'ಸೂಪರ್‌ ಸ್ಟಾರ್‌'ಗೆ ನಾಗತಿಹಳ್ಳಿ ಬಂದಿದ್ದು ಯಾಕೆಂಬ ಸಂಗತಿಯನ್ನು ಬಿಚ್ಚಿಟ್ಟ ಉಪೇಂದ್ರ!

By Shriram Bhat  |  First Published Sep 15, 2024, 11:34 AM IST

ನಂಗೆ ನಾನೇ ಡೈರೆಕ್ಷನ್ ಮಾಡ್ಕೊಂಡು ಇದ್ದವ್ನು, ಸಡನ್ನಾಗಿ ಬೇರೆ ಒಬ್ರ ನಿರ್ದೇಶನದಲ್ಲಿ ಕೆಲಸ ಮಾಡೋದು ಕೂಡ ಸಾಕಷ್ಟು ಚಾಲೇಂಜ್ ಆಗಿತ್ತು. ಆದರೆ, ಸೂಪರ್ ಸ್ಟಾರ್ ಟೈಮ್‌ನಲ್ಲಿ ಆ ಪ್ರಯೋಗ ಮಾಡ್ಬೇಕು ಅಂತ ನಿರ್ಧಾರ ಆಯ್ತು. ಸ್ಕ್ರಿಪ್ಟ್ ರೆಡಿ ಇತ್ತು, ನಾಗತಿಹಳ್ಳಿ ಅವ್ರಿಗೆ ಮಾಡಿ ಅಂತ ಕೇಳ್ಕೊಂಡ್ವಿ...


ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಖಾಸಗಿ ಚಾನೆಲ್ಲೊಂದರ ಸಂದರ್ಶನದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಬಗ್ಗೆ ಮಾತನಾಡಿದ್ದಾರೆ. ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ನಟ-ನಿರ್ದೇಶಕ ಉಪೇಂದ್ರ ಅವರು ತಮ್ಮ ನಟನೆಯ 'ಸೂಪರ್ ಸ್ಟಾರ್' ಚಿತ್ರಕ್ಕೆ ಡೈರೆಕ್ಟರ್ ಆಗಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಬಂದಿದ್ದು ಹೇಗೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಹಾಗಿದ್ದರೆ, ಉಪೇಂದ್ರ ಸ್ವತಃ ನಿರ್ದೇಶಕರಾಗಿದ್ದರೂ, ಆ ಸಮಯದಲ್ಲಿ ಉಪೇಂದ್ರ ಕನ್ನಡದ ಟಾಪ್ ಡೈರೆಕ್ಟರ್ ಎನ್ನಿಸಿದ್ದರೂ, ಆ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಬಂದಿದ್ದು ಹೇಗೆ? 

'ಸೂಪರ್ ಸ್ಟಾರ್ ಸಿನಿಮಾಗೆ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಡೈರೆಕ್ಟರ್ ಆಗಿ ತಂದಿದ್ದು ನೀವೇನಾ ಎಂದು ಖಾಸಗಿ ಚಾನೆಲ್ ಸಂದರ್ಶನವೊಂದರಲ್ಲಿ ಉಪೇಂದ್ರ ಅವರಿಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ. ಹಾಗಿದ್ದರೆ ಉಪೇಂದ್ರ ಅವರು ಏನು ಹೇಳಿದ್ದಾರೆ? ಬೇರೆ ಏನೇನು ಮಾತನಾಡಿದ್ದಾರೆ? ಇಲ್ಲಿದೆ ಫುಲ್ ಡೀಟೇಲ್ಸ್.. 

Tap to resize

Latest Videos

undefined

ಪೃಥ್ವಿ- ಧನ್ಯಾ ಜೋಡಿ ರೊಮಾನ್ಸ್; ಅಂಡಮಾನ್-ನಿಕೋಬಾರ್‌ನಲ್ಲಿ 'ಚೌಕಿದಾರ್'..!

ಆ ಚಿತ್ರವನ್ನು ನನ್ನ ಬದಲಿಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನ ಮಾಡೋದಕ್ಕೆ ಕಾರಣವಾಗಿದ್ದು ಅಂದು ಇದ್ದ ಕೆಲವು ಪರಿಸ್ಥಿತಿಗಳು. ಆ ಚಿತ್ರವನ್ನು ನಾಗತಿಹಳ್ಳಿ ಬದಲು ಬೇರೊಬ್ಬರು ಮಾಡಬೇಕಿತ್ತು. ಆಗ ಸಾಕಷ್ಟು ಗೊಂದಲಗಳಿದ್ದವು. ಆದರೆ, ನಾನು ಮಾಡಿದ್ದ ಸ್ಕ್ರಿಪ್ಟ್‌ ಅನ್ನುಬೇರೊಬ್ಬರ ಕೈನಲ್ಲಿ ಕೊಟ್ಟು ಮಾಡಿಸಬೇಕು ಎಂದಾಗ ಅಲ್ಲಿ ಸಾಕಷ್ಟು ಸಂಗತಿಗಳು ಬಂದು ಹೋದವು. ಆದರೆ, ಫೈನಲೀ ಅದನ್ನು ನಾಗತಿಹಳ್ಳಿ ಅವರಿಗೆ ಕೊಟ್ಟು ಮಾಡಿಸಲಾಯ್ತು' ಎಂದಿದ್ದಾರೆ ಉಪೇಂದ್ರ. 

ನಂಗೆ ನಾನೇ ಡೈರೆಕ್ಷನ್ ಮಾಡಿ ಮಾಡಿ, ಸಡನ್ನಾಗಿ ಬೇರೆ ಒಬ್ರ ನಿರ್ದೇಶನದಲ್ಲಿ ಕೆಲಸ ಮಾಡೋದು ಕೂಡ ಸಾಕಷ್ಟು ಚಾಲೇಂಜ್ ಆಗಿತ್ತು. ಆದರೆ, ಸೂಪರ್ ಸ್ಟಾರ್ ಟೈಮ್‌ನಲ್ಲಿ ಆ ಪ್ರಯೋಗ ಮಾಡ್ಬೇಕು ಅಂತ ನಿರ್ಧಾರ ಆಯ್ತು. ಸ್ಕ್ರಿಪ್ಟ್ ರೆಡಿ ಇತ್ತು, ನಾಗತಿಹಳ್ಳಿ ಅವ್ರಿಗೆ ಮಾಡಿ ಅಂತ ಕೇಳ್ಕೊಂಡ್ವಿ, ಓಕೆ ಅಂದ್ರು. ಆಗ ಕನ್ನಡ ಸಿನಿಮಾ ಉದ್ಯಮದಲ್ಲಿ ಇದ್ದವರೇ ಏಳೆಂಟು ಮಂದಿ ಡೈರೆಕ್ಟರ್ಸ್.. ನಮ್ಮ ನಿರ್ಮಾಪಕರು ಆಗ ಎಲ್ಲಾ ನಿರ್ದೇಶಕರುಗಳನ್ನೂ ಅಪ್ರೋಚ್ ಮಾಡಿದಾರೆ. ಅದರೆ, ಬೇರೆ ಬೇರೆ ಕಾರಣಗಳಿಂದ ಅವರಲ್ಲಿ ಯಾರೂ ಆಯ್ಕೆ ಆಗಲಿಲ್ಲಿ. 

ನಟ ಸುಂದರ್ ಕೃಷ್ಣ ಅರಸು 'ಅದೊಂದು' ತಪ್ಪಿನಿಂದಲೇ ಸಾವನ್ನಪ್ಪಿದರೋ ಹೇಗೆ?

ಬಳಿಕ, ನಾಗತಿಹಳ್ಳಿ ಅವರು ಸ್ಕ್ರಿಪ್ಟ್ ಒಪ್ಪಿ ನಿರ್ದೇಶನ ಮಾಡಿಕೊಟ್ಟರು. ಇಂಡಸ್ಟ್ರಿಯಲ್ಲಿ ಕೆಲವರು, ಸಿನಿಪ್ರೇಕ್ಷಕರಲ್ಲಿ ಹಲವರು ಅದು ನನ್ನ ಜೋನರ್ ಸಿನಿಮಾ, ನಾಗತಿಹಳ್ಳಿ ಅವರದ್ದು ಆಗಿರಲಿಲ್ಲ ಎನ್ನುವ ಅಭಿಪ್ರಾಯವನ್ನು ಆಗಲೂ ಈಗಲೂ ವ್ಯಕ್ತಪಡಿಸುತ್ತಾರೆ. ಆದರೆ, ಆಗಿದ್ದು ಆಗಿ ಹೋಗಿದೆ. ಅಂದಿನ ಪರಸ್ಥಿತಿ ಹಾಗಿತ್ತು, ಹಾಗೇ ಆಗಬೇಕಿತ್ತು ಬೇರೆ ದಾರಿ ಇರಲಿಲ್ಲ. ಕಳೆದು ಹೋಗಿದ್ದರ ಬಗ್ಗೆ ನಾವು ಮಾತನಾಡಬಹುದೇ ಹೊರತೂ ಬದಲಾಯಿಸಲಂತೂ ಸಾಧ್ಯವಿಲ್ಲ' ಎಂದಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. 

click me!