ರಕ್ತಸಿಕ್ತ 'ಪೆಪೆ' ಚಿತ್ರೀಕರಣ ಮುಕ್ತಾಯ: ವಿನಯ್ ರಾಜ್‌ಕುಮಾರ್ ದರ್ಶನ ಯಾವಾಗ?

Published : Nov 23, 2022, 05:28 PM IST
ರಕ್ತಸಿಕ್ತ 'ಪೆಪೆ' ಚಿತ್ರೀಕರಣ ಮುಕ್ತಾಯ: ವಿನಯ್ ರಾಜ್‌ಕುಮಾರ್ ದರ್ಶನ ಯಾವಾಗ?

ಸಾರಾಂಶ

ವಿನಯ್ ರಾಜ್ ಕುಮಾರ್ ನಟನೆಯ ಪೆಪೆ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ.  

ಸ್ಯಾಂಡಲ್ ವುಡ್ ನಟ, ಡಾ.ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪೆಪೆ’. ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರದ ಟೀಸರ್ ಝಲಕ್ ಕಂಡು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಸಾಕಷ್ಟು ಉತ್ತಮ ರೆಸ್ಪಾನ್ಸ್ ಕೂಡ ಟೀಸರ್ ಪಡೆದುಕೊಂಡಿತ್ತು. ಆರಂಭದಿಂದಲೂ ಸಿನಿರಸಿಕರಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ‘ಪೆಪೆ’ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಾಗಿದೆ. 

ವಿನಯ್ ರಾಜ್ ಕುಮಾರ್ ನಟನೆಯ ಪೆಪೆ ಶ್ರೀಲೇಶ್ ಎಸ್ ನಾಯರ್ ನಿರ್ದೇಶನಲ್ಲಿ ಮೂಡಿ ಬಂದಿದ್ದು ಇದೀಗ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇಷ್ಟು ದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಸಕಲೇಶಪುರದಲ್ಲಿ ನಡೆದ ಕ್ಲೈಮ್ಯಾಕ್ಸ್ ಸೀನ್ ಶೂಟಿಂಗ್ ಬಳಿಕ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ. ಸಾಹಸ ನಿರ್ದೇಶಕ ರವಿವರ್ಮಾ ಕಂಪೋಸ್ ಮಾಡಿದ ಕ್ಲೈಮ್ಯಾಕ್ಸ್ ಫೈಟಿಂಗ್ ಸೀನ್ ಸೆರೆ ಹಿಡಿಯುವ ಮೂಲಕ 'ಪೆಪೆ' ಚಿತ್ರೀಕರಣಕ್ಕೆ ಶುಭಂ ಹೇಳಲಾಗಿದೆ. 

ಆರಂಭದಿಂದ ಒಂದೇ ರೀತಿ ಸಿನಿಮಾಗಳಿಗೆ ಮೊರೆ ಹೋಗದೇ ಪ್ರತಿ ಸಿನಿಮಾದಲ್ಲೂ ವಿಭಿನ್ನತೆ ಕಾಪಾಡಿಕೊಂಡು ಬರ್ತಿರುವ ವಿನಯ್ ರಾಜ್ ಕುಮಾರ್ ಚಿತ್ರದಲ್ಲಿ ಗ್ಯಾಂಗ್ ಲೀಡರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್, ಪೋಸ್ಟರ್ ಝಲಕ್ ನಲ್ಲಿ ವಿನಯ್ ಕಂಡು ದೊಡ್ಮನೆ ಅಭಿಮಾನಿಗಳು, ಸಿನಿರಸಿಕರು ಥ್ರಿಲ್ ಆಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

Gandhada Gudi ಗಂಧದ ಗುಡಿ ನೋಡಿದರೆ ಚಿಕ್ಕಪ್ಪ ಜೊತೆಯಲ್ಲಿಯೇ ಇದ್ದಾರೆ ಅನಿಸುತ್ತೆ

ಪೆಪೆ ಪಕ್ಕಾ ಮಾಸ್ ಸಿನಿಮಾವಾಗಿದೆ. ಮಲೆನಾಡಿನ ಗ್ಯಾಂಗ್‌ಸ್ಟರ್ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ನಲ್ಲಿ ವಿನಯ್ ರಾಜ್ ಕುಮಾರ್ ರಕ್ತಸಿಕ್ತವಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ವಿನಯ್ ಮಾಸ್ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದು ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಕಾಯುತ್ತಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. 

ಚಿತ್ರದಲ್ಲಿ ಮೆದಿನಿ ಕೆಳಮನಿ, ಯಶ್ ಶೆಟ್ಟಿ, ಕಾಜಲ್ ಕುಂದರ್, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್, ಬಾಲಾ ರಾಜ್ವಾಡಿ ಒಳಗೊಂಡ ತಾರಾಬಳಗವಿದೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕೊಡಗು, ಸಕಲೇಶಪುರದಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಚಿತ್ರವನ್ನು ಉದಯ್ ಮತ್ತು ಶ್ರೀರಾಮ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. 

ಕುಟುಂಬದ ಜೊತೆ ಪುನೀತ್ ರಾಜ್‌ಕುಮಾರ್ ಪಾರ್ಟಿ; ಹಳೆ ವಿಡಿಯೋ ವೈರಲ್!

2018ರಲ್ಲಿ ತೆರೆಕಂಡ ಅನಂತು v/s ನುಸ್ರುತ್ ಸಿನಿಮಾ ಬಳಿಕ ವಿನಯ್ ರಾಜ್ ಕುಮಾರ್ ಯಾವುದೇ ಸಿನಿಮಾ ತೆರೆಕಂಡಿಲ್ಲ. 'ಪೆಪೆ' ಜೊತೆಗೆ 'ಗ್ರಾಮಾಯಣ', 'ಅದೊಂದಿತ್ತು ಕಾಲ' ಸಿನಿಮಾಗಳಲ್ಲೂ ವಿನಯ್ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಪೆಪೆ ಮುಂದಿನ ವರ್ಷ ತೆರೆಮೇಲೆ ಬರಲಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?