ಮೊದಲ ಸಲ ವಿನಯ್ ಗುರೂಜೀ ಭೇಟಿ ಮಾಡಿದ ಕ್ಷಣ ಹಂಚಿಕೊಂಡ ನಟ ಅರುಣ್ ಹರಿಹರನ್.....
ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ನಿರೂಪಕನಾಗಿರುವ ಮಾಸ್ಟರ್ ಆನಂದ್ ಸಹೋದರ ಮಾಸ್ಟರ್ ಅರುಣ್ ಹರಿಹರನ್ ಕೂಡ ನಿರ್ದೇಶಕದಲ್ಲಿ ಬ್ಯುಸಿಯಾಗಿದ್ದಾರೆ. ದೇವರನ್ನು ನಂಬುವುದು ಕಷ್ಟ ಅನ್ನೋ ಸಮಯದಲ್ಲಿ ದೇವಮನುಷ್ಯರನ್ನು ಹೇಗೆ ನಂಬಲಿ ಅಂತ ಪದೇ ಪದೇ ಹೇಳುತ್ತಿದ್ದ ಅರುಣ್ ಹರಿಹರನ್ ವಿನಯ್ ಗುರೂಜೀ ಅವರನ್ನು ಭೇಟಿ ಮಾಡಿದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಒಮ್ಮೆ ಸಿನಿಮಾ ಶೂಟಿಂಗ್ ಸಮಯದಲ್ಲಿ ನನ್ನ ಅಣ್ಣ ಮಾಸ್ಟರ್ ಆನಂದ್ ಸ್ಕೂಲ್ ಕಾರ್ಯಕ್ರಮವೊಂದರಲ್ಲಿ ಗುರೂಜೀ ಅವರನ್ನು ಭೇಟಿ ಮಾಡಿದ್ದ, ಮತ್ತೊಂದು ದಿನ ನನ್ನ ತಂಡದವರನ್ನು ಕರೆದುಕೊಂಡು ಬರುತ್ತೀನಿ ಎಂದು ಹೇಳಿ ಮರು ದಿನವೇ ಟಿಟಿ ಬುಕ್ ಮಾಡಿ ಇಡೀ ತಂಡವನ್ನು ಕರೆದುಕೊಂಡು ಹೋದಾ. ನಾನು ಬರೋಲ್ಲ ಅಂದ್ರೆ ಬರೋಲ್ಲ ಅಂತ ಹಠ ಮಾಡಿದ್ದರೂ ಆನಂದ್ ಬಿಡದ ಕಾರಣ ಬೈಕೊಂಡು ಥೂ ಅಂತ ಹೇಳಿ ಅವರೊಟ್ಟಿಗೆ ಹೋಗಿದ್ದೆ. ನಾವು ಹೋಗುತ್ತಿದ್ದಂತೆ ಗೇಟ್ ಬಳಿ ನಿಂತಿದ್ದರು 'ಬನ್ನಿ ಬನ್ನಿ ನಿಮಗಾಗಿ ಕಾಯುತ್ತಿದ್ದೆ' ಅಂತ ಹೇಳಿದರು. ಆನಂತ್ ಸಂಪೂರ್ಣ ವ್ಯವಸ್ಥೆ ಮಾಡಿದ್ದಾನೆ ಅಂದುಕೊಂಡು ಸುಮ್ಮನಾದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಅರುಣ್ ಮಾತನಾಡಿದ್ದಾರೆ.
ಗಂಡು ಮಕ್ಕಳಾಗಿ ನಾವು ಛತ್ರಿ ಹಿಡಿಯಬೇಕು; ವಿಷ್ಣುವರ್ಧನ್ ಗೌರವ ಕೊಟ್ಟ ಘಟನೆ ಹಂಚಿಕೊಂಡ ಆಂಕರ್ ಅನುಶ್ರೀ, ನಟ
'ಮೊದಲು ಊಟ ಮಾಡಲು ಹೇಳಿದ್ದರು. ಆಗ ಅವರೇ ಬಜ್ಜಿ ಬಡಿಸಲು ಬಂದರು. ಶಾರ್ಟ್ಸ್ ಮತ್ತು ಟೀ ಶರ್ಟ್ ಹಾಕಿಕೊಂಡು ನಿಂತಿದ್ದರು..ನಮ್ಮ ಕಲ್ಪನೆ ರೀತಿಯಲ್ಲೂ ರೆಡಿಯಾಗಿರಲಿಲ್ಲ. ನನಗೆ ಬಜ್ಜಿ ಬಡಿಸಲು ಬಂದ್ರು...ಇದರಷ್ಟೇ ಖಾರ ಇದ್ಯಾ ಅಲ್ವಾ ನೀನು ಅಂದ್ರು...ಯಾಕೆ ಅಂತ ಕೇಳಿದೆ ಎಷ್ಟು ಬೈಕೊಂಡು ಬಂದೆ ನನ್ನ ಅಂದ್ರು. ನಮ್ಮ ಅಣ್ಣ ಇದೆಲ್ಲಾ ಹೇಳಿದ್ದಾನೆ ಅಂದ್ಕೊಂಡು ಸುಮ್ಮನಾದೆ. ಊಟ ಆದ್ಮೇಲೆ ಮೀಟಿಂಗ್ ಇತ್ತು....ಆಗ ಒಬ್ರು ವ್ಯಕ್ತಿ ಬಂದು ಅವರ ಪಟ್ಟ ಕುಳಿತುಕೊಳ್ಳಲು ಹೇಳಿದ್ದರು..ಇದಕ್ಕೂ ನನ್ನ ಅಣ್ಣನೇ ಕಾರಣ ಅನ್ಕೊಂಡೆ. ನಮ್ಮ ಡಿಓಪಿ ಫೋನ್ ಹೊಡೆದು ಹೋಗಿತ್ತು, ಯಾಕೋ ನೀನು ಸ್ಕ್ರೀನ್ ಸರಿ ಮಾಡಿಸಿಲ್ಲ ಅಂದ್ರು. ಆಗಲೂ ಅಣ್ಣನೇ ಇಷ್ಟೋಂದು ಮಾಹಿತಿ ಕೊಟ್ಟಿರುವುದು ಅಂತ ನನ್ನ ಕಲ್ಪನೆಯಲ್ಲಿ. ನಮ್ಮ ತಂಡದ ಮತ್ತೊಬ್ಬರಿಗೆ ಮನೆ ಕಟ್ಟಿಸುತ್ತೀಯಾ ತಾಯಿ ತಲೆ ಕೆಡಿಸಿಕೊಳ್ಳಬೇಡಿ ಅಂದ್ರು' ಎಂದು ಮಾಸ್ಟರ್ ಅರುಣ್ ಹರಿಹರನ್ ಹೇಳಿದ್ದಾರೆ.
ಸ್ಟಾರ್ ನಟಿ ಆದ್ಮೇಲೆ ನಾನು ಸ್ಟಾರ್ ನಟನ ಪತ್ನಿ ಆಗಿದ್ದು; ಡಿವೋರ್ಸ್‌ಗೂ ಮುನ್ನ ಅಮೃತಾ ಸಿಂಗ್ ಫುಲ್ ಖಡಕ್!
ನಾನು ಆಗಷ್ಟೇ ಮದುವೆಯಾಗಿದ್ದೆ ಆಗ ನನ್ನ ಹಳೆ ಪರಿಚ್ಕೊಂಡ ಗಾಯದ ಬಗ್ಗೆ ಹೇಳಿಬಿಟ್ಟರು. ಹೆಂಗಿದ್ದಾಳೋ ಅವಳು ಅಂದುಬಿಟ್ಟರು. ಕಾಲು ಕೈ ಎಲ್ಲಾ ತಣ್ಣಗಾಯ್ತು. ಅಣ್ಣ ಇಷ್ಟೋಂದು ಹೇಳಿದ್ದಾನ ಯಾವ ಹುಡುಗಿ ಹೆಸರು ಹೇಳಿರಬಹುದು ಅಂತ ಯೋಚನೆ ಮಾಡುತ್ತಿದ್ದೆ. ಮತ್ತೊಂದು ರೌಂಡ್ ಬಂದರು ಲಿಸ್ಟ್ ತೆಗೆದು ಯೋಚನೆ ಮಾಡುತ್ತಿದ್ದಾನೆ ಅಂದ್ರು. ಏನೋ ಪವರ್ ಇದೆ ಎಂದು ಅವರಿಗೆ ಸರೆಂಡರ್ ಆಗಿಬಿಟ್ಟೆ. ತುಂಬಾ ಫ್ರೆಂಡ್ಲಿಯಾಗಿ ಮಾತನಾಡಿಸುತ್ತಾರೆ ಯಾರು ಏನೇ ಕೊಟ್ಟರೂ ನಮಗೆ ಕೊಡುತ್ತಿದ್ದರು' ಎಂದಿದ್ದಾರೆ ಅರುಣ್.