ ತರುಣ್​ ಅವರು, ಎಲ್ಲ ಕೈದಿಗಳಿಗೂ ಇರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುವ ನಿಯಮವೇ ಇದೆ. ಅವುಗಳನ್ನು ಯಾರೂ ಕಸಿದುಕೊಳ್ಳಲು ಆಗುವುದಿಲ್ಲ. ಆ ಹಕ್ಕು ಎಲ್ಲರಿಗೂ ಸಿಗಬೇಕಾಗುತ್ತೆ. ಆದರೆ ಅದಕ್ಕೂ ಮೀರಿ ಜೈಲಿನಲ್ಲಿ ದರ್ಶನ್‌ (Darshan Toogudeep) ಅವರಿಗೆ ಬೇರೆ ಏನೋ ಆಗಿದೆ ಅಂದ್ರೆ, ನಿಜಕ್ಕೂ ನನಗೂ ನೋವಾಗುತ್ತೆ' ಎಂದಿದ್ದಾರೆ.

ಕೋರ್ಟ್​ ಆದೇಶದಂತೆ ವಾಯುವಿಹಾರ

ಅದೇ ಇನ್ನೊಂದೆಡೆ, ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ತೂಗುದೀಪ ಅವರಿಗೆ ಜೈಲಿನಲ್ಲಿ ಬೆಳಗ್ಗೆ ಮತ್ತು ಸಂಜೆ 40 ನಿಮಿಷ ವಾಯು ವಿಹಾರ ಮಾಡಲು ಕೋರ್ಟ್​ ಆದೇಶದಂತೆ ಅವಕಾಶ ಕಲ್ಪಿಸಿದೆ. ಅನಾರೋಗ್ಯಕ್ಕೀಡಾದ ಹಿನ್ನೆಲೆ ಈ ವಿಶೇಷ ಅವಕಾಶ ಮಾಡಿಕೊಡಲಾಗಿದೆ. ಜೈಲಿನ ಅಧಿಕಾರಿಗಳು, ದರ್ಶನ್‌ಗೆ ಬ್ಯಾರಕ್‌ನ ಹೊರ ಭಾಗದ ಕಾರಿಡಾರ್‌ನಲ್ಲಿ ವಾಯುವಿಹಾರಕ್ಕೆ ಅನುಮತಿ ಕೊಟ್ಟಿದ್ದಾರೆ. ಅವರು ವಾಕಿಂಗ್​ ಮಾಡುವ ವಸಮಯದಲ್ಲಿ, ಜೈಲಿನ ಇತರ ವಿಚಾರಣಾಧೀನ ಕೈದಿಗಳು ವಾಯುವಿಹಾರ ಮಾಡುವಂತಿಲ್ಲ. ಅವರದ್ದು ಮುಗಿದ ನಂತರವಷ್ಟೇ ಇತರೆ ಕೈದಿಗಳು ವಾಯುವಿಹಾರ ಮಾಡಬಹುದೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ನಾಯಕಿಯಾಗಿ ಭರ್ಜರಿ ಬ್ಯಾಚುಲರ್ಸ್​ ಗಗನಾ? 'ಮಹಾನಟಿ' ಹೇಳಿದ್ದೇನು ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?