
ಎಂಟು ತಿಂಗಳ ಈ ಸಿಂಹದ ಮರಿ ಡಾ.ರಾಜ್‌ಕುಮಾರ್ ಅವರ ಜನ್ಮದಿನದಂದೇ ಹುಟ್ಟಿರೋದು ವಿಶೇಷ.
ಈ ಸಂದರ್ಭ ಮಾತನಾಡಿದ ವಶಿಷ್ಠ ಸಿಂಹ, ‘ನನಗೆ ಮೊದಲಿಂದಲೂ ಕಾಡು ಅಂದರೆ ಬಹಳ ಇಷ್ಟ. ವನ್ಯಜೀವಿಗಳ ಸಂರಕ್ಷಣೆ ನನ್ನ ಹೊಸ ವರ್ಷದ ರೆಸಲ್ಯೂಶನ್. ಈ ಹಿನ್ನೆಲೆಯಲ್ಲಿ ಪ್ರಕೃತಿಯ ಆಹಾರ ಸರಪಣಿಯ ಮಹತ್ವದ ಕೊಂಡಿಯಂತಿರುವ ಸಿಂಹದ ಮರಿಯನ್ನು ದತ್ತು ಪಡೆದಿದ್ದೇನೆ. ಇದಕ್ಕೆ ನನ್ನ ತಂದೆಯವರ ಹೆಸರನ್ನೇ ಇಟ್ಟಿದ್ದೇನೆ. ನಮಗೆ ಇಷ್ಟೆಲ್ಲ ನೀಡಿದ ಪ್ರಕೃತಿಗೆ ನಾನು ಕೊಡುತ್ತಿರುವ ಕಿಂಚಿತ್ ಕೊಡುಗೆ ಇದು. ಹಿಂದಿನ ಸಲ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದಾಗಲೇ ಈ ನಿರ್ಧಾರಕ್ಕೆ ಬಂದಿದ್ದೆ. ಈಗ ಕಾಲ ಕೂಡಿಬಂತು’ ಎಂದರು. ಕಬಿನಿ ಕುರಿತಾದ ಡಾಕ್ಯುಮೆಂಟರಿಯಲ್ಲೂ ಭಾಗಿಯಾಗಿರುವುದಾಗಿ ಅವರು ಹೇಳಿದರು.
ದುನಿಯಾ v/s ಸಿಂಹ; ಹೊಸ ಚಿತ್ರಕ್ಕೆ ಜತೆಯಾದ ಇಬ್ಬರು ಖಡಕ್ ಕಲಾವಿದರು!
ಈ ವೇಳೆಗೆ ವಸಿಷ್ಠ ಸಿಂಹ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದ ಮುಖ್ಯಸ್ಥೆ ವನಶ್ರೀ ವಿಪಿನ್ ಸಿಂಗ್ ಅವರಿಗೆ 1,25,000 ರು.ಗಳ ಚೆಕ್ ನೀಡಿದರು. ‘ಬನ್ನೇರುಘಟ್ಟಉದ್ಯಾನವನದಲ್ಲಿ ಪ್ರಾಣಿ ದತ್ತು ಪಡೆದ ಮೊದಲ ನಟ ವಶಿಷ್ಠ ಸಿಂಹ. ಈ ಸ್ಫೂರ್ತಿಯಲ್ಲಿ ಇನ್ನಷ್ಟುಮಂದಿ ಪ್ರಾಣಿಗಳನ್ನು ದತ್ತು ಪಡೆಯುವ ಕಾರ್ಯಕ್ಕೆ ಮುಂದಾಗಬೇಕು’ ಎಂದು ವನಶ್ರೀ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.