ಚಾಕೋಲೇಟ್ ಬಾಯ್ ವಿಜಯ್ ರಾಘವೇಂದ್ರ ಮತ್ತು ನಟಿ ಸ್ಪಂದನಾ ಲವ್ ಸ್ಟೋರಿ ಎಲ್ಲರಿಗೂ ಸಖತ್ ಇಷ್ಟವಾಗುತ್ತದೆ. ಆದರೆ ಅದೆಷ್ಟೋ ಜನರಿಗೆ ಗೊತ್ತಿಲ್ಲ ಅದು ಲವ್ ಅಲ್ಲ ಅರೇಂಜ್ಡ್ ಎಂದು.....
ಕನ್ನಡ ಚಿತ್ರರಂಗದ ಚಾಕೋಲೇಟ್ ಬಾಯ್ ವಿಜಯ್ ರಾಘವೇಂದ್ರ ಮತ್ತು ಪತ್ನಿ ಸ್ಪಂದನಾ ಅಂದ್ರೆ ಸಿನಿ ಸ್ನೇಹಿತರಿಗೆ ಒಂದು ರೀತಿ ಅಚ್ಚುಮೆಚ್ಚು. ಇಬ್ರು ಸಖತ್ ಸಿಂಪಲ್ ಹಂಬಲ್ ಹಾಗೂ ಕ್ಯೂಟ್ ಕಪಲ್ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಅಲ್ಲದೆ ವಿಜಯ್ ಯಾವ ಕಾರ್ಯಕ್ರಮದಲ್ಲಿದ್ದರೂ ಲವ್ ಸ್ಟೋರಿ ಹಾಡು ಕೇಳಿದರೂ ಪತ್ನಿಯನ್ನು ನೆನಪಿಸಿಕೊಳ್ಳುತ್ತಿದ್ದರು. ಆದರೆ ಇವರಿಬ್ಬರು ಲವ್ ಮಾಡಿ ಮದುವೆ ಮಾಡಿಕೊಂಡಿದ್ದಾರೆ ಎಂದು ಅನೇಕ ಸಲ ಸುದ್ದಿಯಾಗಿತ್ತು ಆದರೆ ಅದು ಸುಳ್ಳು ಎಂದು ಸ್ವತಃ ವಿಜಯ್ ಹೇಳಿದ್ದಾರೆ.
ಚಿನ್ನಾರಿಮುತ್ತನ ಚಿನ್ನದಂಥ ಕುಟುಂಬಕ್ಕೆ ಬರಸಿಡಿಲು, ಸ್ಪಂದನಾ-ವಿಜಯ್ ಜೋಡಿಯ ಸುಂದರ ಚಿತ್ರಗಳು!
'ಮನೆಯಲ್ಲಿ ನನ್ನ ಮದುವೆ ಮಾತುಕತೆ ನಡೆಯುತ್ತಿದೆ ಅದೇ ದಿನ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಎಲ್ಲೋ ಮೀಟ್ ಮಾಡುತ್ತಿದ್ದರು ಎಲ್ಲೋ ಫ್ಯಾಮಿಲಿ ಕಣ್ಣಿಗೆ ಬಿದ್ದರಂತೆ ಅಂತ ಸುದ್ದಿಯಾಗುತ್ತಿತ್ತು ಆಗ ನನ್ನ ಸ್ಪಂದನ ಕರೆ ಮಾಡಿ ನೋಡಿ ಹೇಗೆ ಬರುತ್ತಿದೆ ಎಂದು ಹೇಳುತ್ತಿದ್ದರು. ನಿಜ ಹೇಳಬೇಕು ಅಂದ್ರೆ ನಾನು ಸ್ಪಂದನ ಅವರನ್ನು ಮೊದಲು ನೋಡಿದ್ದು ಮದುವೆ ಮನೆಯಲ್ಲಿ ಅದಕ್ಕೂ ಮುನ್ನ ಮಲ್ಲೇಶ್ವರಂ ಕಾಫಿ ಡೇನಲ್ಲಿ ನೋಡಿ ವಾವ ಇಷ್ಟೊಂದು ಮುದ್ದಾಗಿರುವ ಹುಡುಗಿ ಯಾರು ಅಂತ ಯೋಚನೆ ಮಾಡಿದ್ದೆ ಅದಾದ ಮೇಲೆ ಮದುವೆ ರೆಸೆಷ್ಶನ್‌ನಲ್ಲಿ ನೋಡಿದೆ' ಎಂದು ವಿಜಯ್ ರಾಘವೇಂದ್ರ ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Breaking: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ
'ನನ್ನ ತಂದೆ ಸ್ಯಾಂಕಿಟ್ಯಾಂಕ್ ಹೋಗುವ ದಾರಿಯಲ್ಲಿ ನಮ್ಮ ಮಾವನವರಿಗೆ ಸನ್ಮಾನ್ ಮಾಡಿದ್ದರು ಆ ಫೋಟೋ ಮನೆಯಲ್ಲಿತ್ತು ತಂದೆ ಅವರನ್ನು ಕೇಳಿದಾಗ ಓ ನಮಗೆ ಗೊತ್ತಿರುವ ಜನ ಎಂದು ತಿಳಿಯಿತ್ತು. ಮತ್ತೊಂದು ಸಲ ಜಿಮ್‌ನಲ್ಲಿ ಭೇಟಿ ಮಾಡಿದ್ದು ಆಗ ಒಂದು ಸಲ ಮಾತನಾಡಿದರು. ಈ ವಿಚಾರನ ಅಪ್ಪಾಜಿ ಅವರಿಗೆ ತಿಳಿಸಿದೆ ನೋಡಿ ಅಪ್ಪಾಜಿ ಈ ರೀತಿ ಹುಡುಗಿ ಇದ್ದಾಳೆ ಅಂತ ಅವರು ಸೀದಾ ಹೋಗಿ ಮಾತನಾಡಿಸಿದ್ದಾರೆ. ಹುಡುಗಿ ನೋಡಿಕೊಂಡು ಬಂದು ಆಫೀಸ್‌ನಲ್ಲಿ ನಿಶ್ಚಿತಾರ್ಥ ಮಾತುಕಥೆ ನಡೆಯುತ್ತಿದೆ ಆಷ್ಟರಲ್ಲಿ ಟಿವಿಯಲ್ಲಿ ಬರುತ್ತಿತ್ತು. ಎಲ್ಲರು ನೋಡಿದರೆ ವಿಜಯ್ ರಾಘವೇಂದ್ರ ಲವ್ ಮ್ಯಾರೇಜ್ ಆಗುತ್ತಿದ್ದಾರೆ ಅಂತ ಸುದ್ದಿ ಆಗಿತ್ತು ಆದರೆ ಅದೆಷ್ಟೋ ಜನರಿಗೆ ಇದು ಅರೇಂಜ್ಡ್ ಮ್ಯಾರೇಜ್ ಎಂದು ಗೊತ್ತಿಲ್ಲ' ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.