ಲಾಕ್ ಡೌನ್ ಪರಿಣಾಮ ಸಂಕಷ್ಟದಲ್ಲಿರುವ ಜನರ ನೆರವಿಗೆ ಹಿರಿಯ ನಟಿ ಬಿ.ಸರೋಜ ದೇವಿ ಸಹಾಯಹಸ್ತ ಚಾಚಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅವರು 5 ಲಕ್ಷ ರು.ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಚೆಕ್ ಮೂಲಕ ಹಸ್ತಾಂತರಿಸಿದ್ದು, ಸಂಕಷ್ಟದಲ್ಲಿರುವ ಜನರಿಗೆ ಅದು ಬಳಕೆ ಆಗಬೇಕೆಂದು ಮನವಿ ಮಾಡಿದ್ದಾರೆ. ಅದೇ ರೀತಿ ಬಿಗ್ ಬಾಸ್ ಖ್ಯಾತಿಯ ಕಿರುತೆರೆ ನಟಿ ದೀಪಿಕಾ ದಾಸ್ ಕೂಡ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಕೊರೋನಾ ಕೊಡುಗೆ : ಇಲ್ಲಿಯ ತನಕ ಕೊಟ್ಟವರು
1. ಪುನೀತ್ ರಾಜ್ ಕುಮಾರ್ 50 ಲಕ್ಷ
2. ನಿಖಿಲ್ ಕುಮಾರಸ್ವಾಮಿ 37 ಲಕ್ಷ
ಚಿತ್ರರಂಗದ 3 ಸಾವಿರ ಕಾರ್ಮಿಕರ ನೆರವಿಗೆ ಧಾವಿಸಿದ ನಿಖಿಲ್
3. ದೀಪಿಕಾ ದಾಸ್ 5 ಲಕ್ಷ
4. ಸರೋಜಾ ದೇವಿ 5 ಲಕ್ಷ