
ಈಗಾಗಲೇ ಅವರ ಹಿರಿತನದ ಗೆಟಪ್ ಬಹಿರಂಗಗೊಂಡಿದೆ. ಟೀಸರ್ ಹಾಗೂ ಹಾಡಿನಲ್ಲಿ 75 ವರ್ಷದ ವೃದ್ಧನಾಗಿ ವಿಜಯ್ ರಾಘವೇಂದ್ರ ಅವರು ಹೇಗೆ ನಟಿಸಿರಬಹುದು ಎನ್ನುವ ಕುತೂಹಲ ಹುಟ್ಟು ಹಾಕಿದೆ. ಈಗ ಅವರ ಮತ್ತೊಂದು ಲುಕ್ ಬಂದಿದೆ. ಇಲ್ಲಿ ಶಾಲಾ ಬಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್‌ನಲ್ಲಿ ಅವರು ಆರಂಭದ ಚಿನ್ನಾರಿ ಮುತ್ತನ ದಿನಗಳನ್ನು ನೆನಪಿಸುತ್ತಿದ್ದಾರೆ.
ಫೆ. 7 ಕ್ಕೆ ಮಾಲ್ಗುಡಿ ಡೇಸ್ ತೆರೆಗೆ; ಕುತೂಹಲ ಮೂಡಿಸಿದೆ ವಿಜಿ ಹೊಸ ಗೆಟಪ್
ಅಚ್ಚರಿ ಮೂಡಿಸುವಷ್ಟುಮೇಕ್‌ಓವರ್ ಮಾಡಿಕೊಂಡಿರುವ ವಿಜಯ್ ರಾಘವೇಂದ್ರ, ವಿಶೇಷವಾದ ಮೇಕಪ್‌ಗಳಿಂದಲೇ ಗೆಟಪ್‌ಗಳಿಂದಲೇ ಗಮನ ಸೆಳೆಯುತ್ತಿದ್ದಾರೆ. ಚಿತ್ರದಲ್ಲಿ ಶಾಲಾ ಬಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ವಿಜಯ್ ರಾಘಲವೇಂದ್ರ ಅವರು 18 ಕೆ.ಜಿ. ತೂಕ ಇಳಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ಅವರ ಈ ಯಂಗ್ ಲುಕ್ ಒಳಗೊಂಡಿದ್ದು ವಿಶೇಷವಾಗಿದೆ. ತೀರ್ಥಹಳ್ಳಿಯ ಶಾಲೆಯೊಂದರಲ್ಲಿ ಈ ದೃಶ್ಯಗಳ ಚಿತ್ರೀಕರಣ ನಡೆದಿದ್ದು, ಬಹುತೇಕ ಮಳೆಯಲ್ಲೇ ಚಿತ್ರೀಕರಿಸಲಾಗಿದೆಯಂತೆ.
ಈ ಹಿಂದೆ ತುಳು ಚಿತ್ರರಂಗದಲ್ಲಿ ‘ಅಪ್ಪೆ ಟೀಚರ್’ ಎಂಬ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದ ಕಿಶೋರ್ ಮೂಡುಬಿದ್ರೆ ಹಾಗೂ ರತ್ನಾಕರ್ ಕಾಮತ್ ಅವರ ಕಾಂಬಿನೇಷನ್‌ನಲ್ಲಿ ಬಂದಿರುವ ‘ಮಾಲ್ಗುಡಿ ಡೇಸ್’ ಸಿನಿಮಾ ಇನ್ನೇನು ತೆರೆ ಮೇಲೆ ಬರುವುದು ಬಾಕಿ. ತುಳು ಚಿತ್ರದಲ್ಲಿ ಯಶಸ್ಸು ಕಂಡ ಈ ಜೋಡಿ, ಕನ್ನಡ ಚಿತ್ರದ ಮೂಲಕವೂ ಗೆಲುವು ಕಾಣುತ್ತದೆಂಬ ನಂಬಿಕೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.