ಸುಳ್ಳಿಗೆ ಹೈಪ್‌ ತರ್ಬೇಕು, ಸತ್ಯಕ್ಕೆ ತಾನಾಗೇ ಹೈಪ್‌ ಸಿಗುತ್ತೆ: ಉಪೇಂದ್ರ ವಿಡಿಯೋ ರಿಲೀಸ್​

Published : Aug 28, 2023, 03:51 PM ISTUpdated : Aug 29, 2023, 09:56 AM IST
 ಸುಳ್ಳಿಗೆ ಹೈಪ್‌ ತರ್ಬೇಕು, ಸತ್ಯಕ್ಕೆ ತಾನಾಗೇ ಹೈಪ್‌ ಸಿಗುತ್ತೆ: ಉಪೇಂದ್ರ ವಿಡಿಯೋ ರಿಲೀಸ್​

ಸಾರಾಂಶ

ನಟ ಉಪೇಂದ್ರ ಅವರ ಬಹು ನಿರೀಕ್ಷಿತ ಯುಐ ಚಿತ್ರಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ರಿಲೀಸ್​ ಆಗಿದ್ದು, ಇದರಲ್ಲಿ ಉಪೇಂದ್ರ ಅವರ ಡೈಲಾಗ್​ಗೆ ಫ್ಯಾನ್ಸ್​ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.   

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ `ಯುಐ’ (UI) ಕಳೆದೊಂದು ವರ್ಷದಿಂದ ಸಕತ್​ ಸುದ್ದಿ ಮಾಡುತ್ತಿದೆ. ಕಳೆದ ವರ್ಷವೇ ಈ ಚಿತ್ರ ಸೆಟ್ಟೇರಿತ್ತು.  ಉಪ್ಪಿಗೆ ನಾಯಕಿಯಾಗಿ ಕನ್ನಡದ ನಟಿ ರೀಷ್ಮಾ (Reeshma Nanaih) ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ ಎಂದೂ ಅನೌನ್ಸ್​ ಮಾಡಲಾಗಿತ್ತು.  ಬಹುತೇಕ ಚಿತ್ರೀಕರಣ ಮುಗಿಸಿದರೂ ನಾಯಕಿಯ ಬಗ್ಗೆ ಸಸ್ಪೆನ್ಸ್​ ಕಾದುಕೊಂಡಿತ್ತು ಚಿತ್ರತಂದ.  ಸಾಕಷ್ಟು ಬಾಲಿವುಡ್ (Bollywood) ನಟಿಮಣಿಯರ ಹೆಸರು ಸುದ್ದಿಯಾಗಿದ್ದ ಬೆನ್ನಲ್ಲೇ ನಟಿ ರೀಷ್ಮಾ, ನಾಯಕಿಯಾಗಿ ಫಿಕ್ಸ್ ಆಗಿರುವುದಾಗಿ ನಂತದಲ್ಲಿ ಘೋಷಣೆ ಮಾಡಲಾಗಿತ್ತು. ಆರಂಭದಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಹೊರತುಪಡಿಸಿದರೆ ಮತ್ತಾವುದೇ ಅಪ್​ಡೇಟ್ ಸಿಕ್ಕಿಲ್ಲ. ಇದೀಗ  ಈಗ ಪ್ರಮೋಷನಲ್ ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ. 

 ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ.  ರಿಯಲ್‌ ಸ್ಟಾರ್‌ ಉಪೇಂದ್ರ ಯಾವಾಗಲೂ ಡಿಫರೆಂಟ್‌ ಅನ್ನೋದನ್ನು ಹಲವು ಬಾರಿ ನಿರೂಪಿಸಿದ್ದಾರೆ. ವಿವಾದಿತ ಮಾತನ್ನಾಡಿ ಸದ್ಯ ಭಾರಿ ಸುದ್ದಿಯಲ್ಲಿರುವ ಉಪೇಂದ್ರ ಅವರು ಸದ್ಯಕ್ಕೆ ರಾಜಕೀಯ ಸಿನಿಮಾ ಎರಡನ್ನೂ  ಬ್ಯಾಲೆನ್ಸ್‌ ಮಾಡುತ್ತಿದ್ದಾರೆ.  ಇದೀಗ UI ಚಿತ್ರದಲ್ಲಿಯೂ  ವಿಭಿನ್ನ ಪ್ರಯತ್ನ ಮಾಡಿರೋ ಉಪೇಂದ್ರ ಅವರು,  ಈ ಚಿತ್ರದ ನಿರ್ಮಾಪಕರಾದ ಶ್ರೀಕಾಂತ್‌ ಹಾಗೂ ನವೀನ್‌ ಮನೋಹರನ್‌ ಜೊತೆ 1:44 ನಿಮಿಷದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಅವರ ಡೈಲಾಗ್​ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಈ ಚಿತ್ರದಲ್ಲಿ ವಿಭಿನ್ನ ಪ್ರಯತ್ನ ಅನ್ನೋದಕ್ಕೆ ಕಾರಣವೂ ಇದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಡೋದು ಎಲ್ಲಾ ಚಿತ್ರಗಳಲ್ಲಿ ಮಾಮೂಲು. ಆದರೆ, ಅದನ್ನು ಬಿಡದೆ ನೇರವಾಗಿ ವಿಡಿಯೋ ರಿಲೀಸ್​ ಮಾಡಿದ್ದಾರೆ.

ಕರ್ನಾಟಕದ ಜನರೇ ವರ್ಲ್ಡ್ ಕ್ಲಾಸ್‌ : ಉಪೇಂದ್ರ Exclusive

ಹಾಗಿದ್ದರೆ ಈ ವಿಡಿಯೋದಲ್ಲಿ ಏನಿದೆ ನೋಡುವುದಾದರೆ, ಇದರಲ್ಲಿ ಉಪೇಂದ್ರ (Upendra) ಅವರ ಸಕತ್​ ಡೈಲಾಗ್​ಗಳು ಇದ್ದು, ಇವೆಲ್ಲವನ್ನೂ ಇವರು ಯಾರನ್ನು ಉದ್ದೇಶವಾಗಿ ಇಟ್ಟುಕೊಂಡು ಹೇಳುತ್ತಿದ್ದಾರೆ ಎಂದು ಫ್ಯಾನ್ಸ್​ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಎಂದರೆ ಇದು ಆರಂಭವಾಗುವುದು,  ನಿರ್ಮಾಪಕರಿಬ್ಬರು ಉಪ್ಪಿ ಮನೆಗೆ ಬರುವುದರೊಂದಿಗೆ.  ನವೀನ್‌ ಅವರೇ ಬನ್ನಿ, ಎಂತೆಂತದ್ದು ಮಾಡಿದಿವಿ ಗಾಂಧಿನಗರದಲ್ಲಿ ಇದ್ಯಾವ ದೊಡ್ಡ ವಿಷಯ, ಮಾತಾಡೋಣ ಬನ್ನಿ ಎಂದು ಶ್ರೀಕಾಂತ್‌ ಹಾಗೂ ನವೀನ್‌ ಮಾತನಾಡುತ್ತಾ ಕಾರಿನಿಂದ ಇಳಿದು ಉಪೇಂದ್ರ ಆಫೀಸ್‌ ಕಡೆ ಹೋಗುತ್ತಾರೆ. ಅಲ್ಲಿ ಉಪ್ಪಿ UI ಚಿತ್ರದ ಕೆಲಸದಲ್ಲಿ ತೊಡಗಿರುತ್ತಾರೆ. ನಿಮ್ಮೊಂದಿಗೆ ಮಾತನಾಡಬೇಕಿತ್ತು ಎಂದು ಉಪ್ಪಿಯನ್ನು ಹೊರ ಕರೆದು ಮೂವರೂ ಮಾತಿಗೆ ಕೂರುತ್ತಾರೆ. ನಂತರ ಡೈಲಾಗ್​ಗಳು ಶುರುವಾಗುತ್ತದೆ. 

ನಿರ್ಮಾಪಕ ಶ್ರೀಕಾಂತ್​ (Shreekanth) ಅವರು, ‘ಸಿನಿಮಾ ಸೆಟ್ಟೇರಿ ಒಂದೂವರೆ ವರ್ಷ ಕಳೆದಿದೆ. ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್ ಬಿಟ್ಟಿಲ್ಲ. ಜನರು ಬೈಯುತ್ತಿದ್ದಾರೆ’ ಎನ್ನುತ್ತಾರೆ. ಕೂಡಲೇ ಉಪೇಂದ್ರ ಅವರ ಡೈಲಾಗ್​ ಶುರುವಾಗುತ್ತದೆ.  ‘ಫಸ್ಟ್ ಲುಕ್ ಅಥವಾ ಟೀಸರ್ ಬಿಡೋ ಅವಶ್ಯಕತೆ ಇದೆಯೇ? ಒಂದು ನಿಮಿಷದ ಟೀಸರ್ ನೋಡಿ ಜನರು ನನ್ನ ಸಿನಿಮಾ ಹೇಗಿದೆ ಎಂದು ಹೇಳುತ್ತಾರಾ? ಸುಳ್ಳಿಗೆ ಹೈಪ್ ತರಬೇಕು, ಸತ್ಯಕ್ಕೆ ತಾನಾಗೇ ಹೈಪ್ ಬರುತ್ತದೆ’ ಎನ್ನುತ್ತಾರೆ. 

ಲಹರಿ ಫಿಲ್ಮ್ಸ್‌, ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ. ಅಂದಹಾಗೆ,  ‘ಯುಐ’ ಸಿನಿಮಾಗೆ ಕೆ.ಪಿ. ಶ್ರೀಕಾಂತ್​ ಮತ್ತು ಜಿ. ಮನೋಹರನ್​ ಅವರು ಬಂಡವಾಳ ಹೂಡಿದ್ದಾರೆ. 

ಐಶ್ವರ್ಯ-ಆಯುಷ್; ವಿವಾದದ ಬೆನ್ನಲೆ ಉಪೇಂದ್ರ ಮಕ್ಕಳ ಫೋಟೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!