ಮಗಳ ಪ್ರೀತಿಯ ಆರೈಕೆಯಲ್ಲಿ ಹಿರಿಯ ನಟ ಜೈ ಜಗದೀಶ್; ಈಗ ಹೇಗಿದ್ದಾರೆ ಗೊತ್ತಾ?

Published : Nov 26, 2026, 04:44 PM IST
jai jagadish

ಸಾರಾಂಶ

ಜೈ ಜಗದೀಶ್‌. ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಬಹುಮುಖ ಪ್ರತಿಭೆ. 72 ವರ್ಷದ ಜೈ ಜಗದೀಶ್ ಮಗಳ ಆರೈಕೆಯಲ್ಲಿರುವ ವಿಡಿಯೋ ಒಂದು ವೈರಲ್ ಆಗಿದೆ.

ಜೈ ಜಗದೀಶ್‌. ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಬಹುಮುಖ ಪ್ರತಿಭೆ ಅವರು. 'ಗಾಳಿ ಮಾತು', 'ಬೆಂಕಿಯಲ್ಲಿ ಅರಳಿದ ಹೂವು' ಹಾಗೂ 'ಬಂಧನ'ದಂತಹ ಸದಭಿರುಚಿಯ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದ ಹಿರಿಯ ಕಲಾವಿದ. ಇದೀಗ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೇಗಿದ್ದಾರೆ ಜೈ ಜಗದೀಶ್?

ಕನ್ನಡದ ಹಿರಿಯ ನಟ ಜೈ ಜಗದೀಶ್‌ಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಜೈ ಜಗದೀಶ್ ಮಗಳು ವೈಭವಿ ಅವರು ಆರೈಕೆ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ವಯೋ ಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದಂತೆ ಕಾಣುತ್ತಿದೆ. ಇನ್ನು ಈ ವಿಡಿಯೋವನ್ನು ನಟ ರಾಘವೇಂದ್ರ ಸಾ ದನಿ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಆಗಿದೆ. ಜೈ ಜಗದೀಶ್ ಸರ್ ಅವರನ್ನು ನೋಡಿ ಹೇಗಾಗಿದ್ದಾರೆ.. ಆದಷ್ಟು ಬೇಗ ಗುಣಮುಖರಾಗಿ. ಸರ್.. ವೈಭವಿ ಸಿಸ್ಟರ್ ಚನ್ನಾಗಿ ನೋಡ್ಕೊಳಿ ಅಪ್ಪನ್ನ.. ಎಂದು ಬೆರೆದುಕೊಂಡಿದ್ದಾರೆ.

ಇವರಿಗೆ ಸಂಬಂಧಿಸಿದ ಇನ್ನೊಂದು ಫೋಟೋ ವೈರಲ್ ಆಗಿತ್ತು. ಇತ್ತೀಚೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು ಎನ್ನಲಾಗುತ್ತಿರುವ ಫೋಟೋ. ಪತ್ನಿ ವಿಜಲಕ್ಷ್ಮೀ ಸಿಂಗ್ ಜತೆ ವೀಲ್‌ ಚೇರ್‍‌ನಲ್ಲಿ ಬಂದಿದ್ದರು. ಆಗ ವೀಲ್‌ ಚೇರ್‍‌ನಲ್ಲಿ ಬಂದಿರೋದನ್ನು ನೋಡಿ ಅವರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು. ಅಂದಹಾಗೆ ಜೈ ಜಗದೀಶ್ ಅವರಿಗೆ ಪ್ರಸ್ತುತ 72 ವರ್ಷ. ಈ ಹಿನ್ನೆಲೆಯಲ್ಲಿ ವಯೋಸಹಜ ಸುಸ್ತು ಮತ್ತು ಆಯಾಸದಿಂದ ಬಳಲುತ್ತಿದ್ದಾರೆ. ಅವರು ಆರೋಗ್ಯವಾಗಿಯೇ ಇದ್ದಾರೆ.

1954ರ ಜೂನ್ 29 ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಜನಿಸಿದರು. ಖ್ಯಾತ ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರನ್ನು ಮದುವೆ ಆಗಿದ್ದು, ಮೂವರು ಹೆಣ್ಮಕ್ಕಳು ಇದ್ದಾರೆ. ವೈಭವಿ, ವೈಸಿರಿ, ವೈನಿಧಿ ಎಂಬ ಮಕ್ಕಳು ಇದ್ದಾರೆ. ಇನ್ನು ಮೊದಲ ಪತ್ನಿ ರೂಪಾ ಅವರಿಂದ ಜನಿಸಿದ ಅರ್ಪಿತಾ ಎಂಬ ಮಗಳಿದ್ದಾಳೆ.

ಜೈ ಜಗದೀಶ್ 1976ರಲ್ಲಿ ಬಿಡುಗಡೆಯಾದ 'ಫಲಿತಾಂಶ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ನಟನೆಯಷ್ಟೇ ಅಲ್ಲದೆ 'ಭೂಮಿತಾಯಿಯ ಚೊಚ್ಚಲ ಮಗ' ಹಾಗೂ 'ಕೋತಿಗಳು ಸಾರ್ ಕೋತಿಗಳು' ಅಂತಹ ಯಶಸ್ವಿ ಚಿತ್ರಗಳ ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿಯೂ ಸೈ ಎನಿಸಿಕೊಂಡವರು. ನಾಯಕನಾಗಿ ಹಾಗೂ ಪ್ರಭಾವಶಾಲಿ ಪೋಷಕ ಪಾತ್ರಗಳ ಮೂಲಕ ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಚಂದನವನದ ಅನುಭವಿ ನಟ ಇವರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಸು ಫ್ರಮ್ ಸೋ’ ರವಿಯಣ್ಣನಿಗೆ ನಾಯಕಿಯಾದ ಸೋನಾಲ್: ‘ಶ್ರೀರಾಮಚಂದ್ರ’ ಕುತೂಹಲವೇ ಬೇರೆ!
2 ಚಿತ್ರಗಳ ನಂತರ ನನ್ನ ನಿರ್ದೇಶನಕ್ಕೆ ಚಾಲನೆ: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಉಪೇಂದ್ರ