ಸುಧೀರ್ ಮಕ್ಕಳ ಬೆಳವಣಿಗೆಯಲ್ಲಿ ಸಹಾಯ ಮಾಡಿದ ಟೆನ್ನಿಸ್ ಕೃಷ್ಣ. ಅವಕಾಶ ಕೊಟ್ಟಿಲ್ಲ ಓಕೆ ಆಶೀರ್ವಾದ ಬೇಡ್ವಾ ಎಂದ ಅಭಿಮಾನಿಗಳು......
ಇಡೀ ಕನ್ನಡ ಚಿತ್ರರಂಗವೇ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಮದುವೆ ಅದ್ಧೂರಿಯಾಗಿ ನಡೆಯಿತ್ತು, ಈಗ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನಡೆಯುತ್ತಿದೆ. ಎಲ್ಲಿ ನೋಡಿದರೂ ತರುಣ್ -ಸೋನಲ್ ಲವ್ ಸ್ಟೋರಿ, ಮ್ಯಾರೇಜ್ ವಿಡಿಯೋ ಹರಿದಾಡುತ್ತಿರುವಾಗ ಹಿರಿಯ ನಟರ ವಿಡಿಯೋ ಕೂಡ ವೈರಲ್ ಆಗುತ್ತಿದೆ.
70-80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ಅದ್ಭುತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಇದೀಗ ಸುಧೀರ್ ಮಕ್ಕಳ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ' ಸಿನಿಮಾ ಮತ್ತು ನಾಟಕಗಳಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡಿದ್ದೀನಿ. ಸಿನಿಮಾ ಇಲ್ಲದ ಸಮಯದಲ್ಲಿ ನಾನು ಹೆಚ್ಚಾಗಿ ನಾಟಕ ಮಾಡಿದ್ದೀನಿ ಅದರಲ್ಲೂ ನಮ್ಮ ಸುಧೀರ್ ಅಣ್ಣ ಅವರ ನಾಟಕ ಸಂಸ್ಥೆಯಲ್ಲಿ ಹೆಚ್ಚಾಗಿ ಕೆಲಸ ಮಾಡಿದ್ದೀನಿ. ಯಾವತ್ತೂ ಸುಧೀರ್ ಅವರ ಸಂಸ್ಥೆಯಲ್ಲಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿಲ್ಲ, ಕೊಟ್ಟಷ್ಟು ಸಂಭಾವನೆಯನ್ನು ತೆಗೆದುಕೊಂಡು ಕೆಲಸ ಮಾಡಿದ್ದೀನಿ. ಸುಧೀರ್ ಅಗಲುವ ಮುನ್ನ ಈ ನಾಟಕ ಸಂಸ್ಥೆಯನ್ನು ಬಂದ್ ಮಾಡಬೇಡ ಎಂದು ನನ್ನ ಬಳಿ ಹೇಳಿದ್ದಾರೆ ಹೀಗಾಗಿ ನಿಮ್ಮ ಸಮಯ ಇದ್ದಾಗ ದಯಮಾಡಿ ಡೇಟ್ ಕೊಡಿ ಎಂದು ಅವರ ಪತ್ನಿ ಮನವಿ ಮಾಡಿದ್ದರು. ಖಂಡಿತಾ ಡೇಟ್ ಕೊಡುತ್ತೀನಿ ಎಂದು ಹೇಳಿ ನಾಟಕ ಮಾಡಿದ್ದೀನಿ' ಎಂದು ಟೆನ್ನಿಸ್ ಕೃಷ್ಣ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್; ಮಗು ಮುಖ ಮುಚ್ಚಿದ್ದಕ್ಕೆ ನೆಟ್ಟಿಗರಿಗೆ ಬೇಸರ
'ನನಗೆ ಇಬ್ಬರು ಮಕ್ಕಳಿದ್ದಾರೆ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸಿ ಸಹಾಯ ಮಾಡಿ ಎಂದಾಗ ಮಾರು ದಿನವೇ ಸಿನಿಮಾ ಮುಹೂರ್ತವೊಂದು ಇದ್ದ ಕಾರಣ ಅವನ ಮನೆಗೆ ಕಾರಿನಲ್ಲಿ ಹೋಗಿ ಮಗ ನಂದ ಕಿಶೋರ್‌ನ ಕರೆದುಕೊಂಡು ಹೋಗಿ ನಿರ್ದೇಶಕರಿಗೆ ನಿರ್ಮಾಪಕರಿಗೆ ಪರಿಚಯ ಮಾಡಿಸಿ ನಾನು ಬಂದಿದ್ದೀನಿ. ಎರಡು ಸಿನಿಮಾದಲ್ಲಿ ಅವರಿಗೆ ಅವಕಾಶ ಕೊಡಿಸಿದ್ದೀನಿ. ಸುಧೀರ್ ಅವರ ಇಬ್ಬರು ಮಕ್ಕಳು ದೊಡ್ಡ ನಿರ್ದೇಶಕರಾಗಿದ್ದಾರೆ ಅದನ್ನು ನೋಡಿ ಖುಷಿ ಆಯ್ತುಆದರೆ ಅವರಿಬ್ಬರು ತಮ್ಮ ಮದುವೆಗೆ ನನ್ನನ್ನು ಕರೆದಿಲ್ಲ ಯಾಕೆ ಅಂತ ಗೊತ್ತಿಲ್ಲ. ಶರಣ್ ಮತ್ತು ಚಿಕ್ಕಣ್ಣ ಆತ್ಮೀಯರಾಗಿದ್ದ ಕಾರಣ ನಾನು ಪಾತ್ರಕ್ಕೆ ಸೂಟ್ ಆಗಲ್ಲ ಅಂತ ಅವರನ್ನು ಆಯ್ಕೆ ಮಾಡಿರಬೇಕು. ನಮ್ಮ ಸುಧೀರ್ ಅಣ್ಣ ಅವರ ಮಕ್ಕಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ನನ್ನನ್ನು ಮದುವೆಗೆ ಕರೆದಿಲ್ಲ. ಹಲವರು ನನ್ನನ್ನು ಕೇಳಿದರು ಮದುವೆಗೆ ಬರಲ್ವಾ ಎಂದು ಕರೆದಿಲ್ಲ ಅಂದ್ಮೇಲೆ ಹೇಗೆ ಬರಬೇಕು ಅಂದೆ. ಅಣ್ಣ ನಮ್ಮ ಯಾವುದೇ ಸಿನಿಮಾದಲ್ಲಿ ನಿಮಗೆ ಸೂಟ್ ಆಗುವಂತ ಪಾತ್ರ ಇಲ್ಲ ಕಾನ್ಸೆಪ್ಟ್ ಚೇಂಜ್ ಆಗಿದೆ ದಯಮಾಡಿ ತಪ್ಪು ತಿಳಿದುಕೊಳ್ಳಬೇಡಿ ಅಂತ ಹೇಳಿದ್ದರೆ ಖಂಡಿತಾ ಮದುವೆಗೆ ಹೋಗಿ ಬರುತ್ತಿದ್ದೆ' ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ.