ಟೈಗರ್‌ ಟಾಕೀಸ್‌ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್‌ ಪ್ರಭಾಕರ್‌;ಲಂಕಾಸುರ ಟೀಸರ್‌ ಬಿಡುಗಡೆ

By Kannadaprabha NewsFirst Published Jul 8, 2022, 9:32 AM IST
Highlights

ಮೋದ್‌ ಕುಮಾರ್‌ ನಿರ್ದೇಶನದ, ವಿನೋದ್‌ ಪ್ರಭಾಕರ್‌ ನಟನೆಯ ‘ಲಂಕಾಸುರ  ‘ಟೈಗರ್‌ ಟಾಕೀಸ್‌’ ಸಂಸ್ಥೆಯಲ್ಲಿ ಮೂಡಿ ಬರುತ್ತಿದೆ.

ವಿನೋದ್‌ ಪ್ರಭಾಕರ್‌ ತಮ್ಮ ಪತ್ನಿ ನಿಶಾ ವಿನೋದ್‌ ಪ್ರಭಾಕರ್‌ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಅದರ ಹೆಸರು ‘ಟೈಗರ್‌ ಟಾಕೀಸ್‌’. ಈ ಸಂಸ್ಥೆಯ ಚೊಚ್ಚಲ ಸಿನಿಮಾವಾಗಿ ಪ್ರಮೋದ್‌ ಕುಮಾರ್‌ ನಿರ್ದೇಶನದ, ವಿನೋದ್‌ ಪ್ರಭಾಕರ್‌ ನಟನೆಯ ‘ಲಂಕಾಸುರ’ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್‌ ಮತ್ತು ಸಂಸ್ಥೆಯ ಲೋಗೋವನ್ನು ಚಿತ್ರತಂಡ ಲೋಕಾರ್ಪಣೆಗೊಳಿಸಿದೆ.

ಚಿತ್ರತಂಡ ಮತ್ತು ವಿನೋದ್‌ ಪ್ರಭಾಕರ್‌ರನ್ನು ಹರಸಲು ರವಿಚಂದ್ರನ್‌ ಆಗಮಿಸಿದ್ದರು. ಪರಂಪರೆ ಮತ್ತು ಹೊಸ ಜನರೇಷನ್‌ ಕುರಿತು ಅವರು ಮಾತನಾಡಿದರು. ‘ನಾನು ಪ್ರಭಾಕರ್‌ ತೊಡೆ ಮೇಲೆ ಕುಳಿತು ಬೆಳೆದವನು. ಅವರಿಲ್ಲದೆ ನನ್ನ ಸಿನಿಮಾ ಇರುತ್ತಿರಲಿಲ್ಲ. ನನಗೆ ಫೈಟ್‌ ಮಾಡುವುದನ್ನು ಕಲಿಸಿದ್ದೇ ಅವರು. ನನ್ನ ಅಪ್ಪನಿಗಂತೂ ಪ್ರಭಾಕರ್‌ ಅಂದ್ರೆ ತುಂಬಾ ಇಷ್ಟ. ಅವರು ಬೇರೆ ಎಷ್ಟೇ ಪಾತ್ರ ಮಾಡಿದ್ದರೂ ಅವರು ಯಾವತ್ತಿಗೂ ಪ್ರೇಮಲೋಕದ ಪ್ರಿನ್ಸಿಪಾಲ್‌. ಈಗ ವಿನೋದ್‌ ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ನನ್ನ ಮಕ್ಕಳು ಮಾಡಿದಷ್ಟೇ ನನಗೆ ಖುಷಿ ಇದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡಿ. ಉತ್ಸಾಹದ ಹಿಂದೆ ಒಳ್ಳೆ ಉದ್ದೇಶ ಇದ್ದರೆ ಖಂಡಿತಾ ಉತ್ಸವ ಮಾಡಬಹುದು. ನನ್ನ ಹಾರೈಕೆ ಸದಾ ಇರುತ್ತದೆ. ಲಂಕಾಸುರ ಟೀಸರ್‌ನಲ್ಲಿ ಮುದ್ದಾಗಿ ಕಾಣಿಸುತ್ತೀಯಾ’ ಎಂದರು.

Latest Videos

ವಿನೋದ್‌ ಪ್ರಭಾಕರ್‌ ಖುಷಿಯಲ್ಲಿದ್ದರು. ಭಾವನೆಗಳು ಮಾತುಗಳನ್ನು ನುಂಗಿ ಹಾಕುತ್ತಿದ್ದವು. ‘ನಾನು ಇಲ್ಲಿವರೆಗೂ ಬರುವುದಕ್ಕೆ ತಂದೆಯೇ ಕಾರಣ. ಒಂದು ಹೆಜ್ಜೆ ಮುಂದೆ ಬರಲು ಸಹಕರಿಸಿದ ಎಲ್ಲರಿಗೂ ಧನ್ಯವಾದ’ ಎಂದರು. ನಿಶಾ, ‘ನನ್ನ ಯಜಮಾನರಿಗೆ ಇಷ್ಟುದಿನ ತೋರಿಸಿದ ಪ್ರೀತಿ ಮುಂದೆಯೂ ತೋರಿಸಿ’ ಎಂದರು.

ಹೀರೋಯಿನ್‌ಗಿಂತ ಝೈದ್‌ ಚೆನ್ನಾಗಿ ಕಾಣಿಸ್ತಿದ್ದಾನೆ:ಕಾಲೆಳೆದ ವಿನೋದ್ ಪ್ರಭಾಕರ್ ವೈರಲ್ ವಿಡಿಯೋ

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೇವರಾಜ್‌, ‘ನಮ್ಮದು 40 ವರ್ಷಗಳ ಬಾಂಧವ್ಯ. ಪ್ರಭಾಕರ್‌ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರು. ನನ್ನ ಬಾಂಧವ್ಯ ಚಿತ್ರದಲ್ಲಿ ನಾನು ವಿಲನ್‌, ಅವರು ಹೀರೋ. ಫೈಟಿಂಗ್‌ಗೆ ಬೇಕಾದ ಫುಟ್‌ವರ್ಕ್ ಕಲಿಸಿಕೊಟ್ಟಿದ್ದೇ ಅವರು. ವಿನೋದ್‌ ಏನು ಕೇಳಿದರೂ ನಾನು ಇಲ್ಲ ಎನ್ನಲಾರೆ. ಡಾನ್‌ ಪಾತ್ರ ಮಾಡಿದ್ದೇನೆ. ವಿನೋದ ಅವನದೇ ಆದ ಒಂದು ಜಾಗ ಮಾಡಿಕೊಂಡಿದ್ದಾನೆ. ಅವನ ಟೈಗರ್‌ ಟಾಕೀಸ್‌ ಪ್ರತಿಷ್ಠಿತ ಬ್ಯಾನರ್‌ ಆಗಲಿ’ ಎಂದು ಹಾರೈಸಿದರು.

ಹಿರಿಯ ನಟ ಉಮೇಶ್‌, ಲಂಕಾಸುರ ನಿರ್ದೇಶಕ ಪ್ರಮೋದ್‌ ಕುಮಾರ್‌ ಡಿಎಸ್‌, ಅಭಿಷೇಕ್‌ ಅಂಬರೀಶ್‌ ನಟ ರವಿಶಂಕರ್‌, ಡಾ.ಶಮಿತಾ ಮಲ್ನಾಡ್‌, ನಟಿಯರಾದ ಪಾರ್ವತಿ ಅರುಣ್‌, ಆದ್ಯ ಪ್ರಿಯಾ, ಛಾಯಾಗ್ರಾಹಕ ಸುಜ್ಞಾನ್‌, ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ, ಡಿಫರೆಂಟ್‌ ಡ್ಯಾನಿ, ಅರ್ಜುನ್‌ ಮಾಸ್ಟರ್‌, ಬಲರಾಜೇವಾಡಿ ಇದ್ದರು.

click me!