ನರ್ಸ್‌ನ ಇಟ್ಕೋಬಹುದಲ್ಲ, ಮದ್ವೆಯೆಲ್ಲಾ ಯಾಕೆ: ಹಿರಿಯ ನಟ ದತ್ತಣ್ಣ

By Govindaraj SFirst Published Jun 1, 2024, 8:54 PM IST
Highlights

81ರ ಹರೆಯದ ಹಿರಿಯ ನಟ ದತ್ತಣ್ಣ ಇದುವರೆಗೂ ಮದುವೆಯೇ ಆಗಲಿಲ್ಲ. ಇದೀಗ ದತ್ತಣ್ಣ ಅವರು ಮದುವೆ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಎಚ್ ಜಿ ದತ್ತಾತ್ರೇಯ ಎಂದರೆ ಯಾರು ಅಂತ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಅದೇ ದತ್ತಣ್ಣ ಅಂದಕೂಡಲೇ ಥಟ್ಟನೇ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡದ ನಟರು ಅಂತ ನೆನಪಾಗುವುದು. 81ರ ಹರೆಯದ ಹಿರಿಯ ನಟ ದತ್ತಣ್ಣ ಇದುವರೆಗೂ ಮದುವೆಯೇ ಆಗಲಿಲ್ಲ. ಅಷ್ಟೇ ಅಲ್ಲದೆ ಮದುವೆ ಆಗಬೇಕು ಅಂತ ಕೂಡ ಅವರಿಗೆ ಅನಿಸಿಲ್ಲ ಎಂದು ಈ ಹಿಂದೆ ಹೇಳಿದ್ದಾರೆ. ಇದೀಗ ದತ್ತಣ್ಣ ಅವರು ಮದುವೆ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಡಿಕೋಡ್ ವಿತ್ ಧನುಷ್ ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ದತ್ತಣ್ಣ, ತನ್ನ ಗೆಳೆಯನಿಗೆ 21-22 ವರ್ಷ ಇರಬಹುದು ನಿನಗೆ ಇಷ್ಟು ಬೇಗ ಮದುವೆ ಯಾಕೆ ಅಂತಾ ನಾನು ಕೇಳಿದಾಗ ನನ್ ಅಪ್ಪ ಇದನ್ನ ಮಾಡಿದ್ರೂ ನಮ್ ಅಮ್ಮ ಹೇಳಿದ್ರು ಅದಕ್ಕೆ ಮದುವೆ ಆದೆ ಅಂದ. ಇದು ಮದುವೆ ಆಗುವುದಕ್ಕೆ ಸರಿಯಾದ ಕಾರಣನಾ ಅಂತ ಕೇಳಿದಾಗ ಅದಕ್ಕೆ ಆತ ಉತ್ತರ ಕೊಡಲಿಲ್ಲ. ಇನ್ಯಾರೋ ಇಲ್ಲ, ನಮ್ ತಾಯಿ ಕಾಯಿಲೆ ಇದಾರೆ, ಅವರನ್ನ ನೋಡಿಕೊಳ್ಳುವುದಕ್ಕೆ ಯಾರಾದರೂ ಬೇಕು ಎಂದ. ನಿನಗೆ ನರ್ಸ್ ಬೇಕು ಅಂತಾ ನೀನು ಮದುವೆ ಆದೆ. ಅದರ ಬದಲು ನೀನು ನರ್ಸ್‌ನ ಇಟ್ಕೋಬಹುದಲ್ಲ ಅಂದೆ.  ಅದಕ್ಕೆ ಮನೆಯಿಂದ ಸಿಕ್ಕಾಪಟ್ಟೆ ಪ್ರೆಶರ್, ಸೋ ಬೇರೆಯವರ ಪ್ರೆಶರ್‌ಗೋಸ್ಕರ ನೀನು ಮದುವೆಯಾದೆ. ಅದು ಏನು ಕಾರಣ ಇತ್ತೋ, ಆ ಕಾರಣ ಮದುವೆಯಿಂದ ಬಗೆಹರಿದಿದ್ಯಾ ಎಂದಾಗ ಆತನ ಬಳಿ ಉತ್ತರ ಇಲ್ಲ. ಬರೀ ಮುಖದ ಎಕ್ಸ್‌ಪ್ರೆಶನ್ ಕೊಟ್ಟ. ಇವನ್ನೆಲ್ಲಾ ನೋಡಿ ನನಗೆ ಯೋಚನೆ ಆಗಿ, ಈ ಕಾರಣಗಳಿಗೆ ಒಬ್ಬ ಮನುಷ್ಯ ಮದುವೆಯಾಗಬೇಕು ಅನ್ನೋದಿದ್ರೆ ನನಗೆ ಆ ಮದುವೆ ಬೇಡ. ಒಟ್ಟಿನಲ್ಲಿ ನನಗೆ ಲಗ್ನ ಆಗ್ಲಿಲ್ಲ, ಕಾಲ ಮೀರಿಹೋಯ್ತು ಎಂದು ದತ್ತಣ್ಣ ಸಂದರ್ಶನದಲ್ಲಿ ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

Latest Videos

A post shared by Decode with dhanush (@decode_with_danush)


ಇನ್ನು ದತ್ತಣ್ಣ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ, ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ನಲ್ಲಿಯೂ ಅವರು ಕೆಲಸ ಮಾಡಿದ್ದರು. ಆಮೇಲೆ 45ನೇ ವರ್ಷದಲ್ಲಿ ದತ್ತಣ್ಣ ಅವರು ನಟಿಸಲು ಆರಂಭಿಸಿದರು. ದತ್ತಣ್ಣ ಅವರು ಹಿಂದಿ ಸಿನಿಮಾ ( ಉದ್ಭವ್-1988) ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದುವರೆಗೂ 217ಕ್ಕೂ ಅಧಿಕ ಸಿನಿಮಾಗಳಲ್ಲಿ ದತ್ತಣ್ಣ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಸಾವಿರಾರು ಎಪಿಸೋಡ್ ಇರುವ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ ಅವರನ್ನು ಡಿಡಿ9 ಫಾದರ್ ಎಂದು ಕೂಡ ಅವರನ್ನು ಕರೆಯಲಾಗುತ್ತಿತ್ತಂತೆ.  ಶೂಟಿಂಗ್‌ನಲ್ಲಿಯೇ ಬ್ಯುಸಿಯಾಗಿದ್ದರು. ಎಸ್ಸೆಸೆಲ್ಸಿಯಲ್ಲಿ ರಾಜ್ಯಕ್ಕೆ ನಂಬರ್‌ 1 ರ್ಯಾಂಕ್‌ ಪಡೆದಿದ್ದರು ದತ್ತಣ್ಣ. 

ಸಾವಿರ ಕೋಟಿ ಕೊಟ್ಟರೆ ಅಷ್ಟರಲ್ಲಿ ಪ್ರೇಮಲೋಕ 2 ಸಿನಿಮಾ ಮಾಡುವುದು ಹೇಗೆಂದು ಪ್ಲಾನ್‌ ಮಾಡುತ್ತೇನೆ: ರವಿಚಂದ್ರನ್‌

2013ರಲ್ಲಿ ಫಿಜಿ ಇಂಟರ್‌ನ್ಯಾಶನಲ್‌ ಸಿನಿಮೋತ್ಸವದಲ್ಲಿ ಭಾರತ್‌ ಸ್ಟೋರ್ಸ್‌ ಸಿನಿಮಾದ ನಟನೆಗೂ ಇವರಿಗೆ ಪ್ರಶಸ್ತಿ ಸಿಕ್ಕಿದೆ. 22ನೇ ವಯಸ್ಸಿಗೆ ಪೈಲಟ್‌ ಆಫೀಸರ್‌ ಆಗಿ ವಾಯುಸೇನೆಗೆ ದತ್ತಣ್ಣ ಆಯ್ಕೆಯಾಗಿದ್ದರು. ಮದುವೆ ಜೀವನದ ಬಗ್ಗೆ ಆಸಕ್ತಿ ಇಲ್ಲ, ಮದುವೆಯಾಗದೆ ಖುಷಿ ಆಗಿರಬಹುದು. ಯಾವುದೇ ಜಂಜಾಟವಿಲ್ಲದೆ ಆರಾಮಾಗಿ ಇರಬಹುದು ಮದುವೆಯಾದ ಕೆಲವೇ ದಿನಗಳಿಗೆ ಗಂಡ-ಹೆಂಡತಿ ಮಧ್ಯೆ ಬೇಜಾರು ಬರುತ್ತದೆ. ಪತಿ-ಪತ್ನಿಯಾಗಿ ಆಯ್ಕೆ ಮಾಡಿಕೊಂಡಿದ್ದೇವೆ ಎನ್ನುವ ಕಾರಣಕ್ಕೆ ಕೊನೆತನಕ ಒಟ್ಟಿಗಿದ್ದು ಬಾಳುವವರೂ ಇದ್ದಾರೆ. ಕ್ಷಣಿಕ ಸುಖ, ಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಬೇಕು ಎಂದು ಮದುವೆಯಾಗಬೇಕು ಅಂತ ನನಗೆ ಯಾವುದೂ ಅನಿಸಿಲ್ಲ ಎಂದು ಸಾಕಷ್ಟು ಬಾರಿ ದತ್ತಣ್ಣ ಅವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.

click me!