ವಿಜಯ್ ರಾಘವೇಂದ್ರ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಮರು ಪ್ರಶ್ನೆ ಹಾಕಿದ ವಿಜಯ್ ದೇವರಕೊಂಡ!

Published : Aug 11, 2023, 02:34 PM ISTUpdated : Aug 11, 2023, 02:35 PM IST
ವಿಜಯ್ ರಾಘವೇಂದ್ರ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಮರು ಪ್ರಶ್ನೆ ಹಾಕಿದ ವಿಜಯ್ ದೇವರಕೊಂಡ!

ಸಾರಾಂಶ

ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಮರು ಪ್ರಶ್ನೆ ಹಾಕಿದ ದೇವರಕೊಂಡ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್.... 

ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ನಟನೆಯ ಖುಷಿ ಸಿನಿಮಾ ಸೆಪ್ಟೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದಾಗಿದ್ದು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೆ ಚಿತ್ರದ ಪೋಸ್ಟರ್, ಟ್ರೈಲರ್, ಟೀಸರ್ ಮತ್ತು ಸ್ಟಾರ್ ನಟ-ನಟಿಯರ ಲುಕ್‌ ಸಖತ್ ವೈರಲ್ ಆಗುತ್ತಿದೆ ಸುದ್ದಿಯಲ್ಲಿದೆ. ಖುಷಿ ಸಿನಿಮಾ ಪ್ರಚಾರ ಮಾಡಲು ಕರ್ನಾಟಕಕ್ಕೆ ಇಡೀ ತಂಡ ಬಂದಿದೆ. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದರು. 

ಖುಷಿ ಸಿನಿಮಾದ ಸಾಕಷ್ಟು ವಿಚಾರಗಳನ್ನು ವಿಜಯ್ ಮತ್ತು ತಂಡ ಹಂಚಿಕೊಂಡಿದ್ದಾರೆ. ಈ ವೇಳೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳಿದ್ದಾರೆ ಆಗ ಒಬ್ಬರು 2003ರಲ್ಲಿ ಕನ್ನಡಲ್ಲಿ ಖುಷಿ ಸಿನಿಮಾ ರಿಲೀಸ್ ಆಗಿತ್ತು ಆ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ ಎಂದು ನೀವು ಹೇಳಬೇಕು ಅದಕ್ಕೆ ನಾನು ನಾಲ್ಕು ಆಯ್ಕೆಗಳನ್ನು ಕೊಡುತ್ತೀನಿ ಎನ್ನುತ್ತಾರೆ. ವಿಜಯ್ ರಾಘವೇಂದ್ರ, ದುನಿಯಾ ವಿಜಯ್, ವಿಜಯ್ ಕಾಂತ್ ಮತ್ತು ವಿಜಯ್ ಸೇತುಪತಿ ಎಂದು ಆಯ್ಕೆಗಳನ್ನು ನೀಡುತ್ತಾರೆ. ನಿಮ್ಮ ಹೆಸರಿನಲ್ಲಿರುವ ವ್ಯಕ್ತಿನೇ ನಟಿಸಿರುವುದು ನೀವು ತಿಳಿದುಕೊಂಡಿರಬೇಕು ಹೇಳಿ' ಎಂದು ಪ್ರಶ್ನೆ ಮಾಡುತ್ತಾರೆ. 

ಜೈಲರ್ ಯಶಸ್ಸಿನ ಬೆನ್ನಲೆ ಮುಂಬೈ ರಸ್ತೆಯಲ್ಲಿ ತಮನ್ನಾ; ಚಪ್ಪಲಿ ಬೆಲೆ ಕೇಳಿ ನೆಟ್ಟಿಗರು ಶಾಕ್!

ಉತ್ತರ ಕೊಡಲು ರೆಡಿಯಾಗುವ ವಿಜಯ್ ದೇವರಕೊಂಡ 'ಸರಿ ನಾನು ನಿಮಗೆ ಪ್ರಶ್ನೆ ಕೇಳುತ್ತೀನಿ.  2021ರಲ್ಲಿ ತೆಲುಗು ಭಾಷೆಯಲ್ಲಿ ಖುಷಿ ಸಿನಿಮಾ ರಿಲೀಸ್ ಆಯ್ತು. ಆ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ ನೀವು ಹೇಳಬೇಕು ನಾನು ಕೂಡ ನಾಲ್ಕು ಆಯ್ಕೆಗಳನ್ನು ನೀಡುತ್ತೀನಿ. ಮೊದಲು ಸೂಪರ್ ಸ್ಟಾರ್ ಮಹೇಶ್ ಬಾಬು, ಪವರ್ ಸ್ಟಾರ್ ಪವನ್ ಕಲ್ಯಾಣ...' ಎಂದು ಪ್ರಶ್ನೆ ಮುಗಿಸುವುಷ್ಟರಲ್ಲಿ ಪತ್ರಕರ್ತ ಪವನ್ ಕಲ್ಯಾಣ ನಾಯಕ. ನಾನು ಉತ್ತರ ಕೊಟ್ಟಿರುವೆ ಈಗ ನೀವು ಉತ್ತರ ಕೊಡಿ ಎನ್ನುತ್ತಾರೆ ಆಗ 'ಖಂಡಿತಾ ನನಗೆ ಗೊತ್ತಿದೆ ನಾಯಕ ವಿಜಯ್ ರಾಘವೇಂದ್ರ' ಎನ್ನುತ್ತಾರೆ. ಸರಿಯಾಗಿ ಉತ್ತರಿಸಿರುವುದಕ್ಕೆ ಪ್ರತಿಯೊಬ್ಬರು ಖುಷಿ ಪಡುತ್ತಾರೆ. ಅಲ್ಲಿಗೆ ನಿಲ್ಲಿಸದ ಪತ್ರಕರ್ತ ಕನ್ನಡದಲ್ಲಿರುವ ಹಾಡುಗಳನ್ನು ನೀವು ರಿಮೇಕ್ ಮಾಡಿ ನೀವು ಮಾಡಿರುವುದು ನಿಲನಾ ಸಿನಿಮಾ ರೀತಿ ಇದೆ ಹೀಗಾಗಿ ಕನ್ನಡ ಸಿನಿಮಾಗಳನ್ನು ನೋಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಓಕೆ ಖಂಡಿತಾ ಎಂದು ವಿಜಯ್ ಒಪ್ಪುತ್ತಾರೆ. 

22 ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಧಕ್ಕೆ, ರಾಜೀ ಸಾಧ್ಯವಿಲ್ಲ: ಕೋರ್ಟಲ್ಲಿ ಸುದೀಪ್‌ ಹೇಳಿಕೆ

ಸಮಂತಾ ಕಾಲೆಳೆದ ವಿಜಯ್:

ಟ್ರೇಲರ್‌ ಬಿಡುಗಡೆಯ ದಿನ ವಿಜಯ ದೇವರಕೊಂಡ ಸಮಂತಾನ ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ. 'ಇದೊಂದು ಲವ್‌ಸ್ಟೋರಿ. ಸಮಂತಾ ಇಲ್ದೇ ನಮ್ಮಿಬ್ಬರ ಲವ್‌ಸ್ಟೋರಿ ಹೇಗೆ ಹೇಳಲಿ' ಅಂತ ಒದ್ದಾಡಿದ್ದಾರೆ. 'ಇಂಥಾ ಪ್ರೇಮ ಕತೆಯನ್ನು ಒಬ್ಬಬ್ಬನೇ ಹೇಳಬೇಕು ಅಂದರೆ ಒಂಥರಾ ಬೇಜಾರು' ಅಂತ ಹೇಳಿ ಸಮಂತಾನ್ನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಳ್ತಿರೋ ಬಿಲ್ಡಪ್ಪು ಕೊಟ್ಟಿದ್ದಾರೆ. ಇವ್ರಿಬ್ರೂ ಸಿನಿಮಾ ಶೂಟಿಂಗ್‌ನಲ್ಲೂ ಸಖತ್ ಕ್ಲೋಸ್ ಆಗಿಯೇ ಇದ್ದರು. ಹೇಳಿಕೇಳಿ ಲವ್‌ಸ್ಟೋರಿ. ಆನ್‌ ಸ್ಕ್ರೀನ್ ರೊಮ್ಯಾಂಟಿಕ್ ಆಗಿ ಇರಲೇಬೇಕು. ಆದರೆ ವಿಜಯ ದೇವರಕೊಂಡ ಆಫ್‌ಸ್ಕ್ರೀನ್ ನಲ್ಲಿ ಕೂಡ ಕೆಲವೊಮ್ಮೆ ತಮ್ಮ ನಾಯಕಿಯರ ಜೊತೆ ರೊಮ್ಯಾಂಟಿಕ್ ಆಗಿಯೇ ಇರುತ್ತಾರೆ.ಟ್ರೇಲರ್‌ ಬಿಡುಗಡೆಯಲ್ಲಿ ಸಮಂತಾಗಾಗಿ ಇಡೀ ಚಿತ್ರತಂಡದ ಕಾಯುವಿಕೆ ಬಗ್ಗೆ ವಿಜಯ ದೇವರಕೊಂಡ ಹೇಳಿದ ಮಾತೀಗ ವೈರಲ್‌ ಆಗಿದೆ. 'ಸಮಂತಾಗೆ ಸಮಸ್ಯೆ ಆಗಿ ಇಡೀ ಟೀಮ್ ಅವರಿಗಾಗಿ ಕಾಯಬೇಕಾಗಿ ಬಂತು. ಈ ಕಾಯುವಿಕೆ ಒಂದು ವರ್ಷ ದಾಟಿದಾಗ ನಾನು ಡೈರೆಕ್ಟರ್ ಶಿವ ಹತ್ರ ಒಂದು ಪ್ರಸ್ತಾಪ ಇಟ್ಟೆ. ಸಮಂತಾ ಮಾಡಬೇಕಾದ ಪಾತ್ರಕ್ಕೆ ಬೇರೆ ನಟಿಯನ್ನು ತರಲಾಗೋದಿಲ್ಲ. ಒಂದು ವರ್ಷ ಅಲ್ಲ, ಹತ್ತು ವರ್ಷ ಆದರೂ ಆ ಪಾತ್ರ ಅವಳೇ ಮಾಡಬೇಕು. ಆದರೆ ಹೀಗೆ ಅವಳಿಗಾಗಿ ಕಾಯ್ತಾ ಟೈಮ್‌ ವೇಸ್ಟ್ ಮಾಡೋ ಬದಲು ನಾವ್ಯಾಕೆ ಒಂದು ಇಡ್ಲಿ ಹೋಟೇಲ್ ಓಪನ್‌ ಮಾಡಬಾರದು ಅಂತ!'

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?