
ನಟಿ ಮೇಘನಾ ರಾಜ್ ಅಮ್ಮ, ಹಿರಿಯ ನಟಿ ಪ್ರಮಿಳಾ ಜೋಷಾಯ್ ಅವರು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಬಗ್ಗೆ ಮಾತನ್ನಾಡಿದ್ದಾರೆ. ದೀಪು ಅಂದ್ರೆ ಸುದೀಪು.. ನಂಗೆ ದೀಪುನೇ ಅವ್ನು.. ಆತ ಚಿತ್ರರಂಗಕ್ಕೆ ಬರೋದಕ್ಕೂ ಮೊದಲೇ ದೀಪು ಹಾಗೂ ಅವ್ನ ಫ್ಯಾಮಿಲಿ ನಂಗೆ ಕ್ಲೋಸ್ ಆಗಿನೇ ಇದ್ರು.. ಆವತ್ತಿಂದ ಅವ್ನು ನಮ್ಮಿಬ್ರನ್ನ ಅಕ್ಕ-ಭಾವಾ ಅಂತ ಕರಿತಾ ಇರೋನು ಈ ಕ್ಷಣದ ತನಕನೂ ಹಾಗೇ ಅಕ್ಕ-ಭಾವ ಅಂತಾನೇ ಕರಿಯೋದು!
ದೀಪು ಎಷ್ಟು ದೊಡ್ಡವನಾದ್ರೂ ಇಷ್ಟು ದೊಡ್ಡ ಸ್ಟಾರ್ ಅಗಿ ಬೆಳೆದ್ರೂ ಅವ್ನು ಯಾವತ್ತಿಗೂ ಸ್ವಲ್ಪನೂ ದುರಂಹಕಾರ ತೋರ್ಸಿಲ್ಲ. ಇದನ್ನು ಇವತ್ತು ನಾನು ಇಡೀ ಕರ್ನಾಟಕದ ಮುಂದೆ ಹೇಳ್ತೀನಿ..' ದೀಪುಗೆ ಯಾವತ್ತೂ ಆ ದೇವರ ಆಶೀರ್ವಾದ, ಅವ್ನ ತಂದೆ-ತಾಯಿ ಆಶೀರ್ವಾದ ಹಾಗೂ ಅವ್ನ ತಂದೆ ಹಾಕಿದ್ದ ಗುರಿ ಮುಟ್ತಾ ಬಂದಿದಾನೆ ನೋಡಿ, ಅದಕ್ಕೆ ನಾವೆಲ್ರೂ ಸಂತೋಷ ಪಡಬೇಕು..'ಎಂದಿದ್ದಾರೆ. ಅವರ ಮಾತು ಕೇಳಿ ನಟ ಸುದೀಪ್ ಅವರು ಕಣ್ಣೀರು ಒರೆಸಿಕೊಂಡಿದ್ದಾರೆ.
ನಟ ಶಂಕರ್ ನಾಗ್ ಮ್ಯಾಜಿಕಲ್ ಮಂತ್ರದ ಗುಟ್ಟು ರಟ್ಟು ಮಾಡಿದ ಅರುಂಧತಿ ನಾಗ್!
ನಟ ಸುದೀಪ್ ಕುಟುಂಬ ಹಾಗೂ ಸುಂದರ್ ರಾಜ್ ಕುಟುಂಬ ತುಂಬಾ ಆಪ್ತರು ಎನ್ನಲಾಗಿದೆ. ಅದೇ ಕಾರಣಕ್ಕೆ ಮೈಕ್ ಹಿಡಿದು ಪ್ರಮೀಳಾ ಜೋಷಾಯ್ ಅವರು ಆ ಗುಟ್ಟನ್ನು ಇಡೀ ಕರ್ನಾಟಕಕ್ಕೇ ರಟ್ಟು ಮಾಡಿದ್ದಾರೆ. ಪಕ್ಕದಲ್ಲೆ ನಿಂತಿದ್ದ ದೀಪು (ಕಿಚ್ಚ ಸುದೀಪ್) ಹೊಗಳಿಕೆ ಕೇಳಿ ಮಜುಗರಕ್ಕೋ ಅಥವಾ ದೊಡ್ಡವರು ಮಾತನ್ನಾಡುತ್ತಿದ್ದಾರೆ ಎಂಬ ಗೌರವಕ್ಕೋ ಎಂಬಂತೆ ತಲೆ ತಗ್ಗಿಸಿ ನಿಂತಿದ್ದರು. ಬಳಿಕ ತಮ್ಮ ಕನ್ನಡಕ ತೆಗೆದುಕೊಂಡು ಕಣ್ಣೀರು ಒರೆಸಿಕೊಂಡಿದ್ದು ಕಂಡುಬಂತು.
ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ 'ರಾಜಾಹುಲಿ' ಚಿತ್ರದಲ್ಲಿ ನಟಿಸಿದ್ದ ನಟಿ ಮೇಘನಾ ರಾಜ್ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಪಕ್ಕದ ರಾಜ್ಯ ಕೇರಳ ಸಿನಿಮಾರಂಗದಲ್ಲಿ. ಕಾರಣ, ಪ್ರಮಿಳಾ ಜೋಷಾಯ್ ತವರು ಕೇರಳ. ನಟಿಯಾಗಿ ಪ್ರಮೀಳಾ ಜೋಷಾಯವ್ ಅವರು ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ನಟ ಸುಂದರ್ ರಾಜ್ ಅವರನ್ನು ಮದುವೆಯಾಗಿರುವ ಪ್ರಮೀಳಾ ಅವರೀಗ ಅಪ್ಪಟ ಕನ್ನಡತಿ. ಈ ಸಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮಗಳೇ ಮೇಘನಾ ರಾಜ್.
ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.