ನಾನೂ ಕನ್ನಡದ ನಟನೇ, ಡಾ ರಾಜ್‌ಕುಮಾರ್ ಏನೆಂದು ನನಗೂ ಗೊತ್ತು: ಹೇಳಿದ್ರು ವಿಷ್ಣುವರ್ಧನ್!

By Shriram Bhat  |  First Published Nov 11, 2024, 9:01 PM IST

ಹಳೆಯ ಚರ್ಚೆಗೆ ಫುಲ್‌ಸ್ಟಾಪ್ ಇಡುವ ಕಾಲ ಬಂದಿದೆ.. ಡಾ ರಾಜ್‌ಕುಮಾರ್ ನಡೆ ಹಾಗೂ ವಿಷ್ಣುವರ್ಧನ್ ಅವರಾಡಿದ ನುಡಿ ಎಲ್ಲವೂ ಈಗ ಎಲ್ಲರಿಗೂ ಲಭ್ಯವಿದೆ. ಹಾಗಿದ್ದರೆ ಮ್ಯಾಟರ್ ಏನು ಎಂಬ ಕುತೂಹಲ ನಿಮಗಿದ್ದರೆ, ಈ ಸ್ಟೋರಿಯನ್ನು ತಪ್ಪದೇ ನೋಡಿ..


ಕನ್ನಡ ಚಿತ್ರರಂಗದಲ್ಲಿ ಡಾ ರಾಜ್‌ಕುಮಾರ್ (Dr Rajkumar) ಹಾಗು ಡಾ ವಿಷ್ಣುವರ್ಧನ್ (Dr Vishnuvardhan) ಅವರಿಬ್ಬರೂ ಮೇರು ನಟರು ಎಂಬುದು ಎಲ್ಲರಿಗೂ ಗೊತ್ತು. ಅವರಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದರು ಎಂದು ಒಂದು ವರ್ಗ ಹೇಳಿದ್ದರೆ ಇನ್ನೊಂದು ವರ್ಗ ಆ ಮಾತನ್ನು ಅಲ್ಲಗಳೆಯುತ್ತದೆ. ಅವರಿಬ್ಬರ ಮಧ್ಯೆ ಸಂಬಂಧ ಹಾಗಿತ್ತು ಹೀಗಿತ್ತು, ಸರಿಯಿರಲಿಲ್ಲ, ಮನಸ್ತಾಪವಿತ್ತು ಎನ್ನುವ ಚರ್ಚೆ ಕಳೆದ ಐವತ್ತು ವರ್ಷಗಳಿಂದಲೂ ಇದೆ. 

ಆದರೆ ಈಗ ಅಂತಹ ಎಲ್ಲಾ ಹಳೆಯ ಚರ್ಚೆಗೆ ಫುಲ್‌ಸ್ಟಾಪ್ ಇಡುವ ಕಾಲ ಬಂದಿದೆ. ಏಕೆಂದರೆ, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಸಾಕಷ್ಟು ಮಾಹಿತಿಗಳು, ಸುದ್ದಿಗಳು ಓಡಾಡುತ್ತಿವೆ. ಆ ಬಗ್ಗೆ ಡಾ ರಾಜ್‌ಕುಮಾರ್ ನಡೆ ಹಾಗೂ ವಿಷ್ಣುವರ್ಧನ್ ಅವರಾಡಿದ ನುಡಿ ಎಲ್ಲವೂ ಈಗ ಎಲ್ಲರಿಗೂ ಲಭ್ಯವಿದೆ. ಹಾಗಿದ್ದರೆ ಮ್ಯಾಟರ್ ಏನು ಎಂಬ ಕುತೂಹಲ ನಿಮಗಿದ್ದರೆ, ಈ ಸ್ಟೋರಿಯನ್ನು ತಪ್ಪದೇ ನೋಡಿ, ಜೊತೆಗೆ ಕೊನೆಯವರೆಗೂ ಓದಿ..

Latest Videos

undefined

ಸತ್ಯ ಸಾಯೋದಿಲ್ಲ ಒಂದಿನ ಹೊರಗೆ ಬರುತ್ತೆ ಅಂತಾರೆ; ಡಾ ರಾಜ್‌-ವಿಷ್ಣು ವಿಷ್ಯದಲ್ಲೂ ಅದು ನಿಜವಾಗಿದೆ!

ಇಲ್ಲಿ ಡಾ ವಿಷ್ಣುವರ್ಧನ್ ಆಡಿರುವ ಮಾತುಗಳು ಯಥಾವತ್ತಾಗಿವೆ. 'ಯಶಸ್ಸಿಗೆ ಚಿತ್ರರಂಗ ಒಂದು ಪ್ರಬಲ ಮಾಧ್ಯಮ. ಈ ಮಾಧ್ಯಮದಲ್ಲಿ ನೀವು ನಿಮ್ಮ ಶಕ್ತಿ ಮತ್ತು ಯಶಸ್ಸನ್ನು ವಿವಿಧ ಬಗೆಯ ಪಾತ್ರಗಳಿಂದ ಸವಿಯಬಹುದು ಮತ್ತು ಪರೀಕ್ಷಿಸಿಕೊಳ್ಳಬಹುದು. ಆ ಮೂಲಕ ಗೆಲುವನ್ನುಸಾಧಿಸಬಹುದು. ಅದಕ್ಕೆ ಜ್ವಲಂತ ಸಾಕ್ಷಿ ಡಾ ರಾಜ್‌ಕುಮಾರ್. ನಮಗೆಲ್ಲರಿಗೂ ಅವರು ಅಚ್ಚುಮೆಚ್ಚು. 

ಅವರನ್ನು ಆರಾಧಿಸುತ್ತೇವೆ. ಅವರನ್ನು ಅನುಸರಿಸುತ್ತೇವೆ. ಏಕೆಂದರೆ, ಕನ್ನಡ ಚಿತ್ರರಂಗದಲ್ಲಿ ಮತ್ಯಾರು ಅಂತಹ ಅಪರೂಪದ ಸಾಧನೆ ಮಾಡಲು ಸಾಧ್ಯ? ಆ ಮಟ್ಟಿಗೆ ವರ್ಚಸ್ಸು ಗಳಿಸಲು ಹಾಗೂ ದೀರ್ಘಾವಧಿಯವರೆಗೆ ಅದನ್ನು ಉಳಿಸಿಕೊಳ್ಳಲು ಸಾಧ್ಯ? ಅಣ್ಣಾವ್ರ ಮಟ್ಟಕ್ಕೆ ಯಾರು ನಿಲ್ಲಲು ಸಾಧ್ಯ? ಅವರ ಜನಪ್ರಿಯತೆ ಹಾಗು ಅವರ ಅಭಿನಯವನ್ನು ನಾವು ಬೇರೆಯವರಲ್ಲಿ ಕಾಣಲು ಸಾಧ್ಯವೇ ಇಲ್ಲ. ಅವರಂತೆ ಆಗುವುದು ತುಂಬಾ ತುಂಬಾನೇ ಕಷ್ಟ! 

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

ನಾನೂ ಕೂಡ ವೃತ್ತಿಪರ ನಟನಾಗಿ ಇದೇ ಚಿತ್ರರಂಗದಲ್ಲಿ ಇರುವುದರಿಂದ ನನಗೆ ಡಾ ರಾಜ್‌ಕುಮಾರ್ ಅವರಂತೆ ಯಾರೇ ಆದರೂ ಸಾಧನೆ ಮಾಡುವುದು ಎಷ್ಟು ಕಷ್ಟ ಎಂಬುದು ಸರಿಯಾಗಿ ಅರ್ಥವಾಗುತ್ತದೆ' ಎಂದಿದ್ದಾರೆ ಕನ್ನಡದ 'ಸಾಹಸಸಿಂಹ' ಖ್ಯಾತಿಯ ನಟ  ವಿಷ್ಣುವರ್ಧನ್. ವಿಷ್ಣು ಅವರ ಈ ಮಾತುಗಳನ್ನು ನೋಡಿದರೆ, ಡಾ ರಾಜ್‌ ಹಾಗೂ ವಿಷ್ಣು ಅವರಿಬ್ಬರೂ ಪರಸ್ಪರ ಗೌರವ ಹೊಂದಿದ್ದರು ಹಾಗೂ ಅನ್ಯೋನ್ಯವಾಗಿದ್ದರು ಎಂಬುದು ಅರ್ಥವಾಗುತ್ತದೆ. 

ಅಷ್ಟೇ ಅಲ್ಲ, ಕೆಲವರು ಎಲ್ಲ ಕಡೆಗಳಲ್ಲೂ ಹುಳುಕು ಹುಡುಕುವವರು ಇದ್ದೇ ಇರುತ್ತಾರೆ. ಇಲ್ಲಂತೂ ನಟ ವಿಷ್ಣುವರ್ಧನ್ ಸ್ವತಃ ಹೇಳಿರುವ ಮಾತುಗಳಿಂದ ಅವರಿಗೆ ಅಣ್ಣಾವ್ರು ಡಾ ರಾಜ್‌ ಮೇಲೆ ಭಾರೀ ಅಭಿಮಾನವಿತ್ತು ಎಂಬ ಸ್ಪಷ್ಟ ಸಂದೇಶ ಸಿಗುತ್ತದೆ. ಜೊತೆಗೆ, ಅವರಂತೆ ಬೇರೆಯವರು ಸಾಧನೆ ಮಾಡುವುದು ಕೂಡ ಕಷ್ಟಸಾಧ್ಯ ಎಂಬ ಅರಿವಿತ್ತು. ತಾವೂ ಒಬ್ಬರು ನಟರಾಗಿ ತಮ್ಮಗೆ ಡಾ ರಾಜ್‌ ಸಾಧನೆ ಅಚ್ಚರಿ ಹುಟ್ಟಿಸುತ್ತದೆ ಎಂಬುದನ್ನು ನಟ ವಿಷ್ಣುವರ್ಧನ್ ಅವರು ಹೇಳಿದ್ದಾರೆ. 

ಮುಚ್ಚುಮರೆ ಇಲ್ಲದೇ ನಟ ದರ್ಶನ್ ಕೇಸ್ ಬಗ್ಗೆ ಮುಕ್ತವಾಗಿ ಮಾತಾಡಿದ ಹಿರಿಯಣ್ಣ ಶಿವಣ್ಣ!

ಇನ್ನು ಡಾ ರಾಜ್‌ಕುಮಾರ್ ಬಗ್ಗೆಯಂತೂ ಮಾತನಾಡುವ ಹಾಗೇ ಇಲ್ಲ. ಏಕೆಂದರೆ, ಅವರೊಬ್ಬ ಮಾನವೀಯತೆಯ ಸಾಕಾರ ಮೂರ್ತಿ ಎಂದೇ ಇಡೀ ಕರುನಾಡ ಅವರನ್ನು ಕೊಂಡಾಡುತ್ತದೆ. ಅಂದಮೇಲೆ, ಅವರು ಯಾರನ್ನಾದರೂ ದ್ವೇಷಿಸಲು ಹೇಗೆ ಸಾಧ್ಯ? ಒಮ್ಮೆ ಅವರು ಯಾರ ಬಗ್ಗೆಯಾದರೂ ಮನಸ್ತಾಪ ಹೊಂದಿದ್ದರೆ ಅವರನ್ನು ಹೀಗೆ ಪರಿಪೂರ್ಣ ವ್ಯಕ್ತಿ ಎಂದು ಕರೆಯಲು ಸಾಧ್ಯವೇ? ಆದ್ದರಿಂದ ಇಬ್ಬರೂ ಮಾನವೀಯತೆಯ ಮಹಾಮೇಧಾವಿಗಳು. ಅಂದಮೇಲೆ ಅವರಿಬ್ಬರೂ ಅನ್ಯೋನ್ಯವಾಗಿರದೇ ಬೇರೆ ಹೇಗಿರಲು ಸಾಧ್ಯ?!

click me!