ಇಂದು ವೈರಲ್ ಆಗ್ತಿದೆ ನಟ ವಿಷ್ಣುವರ್ಧನ್ ಅಂದು 'ಅವರೆಲ್ಲರ' ಬಗ್ಗೆ ಹೇಳಿದ್ದ ಮಾತು, ಯಾಕೋ...!?

Published : Feb 19, 2025, 07:43 PM ISTUpdated : Feb 19, 2025, 08:01 PM IST
ಇಂದು ವೈರಲ್ ಆಗ್ತಿದೆ ನಟ ವಿಷ್ಣುವರ್ಧನ್ ಅಂದು 'ಅವರೆಲ್ಲರ' ಬಗ್ಗೆ ಹೇಳಿದ್ದ ಮಾತು, ಯಾಕೋ...!?

ಸಾರಾಂಶ

ಕನ್ನಡದ ಮೇರುನಟ ವಿಷ್ಣುವರ್ಧನ್, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರೈತರು, ಯೋಧರು, ಶಿಕ್ಷಕರ ಬಗ್ಗೆ ಕೃತಜ್ಞತೆ, ಗೌರವ ಇರಬೇಕೆಂದು ಅವರು ಹೇಳಿದ್ದರು. ಜೀವನದಲ್ಲಿ ಈ ಮೂವರ ಪಾತ್ರ ಮಹತ್ವದ್ದು ಎಂದಿದ್ದಾರೆ. ಸಮಾಜಮುಖಿ ಚಿಂತನೆಗಳನ್ನು ಹೊಂದಿದ್ದ ವಿಷ್ಣು, ಹೆಣ್ಣುಮಕ್ಕಳನ್ನು ದತ್ತು ತೆಗೆದು ಬೆಳೆಸಿದರು. ಅಂಬರೀಶ್ ಜೊತೆಗಿನ ಅವರ ಸ್ನೇಹ ಎಲ್ಲರಿಗೂ ತಿಳಿದಿದೆ.

ಕನ್ನಡ ಚಿತ್ರರಂಗದ ಮೇರುನಟರ ಬಗ್ಗೆ ಮಾತನ್ನಾಡುವಾಗ ಡಾ ವಿಷ್ಣುವರ್ಧನ್ (Vishnuvardhan) ಹೆಸರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಏಕೆಂದರೆ, ಬರೋಬ್ಬರಿ ಇನ್ನೂರಕ್ಕಿಂತ ಹೆಚ್ಚು ಸಿನಿಮಾಗಳನ್ನು ಮಾಡಿದ್ದೂ ಅಲ್ಲದೇ, ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಟ ಡಾ ವಿಷ್ಣುವರ್ಧನ್. 

ಇಂಥ ನಟ ಯಾವತ್ತೋ ಸಂದರ್ಶನಗಳಲ್ಲಿ ಹೇಳಿದ್ದ ಮರೆಯಲಾಗದ ಮಾತುಗಳು ಇಂದು ಶಾರ್ಟ್ಸ್ ಮೂಲಕ ಬಹಳಷ್ಟು ವೈರಲ್ ಆಗ್ತಿವೆ. ಹಾಗಿದ್ದರೆ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಹೇಳಿದ್ದೇನು? ಇಲ್ಲಿದೆ ನೋಡಿ ಡೀಟೇಲ್ಸ್‌.. ರೈತರ ಬಗ್ಗೆ ಒಬ್ಬ ಸಾಮಾನ್ಯ ವ್ಯಕ್ತಿಗೆ ಇರಬೇಕಾಗಿದ್ದು ಕೃತಜ್ಞತೆ, ಗೌರವ.. ಅದೇ ತರ ನಮ್ಮ ದೇಶದ ಯೋಧರ ಬಗ್ಗೆ ಕೂಡ ನಮಗೆ ಗೌರವ ಇರ್ಬೇಕು.. ಹಾಗೇನೇ ನಮ್ಮ ಶಿಕ್ಷಕರು.. ಜೀವನದಲ್ಲಿ ಗುರುಗಳ ಪಾತ್ರ ಕೂಡ ತುಂಬಾ ಮಹತ್ವದ್ದು..  

ಅಣ್ಣಾವ್ರ 'ಶಬ್ಧವೇದಿ' ವಿವಾದ ಗೊತ್ತೇ ಇದೆ, ಗೊತ್ತಿಲ್ಲದ ಬೇರೆ ಕೆಲವು ರಹಸ್ಯಗಳು ಇಲ್ಲಿವೆ..!

ಈ ಮೂವರೂ ಮಹತ್ವದ ಪಾತ್ರ ವಹಿಸ್ತಾರೆ ಒಬ್ಬರ ಜೀವನದಲ್ಲಿ.. ಈ ಮೂವರನ್ನೂ ನಮ್ಮ ಜೀವಿತ ಕಾಲದಲ್ಲಿ ಪೂರ್ತಿ ಜ್ಞಾಪಕ ಇಟ್ಕೋಬೇಕು..' ಎಂದಿದ್ದಾರೆ ವಿಷ್ಣು. ಅವರ ಸಿನಿಮಾಗಳಲ್ಲಿ, ಪ್ರಮುಖವಾಗಿ ನಾಗರಹಾವು ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳ ಬಗ್ಗೆ ತುಂಬಾ ಸಂದೇಶಗಳಿವೆ. ನಾಗರಹಾವು ಚಿತ್ರದಲ್ಲಿ 'ಚಾಮಯ್ಯ ಮೇಸ್ಟ್ರು' ಪಾತ್ರವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. 

ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ಕೂಡ ನಟ ವಿಷ್ಣುವರ್ಧನ್ ಅವರು ಬಹಳಷ್ಟು ಮೌಲ್ಯಗಳನ್ನು ಫಾಲೋ ಮಾಡುತ್ತಿದ್ದರು. ಅವರು ತಮ್ಮ ಪತ್ನಿ ಭಾರತಿಗೆ ಯಾವತ್ತೂ ಬಹವಚನದಲ್ಲೇ ಸಂಬೋಧಿಸುತ್ತಿದ್ದರು. ಪತ್ನಿ ಭಾರತಿ ಅವರನ್ನು ಪತಿ ವಿಷ್ಣು ಅವರು 'ಮಾಯಿ' ಎನ್ನುತ್ತಿದ್ದರಂತೆ, ಮರಾಠಿಯಲ್ಲಿ ಮಾಯಿ ಎಂದರೆ 'ತಾಯಿ' ಎಂದರ್ಥ, ಅಷ್ಟರಮಟ್ಟಿಗೆ ಅವರು ಮಹಿಳೆಯರಿಗೆ ಗೌರವ ಕೊಡುತ್ತಿದ್ದರು. 

ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?

ನಟ ವಿಷ್ಣುವರ್ಧನ್ ಅವರು ಬಹಳಷ್ಟು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ, ಎರಡು ಹೆಣ್ಣುಮಕ್ಕಳನ್ನು ದತ್ತು ಪಡೆದು ಸಾಕಿ, ಮದುವೆ ಕೂಡ ಮಾಡಿಕೊಟ್ಟಿದ್ದಾರೆ. ಅವರ ಮನೆಗೆ ಯಾರೇ ಬಂದರೂ ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದರು ವಿಷ್ಣುವರ್ಧನ್. ಇನ್ನು, ನಟ ಅಂಬರೀಷ್-ವಿಷ್ಣುವರ್ಧನ್ ಆತ್ಮೀಯ ಸ್ನೇಹವಂತೂ ಇಡೀ ಕರ್ನಾಟಕಕ್ಕೆ ಗೊತ್ತು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅರ್ಜುನ್ ಜನ್ಯಾ ನಿರ್ದೇಶನ, ಶಿವಣ್ಣ-ಉಪೇಂದ್ರ ಜೋಡಿಯ '45' ಟ್ರೈಲರ್ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೇಳಿದ್ದೇನು?
BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ Top 5 ಸ್ಪರ್ಧಿಗಳಿವರು; ಗೆಲ್ಲೋರಾರು?