ಲಾಕ್‌ಡೌನ್ ಆರಂಭವಾದಾಗಿನಿಂದ ನಟ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ನಿರಾಶ್ರಿತರಿಗೆ ಮಾಡುತ್ತಿರುವ ಅನ್ನದಾನ ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ರಾಜಕಾರಣಿಗಳು ಈ ಕಾರ್ಯಕ್ರಮ ಶ್ಲಾಘನೀಯ ಎಂದಿದ್ದಾರೆ.
ಲಾಕ್ ಡೌನ್ ಶುರುವಾದಾಗ ಕೆಲವೇ ದಿನಗಳಿಗೆ ಅಂತ ಶುರು ಮಾಡಿದ್ದ ದರ್ಶನ್ ಅಭಿಮಾನಿಗಳು ಈಗ ಅದನ್ನು ಲಾಕ್ ಡೌನ್ ಕೊನೆಗೊಳ್ಳುವರೆಗೂ ವಿಸ್ತರಣೆ ಮಾಡಿದ್ದಾರೆ.
ಮೈಸೂರಿನಲ್ಲಿ ದರ್ಶನ್ ಅಭಿಮಾನಿಗಳು ಅನ್ನದಾನ ಮಾಡುತ್ತಿರುವ ಪರಿಹಾರ ಕೇಂದ್ರಕ್ಕೆ ಶುಕ್ರವಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಭೇಟಿ ನೀಡಿದ್ದರು.
#Lockdown ಆಹಾರ ತಯಾರಿಸಿ ವಿತರಿಸುತ್ತಿರುವ ದರ್ಶನ್ ಅಭಿಮಾನಿಗಳು!
ಮೈಸೂರು ಮಾತ್ರವಲ್ಲದೆ ದರ್ಶನ್ ಅಭಿಮಾನಿಗಳು ಬೆಂಗಳೂರಿನಲ್ಲೂ ಮೂರು ದಿನಕ್ಕೊಮ್ಮೆ ದಿನಗೂಲಿ ಕಾರ್ಮಿಕರ ಮನೆ ಬಾಗಿಲಿಗೆ ದಿನಸಿ ತಲುಪಿಸುತ್ತಿದ್ದಾರೆ. ಈ ಎಲ್ಲ ಕೆಲಸಗಳಿಗೂ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದು ದರ್ಶನ್. ಸದ್ಯಕ್ಕೆ ತಾವು ಎಲ್ಲೂ ಕಾಣಿಸಕೊಳ್ಳುತ್ತಿಲ್ಲ.
ಲಾಕ್‌ಡೌನ್ ಪರಿಣಾಮ ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರು ಹಾಗೂ ನಿರಾಶ್ರಿತರ ನೆರವಿಗೆ ಹಲವಾರು ಸೆಲೆಬ್ರಿಟಿಗಳು ಬಂದಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಸ್ಟಾರ್ ನಟ ದರ್ಶನ್ ಅಭಿಮಾನಿಗಳು ಇದರಿಂದ ಹೊರತಾಗಿಲ್ಲ.