ರಿಷಬ್ ಶೆಟ್ಟಿ ಡ್ರೀಮ್ 'ಲಾಫಿಂಗ್ ಬುದ್ಧ'ನಲ್ಲಿ ಪ್ರಮೋದ್ ಶೆಟ್ಟಿ ಹಾಸ್ಯ ಹೊನಲಿಗೆ ಪ್ರೇಕ್ಷಕ ಫಿದಾ!

By Shriram Bhat  |  First Published Aug 31, 2024, 4:18 PM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕನಸು ನನಸಾಗಿದೆ. ರಿಷಬ್ ತನ್ನ ಪ್ರೊಡಕ್ಷನ್ನಲ್ಲಿ ಲಾಫಿಂಗ್ ಬುದ್ಧನನ್ನ ಕೆತ್ತಿ ಪ್ರೇಕ್ಷಕರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋಕೆ ವೇದಿಕೆ ಮಾಡಿದ್ರು. ಇಂದು ಆ ಲಾಫಿಂಗ್ ಬುದ್ಧ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟಿದ್ದಾನೆ.


ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರ ಕಥೆ ಸಿನಿಮಾ ಆದ್ರೆ ಹೇಗಿರುತ್ತೆ..? ಆ ಸಿನಿಮಾ ಬಂದಾಗ ಅದೇ ಪೊಲೀಸರು ಸಿನಿಮಾ ನೋಡಿದ್ರೆ ಯಾವ್ ತರ ರಿಯಾಕ್ಷನ್ ಬರಬಹುದು..? ಅಂತಹ ಅದ್ಭುತ ಫೀಲ್ ಕೊಟ್ಟ ಸಿನಿಮಾ ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ. ಈ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಹಾಗಾದ್ರೆ ಲಾಫಿಂಗ್ ಬುದ್ಧ ಹೇಗಿದ್ದಾನೆ..? ನೋಡೋಣ ಬನ್ನಿ.. 

ತೆರೆ ಮೇಲೆ ಬಂದ ರಿಷಬ್ ಶೆಟ್ಟಿ ಡ್ರೀಮ್ 'ಲಾಫಿಂಗ್ ಬುದ್ಧ', ಪ್ರಮೋದ್ ಶೆಟ್ಟಿ ಹಾಸ್ಯದ ಹೊನಲಿಗೆ ಪ್ರೆಕ್ಷಕರು ಮನಸೋತಿದ್ದಾರೆ ಎನ್ನಬಹುದು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕನಸು ನನಸಾಗಿದೆ. ರಿಷಬ್ ತನ್ನ ಪ್ರೊಡಕ್ಷನ್ನಲ್ಲಿ ಲಾಫಿಂಗ್ ಬುದ್ಧನನ್ನ ಕೆತ್ತಿ ಪ್ರೇಕ್ಷಕರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋಕೆ ವೇದಿಕೆ ಮಾಡಿದ್ರು. ಇಂದು ಆ ಲಾಫಿಂಗ್ ಬುದ್ಧ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟಿದ್ದಾನೆ. ಸಹ ಕಲಾವಿಧನಾಗಿ ಫೇಮಸ್ ಆಗಿದ್ದ ಪ್ರಮೋದ್ ಶೆಟ್ಟಿ ಲಾಫಿಂಗ್ ಬುದ್ಧನಲ್ಲಿ ಹೀರೋ ಆಗಿ ಮತ್ತೆ ಸೂಪರ್ ಸಕ್ಸಸ್ ಆಗಿದ್ದಾರೆ..

Tap to resize

Latest Videos

ಅಮ್ಮನ ತವರಿಗೆ ಬಂದು ಕೃಷ್ಣನ ಆಶೀರ್ವಾದ ಪಡೆದ ಜೂ. ಎನ್‌ಟಿಆರ್, ಸಾಥ್ ಕೊಟ್ಟ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಿರ್ಮಾಣ ಲಾಫಿಂಗ್ ಬುದ್ಧ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ, ಸುಂದರ್ ರಾಜ್, ದಿಗಂತ್ ಮಂಚಾಲೆ ನಟಿಸಿದ್ದಾರೆ. ಭರತ್ ರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಫನ್ ಜೊತೆ ಕ್ರೈಂ ಸ್ಟೋರಿ ಇದೆ. ಗೋವರ್ಧನ್ ಅನ್ನೋ ಹೆಡ್ ಕಾನ್ಸ್ಟೇಬಲ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ನೀರೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗೆ ತಿಂಡಿಗಳ ಬಗ್ಗೆ ವಿಶೇಷ ಪ್ರೀತಿ. ತಿಂಡಿಗಳನ್ನ ತಿಂದೂ ತಿಂದೂ ದೊಳ್ಳುಹೊಟ್ಟೆ ಮಾಡಿಕೊಂಡಿರುತ್ತಾನೆ. ಈತನಿಗೆ ಫಿಟ್ನೆಸ್ ಇಲ್ಲ ಅಂತ ಕೆಲಸಕ್ಕೆ ಕುತ್ತು ಬರುತ್ತದೆ. ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಪ್ರಮುಖ ಕೇಸ್ ಒಂದು ಬರುತ್ತದೆ. ನಂತರ ಏನಾಗುತ್ತದೆ ಅನ್ನೋದು ಸಿನಿಮಾದ ಕಥೆ. 

ಹೆಲೋ, ನಿಮ್ಮ ಅಚ್ಚುಮೆಚ್ಚಿನ ಸ್ಯಾಂಡಲ್‌ವುಡ್ ತಾರೆಗಳ ಮನೆ ಹೆಸರುಗಳು ಹೀಗಿವೆ ನೋಡಿ..!

ಈ ಸಿನಿಮಾ ತಂಡ ಪೊಲೀಸರಿಗಾಗಿ ವಿಶೇಷ ಶೋ ಆಯೋಜನೆ ಮಾಡಿತ್ತು. ಇಡೀ ಕರ್ನಾಟಕ ಪೊಲೀಸ್ ಬಳಗ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಈ ಮೂಲಕ ಪ್ರಮೋದ್ ಶೆಟ್ಟಿ ಹೀರೋ ಆಗಿಯೂ ಗೆದ್ದಿದ್ದಾರೆ.  ಅಲ್ಲಿಗೆ, ಇಲ್ಲಿಯವರೆಗೂ ಇದ್ದ ಶೆಟ್ಟರ 'ತ್ರಿಮೂರ್ತಿಗಳು' ಹೆಸರಿಗೆ ಇನ್ನೊಬ್ಬರು ಸೇರ್ಪಡೆ ಆಗಿದ್ದಾರೆ. ಆದಷ್ಟು ಬೇಗ ಹೊಸ ಹೆಸರು ಹುಡುಕಿಕೊಳ್ಳಿ!

click me!