
ಪುತ್ರ ರಾಯನ್ ರಾಜ್ ಸರ್ಜಾ ಎಂಟ್ರಿ ಆದ ಮೇಲೆ ಮೇಘನಾ ರಾಜ್ ತತ್ಸಮ ತದ್ಭವ ಚಿತ್ರದ ಮೂಲಕ ಬಿಗ್ ಕಮ್ ಬ್ಯಾಕ್ ನೀಡುತ್ತಿದ್ದಾರೆ. ಸೆಪ್ಟೆಂಬರ್ 15ರಂದು ಬಿಡುಗಡೆ ಆಗುತ್ತಿದೆ. ಪ್ರಚಾರದಲ್ಲಿ ಸರ್ಜಾ ಫ್ಯಾಮಿಲಿ, ರಾಯನ್ ಸ್ಕೂಲ್, ಚಿರು ಜೀವನ ಹೀಗೆ ಪರ್ಸನಲ್ ವಿಚಾರಗಳನ್ನು ಹೆಚ್ಚಿಗೆ ಕೇಳಲಾಗಿತ್ತು. ಈ ಸಲ ಮೇಘನಾ ನೀಡಿರುವ ಕೇಳಿಕೆ ವೈರಲ್ ಆಗುತ್ತಿದೆ..
'ನೋಡ್ಕೊಳ್ತಾರೆ ಮಾಡ್ತಾರೆ....ನೋಡಿ ನಾವೆಲ್ಲಾ individuals ನಮ್ಮನ್ನು ಯಾರು ನೋಡಿಕೊಳ್ಳಬೇಕು? ನಾವು adults...ನಾನು ಧ್ರುವ ನೋಡಿಕೊಳ್ಳುವುದು ಅಥವಾ ಧ್ರುವ ನನ್ನನ್ನು ನೋಡಿಕೊಳ್ಳುವುದು ಆಗಲಿ ಅದು ಕೇವಲ ಹೊರಗಿನವರು ಹೇಳುವಂತ ಮಾತು. ನಾವು ದೊಡ್ಡವರಾಗಿದ್ದೀವಿ ಪ್ರೋಫೆಶನಲ್ ಕೆಲಸಗಳನ್ನು ಮಾಡುತ್ತಿದ್ದೀವಿ ಹೀಗಾಗಿ ನೋಡಿಕೊಳ್ಳುವುದು ಮಾಡುವುದು ಅನ್ನೋ ಪದವನ್ನು ಬಳಸಬಾರದು. ಧ್ರುವ ನನಗೆ ಸಹೋದರೆ ಕೆಲವೊಮ್ಮೆ ಧ್ರುವ ಜೊತೆ ಏನಾದರೂ ಹಂಚಿಕೊಳ್ಳಬೇಕು ಅನಿಸುತ್ತದೆ ಕರೆ ಮಾಡುತ್ತೀನಿ...ಧ್ರುವಗೆ ಏನೋ ಹೇಳಬೇಕು ಅನಿಸುತ್ತದೆ ಆಗ ಆತ ನನಗೆ ಕರೆ ಮಾಡುತ್ತಾನೆ. ನಿಜ ಹೇಳಬೇಕು ಅಂದ್ರೆ ಮೊದಲಿಗಿಂತ ನಾವು ತುಂಬಾ ಕ್ಲೋಸ್ ಆಗಿದ್ದೀವಿ ಅದಕ್ಕೆ ಈಗ ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆ ಕಾರಣ. ನನ್ನ ಜೀವನದ ಬಿಗ್ ಸಪೋರ್ಟರ್ ಧ್ರುವ ಅಂತ ಹೇಳಬಹುದು' ಎಂದು ಮೇಘನಾ ರಾಜ್ ಖಾಸಗಿ ಕನ್ನಡ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಈಗಲೂ ಚಿರು ಜೊತೆ ಮಾತನಾಡುತ್ತೀನಿ; ಹಾಸ್ಯ ಮಾಡುವವರಿಗೆ ಸ್ಪಷ್ಟನೆ ಕೊಟ್ಟ ಮೇಘನಾ ರಾಜ್!
'ಧ್ರುವ ಮತ್ತು ನಾನು ಜಾಸ್ತಿ ಮಾತನಾಡುವುದು ಮಕ್ಕಳ ಬಗ್ಗೆ ಆದರೂ ನಾವು ಸಿಕ್ಕಾಪಟ್ಟೆ ಮಾತನಾಡುತ್ತೀವಿ ಹೇಳುವುದಕ್ಕೆ ಆಗಲ್ಲ. ಮೊನ್ನೆ ನಾನು ಧ್ರುವ ಒಂದು ಹಾಡು ನೋಡುತ್ತಿದ್ದೀವಿ ಆಗ ಹೀರೋಯಿನ್ ಚೆನ್ನಾಗಿದ್ದಾಳೆ ರೇಟಿಂಗ್ ಮಾಡು ಎಂದು ತಮಾಷೆ ಮಾಡುತ್ತೀವಿ ಅಷ್ಟೆ...ಆದರೆ ಮುಖ್ಯವಾಗಿ ಮಕ್ಕಳ ಬಗ್ಗೆ ಹೆಚ್ಚಿಗೆ ಮಾತನಾಡುತ್ತೀವಿ ನಿನ್ನ ಮಗಳು ಮಲಗುತ್ತಿದ್ದಾಳಾ...ಶಿಷ್ಯಾ ಎಲ್ಲಿ ಅತ್ತಿಗೆ ಸ್ಕೂಲ್‌ಗೆ ಹೋಗಿದ್ದಾನಾ ಹೀಗೆ...' ಎಂದು ಮೇಘನಾ ರಾಜ್ ಹೇಳಿದ್ದಾರೆ.
ಧ್ರುವ ನನ್ನ ಸಂಬಂಧ ಯಾರಿಗೂ ಅರ್ಥವಾಗಲ್ಲ, ಸೊಸೈಟಿ ಬಗ್ಗೆ ಕೇರ್ ಮಾಡಲ್ಲ: ಮೇಘನಾ ರಾಜ್
'ನನ್ನ ಧ್ರುವ ಸರ್ಜಾ ಸಂಬಂಧ ಯಾರಿಗೂ ಅರ್ಥವಾಗಲ್ಲ. ಚಿರುಗೆ ಗೊತ್ತು ಧ್ರುವಗೆ ಗೊತ್ತು ಆಮೇಲೆ ನನಗೆ ಗೊತ್ತು. ಧ್ರುವ ಯಾವತ್ತೂ ಹೇಳಿಕೊಂಡಿಲ್ಲ ಯಾವತ್ತೂ ಹೇಳಿಕೊಳ್ಳುವುದಿಲ್ಲ ಎಂದು ನನಗೆ ಗೊತ್ತು. ತತ್ಸಮ ತದ್ಭುವ ಸಿನಿಮಾ ಟೀಸರ್‌ನ ಧ್ರುವ ಸರ್ಜಾಗೆ ಕಳುಹಿಸಿದಾಗ ತುಂಬಾನೇ ಎಕ್ಸೈಟ್ ಆಗಿದ್ದ ಆಮೇಲೆ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ವಿ ಆಗ ಯಾವ ಪಾಯಿಂಟ್ ಧ್ರುವಗೆ ಅದರಲ್ಲಿ ಇಷ್ಟವಾಗಿಲ್ಲ ಅನ್ನೋದು ಅರ್ಥವಾಗಿತ್ತು. ಯಾರಿಗೂ ನಮ್ಮ ಬಾಂಡ್ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ಪಬ್ಲಿಕ್ ಫಿಗರ್ ಆದ್ಮೇಲೆ ಜನರಿಗೆ ನಮ್ಮ ಮೇಲೆ ಕ್ಯೂರಿಯಾಸಿಟಿ ಇದೆ ಜನೆರಲ್ ಆಗಿ ನಮ್ಮ ಬಗ್ಗೆ ನಿಮಗೆ ಗೊತ್ತಿರಬೇಕು ಹಾಗಂತ ನನ್ನ ಪರ್ಸನಲ್ ವಿಚಾರಗಳನ್ನು ಟಾರ್ಗೆಟ್ ಮಾಡಿ ಅದರ ಬಗ್ಗೆ ಮಾತನಾಡುವುದು ನನಗೆ ಇಷ್ಟವಿಲ್ಲ ನಾನು ಮಾಡಲ್ಲ ಅಲ್ಲದೆ ನನಗೆ ಗೊತ್ತು ಯಾವುದು ಪರ್ಸನಲ್ ಆಗಿರಬೇಕು ಯಾವುದು ಪಬ್ಲಿಕ್ ಆಗಿರಬೇಕು ಎಂದು' ಎಂದಿದ್ದಾರೆ ಮೇಘನಾ ರಾಜ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.