'ಯುಐ' ಬಗ್ಗೆ ಇವ್ರ ವಿಮರ್ಶೆ ಕೇಳಿದ್ರೆ ನೋಡೋದು ಬೇಡ ಅಂದ್ಕೊಂಡಿದ್ರೂ ನೀವು ಹೋಗ್ತೀರಾ!

By Shriram Bhat  |  First Published Dec 23, 2024, 12:47 PM IST

ಈ 'ಯುಐ' ಪ್ರೇಮಿ ಅದೇನು ಹೇಳಿದ್ದಾರೆ ಗೊತ್ತಾ? ನೋಡಿ ಇಲ್ಲಿದೆ.. 'ಯುಐ ಸಿನಿಮಾ ನಮ್ಮನ್ನ ನಾವು ವಿಮರ್ಶೆ ಮಾಡಿಕೊಳ್ಳುವಂತಹ ಸಿನಿಮಾ ಅದು.. ನಾವು ಆ ಸಿನಿಮಾ ವಿಮರ್ಶೆ ಮಾಡೋದು ತಪ್ಪಾಗುತ್ತೆ.. ಇದು ಮಾಮೂಲಿ ತರಹದ ಸಿನಿಮಾ ಅಲ್ಲ, ಈ ಸಿನಿಮಾ ನೋಡಿ ನಮ್ಮನ್ನ ನಾವು ವಿಮರ್ಶೆ ಮಾಡಿಕೊಳ್ಳಬೇಕು...


ಸದ್ಯಕ್ಕೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಿರ್ದೇಶನದ 'ಯುಐ' ಸಿನಿಮಾ (UI) ಬಗ್ಗೆ ಜಗತ್ತು ತಲೆ ಕೆಡಿಸಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಸಿನಿಮಾಪ್ರಿಯರು, ಉಪ್ಪಿ ಅಭಿಮಾನಿಗಳು ಈ ಸಿನಿಮಾ ಮೇಲೆ ತುಂಬಾ ನಿರೀಕ್ಷೆಇಟ್ಟುಕೊಂಡು ನೋಡಿದ್ದಾರೆ. ಕೆಲವರಿಗೆ ಅರ್ಥವಾಗಿದೆ, ಹಲವರಿಗೆ ಅರ್ಥವಾಗಿಲ್ಲ. ಆದರೆ, ಈ ಸಿನಿಮಾ ಬಗ್ಗೆ ಮಾಡುತ್ತಿರುವ ರೀವ್ಯೂ ಅದೆಷ್ಟು ವಿಭಿನ್ನವಾಗಿದೆ ಎಂದರೆ, ಅದೇ ಸಖತ್ ಟ್ರೋಲ್ ಆಗುತ್ತಿದೆ. ಆದರೆ, ಯೂಟ್ಯೂಬ್‌ನಲ್ಲಿ ಒಬ್ಬರು ಮಾಡಿರುವ ವಿಮರ್ಶೆ ತುಂಬಾ ವಿಭಿನ್ನವಾಗಿದ್ದು ಭಾರೀ ಮೆಚ್ಚುಗೆ ಗಳಿಸಿದೆ. 

ಹಾಗಿದ್ದರೆ ಈ 'ಯುಐ' ಪ್ರೇಮಿ ಅದೇನು ಹೇಳಿದ್ದಾರೆ ಗೊತ್ತಾ? ನೋಡಿ ಇಲ್ಲಿದೆ.. 'ಯುಐ ಸಿನಿಮಾ ನಮ್ಮನ್ನ ನಾವು ವಿಮರ್ಶೆ ಮಾಡಿಕೊಳ್ಳುವಂತಹ ಸಿನಿಮಾ ಅದು.. ನಾವು ಆ ಸಿನಿಮಾ ವಿಮರ್ಶೆ ಮಾಡೋದು ತಪ್ಪಾಗುತ್ತೆ.. ಇದು ಮಾಮೂಲಿ ತರಹದ ಸಿನಿಮಾ ಅಲ್ಲ, ಈ ಸಿನಿಮಾ ನೋಡಿ ನಮ್ಮನ್ನ ನಾವು ವಿಮರ್ಶೆ ಮಾಡಿಕೊಳ್ಳಬೇಕು. ನಾವು ರಿಯಾಲಿಟಿಯಲ್ಲಿ ಏನಾಗಿದೆವೋ ಹೇಗಿದೆವೋ ಅದನ್ನ ತೋರ್ಸಿದಾರೆ ಉಪೇಂದ್ರ ಅವರು. ಅವ್ರ ಸಿನಿಮಾ ಅರ್ಥ ಮಾಡ್ಕೊಂಡ್ರೆ ನಾವು ಬದಲಾಗ್ತೀವಿ, ಇಲ್ಲ ಅಂದ್ರೆ ಆಗಲ್ಲ.

Tap to resize

Latest Videos

undefined

ಶಿವರಾಜ್‌ಕುಮಾರ್-ವಿನೋದ್ ರಾಜ್‌ ಭೇಟಿ ವೇಳೆ ಯಾವ ಗುಟ್ಟು ಹೊರಬಿತ್ತು? ಓಹೋ, ಇದಾ ವಿಷ್ಯ?

ಸರಿ ಅನ್ನೋದು ನಮ್ಮೊಳಗೆ ಇದೆ. ಆದ್ರೆ ಇಲ್ಲಿ ಬಂದಿರೋ 90% ಜನಕ್ಕೆ ಅರ್ಥ ಆಗಿಲ್ಲ ಇನ್ನು ಕೂಡ ಇದು.. ಅವ್ರು ಇನ್ನೂ ನೂರು ಸಲ ನೋಡಿದ್ರೂ ಅವ್ರಿಗೆ ಈ ಫಿಲಂ ಅರ್ಥ ಆಗಲ್ಲ. ಯಾಕೆ ಅಂದ್ರೆ,  ಮೈಂಡ್‌ಸೆಟ್‌ನಿಮದ ನೋಡಲ್ಲ ಅವ್ರು. ಈಗ, ಥಿಯೇಟರ್‌ನಿಮದ ಹೋದ ತಕ್ಷಣ ಅಲ್ಲೆಲ್ಲೋ ಹೋಗಿ, ರಾಜಕೀಯ ವ್ಯಕ್ತಿಗಳಿಗೆ ಅಣ್ಣಾ, ನೀವೇ ನಮ್ ಬಾಸ್ ಅಂತಾರೆ. ಇದೇ ಅವ್ರು ಮಾಡ್ತಿರೋ ತಪ್ಪು.. 

ಫೋಕಸ್ ಫೋಕಸ್ ಅಂತ ಸ್ಟಾರ್ಟಿಂಗ್‌ನಿಂದನೂ ಅವ್ರು ಸಿನಿಮಾದಲ್ಲಿ ಹೇಳ್ತಿದಾರೆ. ಫೋಕಸ್ ಯಾರಿಗೆ ಸಿಗ್ತಿಲ್ಲ ಅಂತಾನೂ ಹೇಳ್ತಿದಾರೆ ಅವ್ರು.. ಆ ಫೋಕಸ್ ಅನ್ನೋದು ಯಾರಿಗೆ ಅರ್ಥ ಆಗುತ್ತೋ ಅವ್ರು ಥಿಯೇಟರ್‌ನಿಂದ ಕೂಲ್ ಆಗಿ ಹೋಗ್ತಾರೆ.. ಇಲ್ಲ ಅಂದ್ರೆ, ಇನ್ನೂ ನೂರು ಬಾರಿ ತಲೆ ಕೆಡಿಸ್ಕೋತಾನೆ. ಫೋಕಸ್ ಅಂದ್ರೆ ಏನಪ್ಪಾ ಅಂದ್ರೆ ಇಷ್ಟೆನೇ, ಬೇಡದೇ ಇರೋ ವಿಚಾರಗಳಿಗೆ ನಾವು ತುಂಬಾ ತಲೆ ಕೆಡಿಸ್ಕೋತಾ ಇದೀವಿ.. ನಮ್ಮ ದಿನನಿತ್ಯದ ಕೆಲಸ, ನಾವ್ ಉದ್ದಾರ ಆಗೋದಕ್ಕೆ ಏನ್ ಮಾಡ್ಬೇಕೋ ಅದ್ರ ಬಗ್ಗೆ ತಲೆ ಕೆಡಿಸ್ಕೋತಿಲ್ಲ.. 

ವರದಪ್ಪ ಅಂದು ಹೇಳಿದ್ದ ಮಾತನ್ನು ನಾನು ಎಂದಿಗೂ ಮರೆಯೊಲ್ಲ: ಪಾರ್ವತಮ್ಮ ರಾಜ್‌ಕುಮಾರ್

ರೀಲ್ಸು, ಆ ಪೊಲಿಟೀಶನ್ನು, ಆ ಸ್ಟಾರ್, ಈ ಸ್ಟಾರ್, ಕ್ರಿಕೆಟ್, ಇನ್ನೊಂದು ಮತ್ತೊಂದು ಅಂತ, ಅವ್ನು ಹಿಂಗಾದ, ಇವ್ನು ಹಿಂಗಾದ, ಅದೂ ಇದೂ ಅಂತ, ಅವ್ನು ಅದಾದ, ಇವ್ನು ಇದಾದ, ಅವ್ನು ಎಷ್ಟೆತ್ತರಕ್ಕೆ ಬೆಳೆದ, ಅಂತ ಬೇರೆಯವ್ರಿಗೆ ಬಗ್ಗೆ ಮಾತಾಡ್ತೀವಿ. ನಾವು ಎಲ್ಲಿದೀವಿ, ಏನ್ ಮಾಡ್ತಾ ಇದೀವಿ ಅಂತ ನಮ್ಮ ಬಗ್ಗೆ ನಾವು ತಿಳ್ಕೊಂಡಿರಲ್ಲ.. ನಮ್ಮ ಪೊಸಿಶನ್ ಕರೆಕ್ಟಾಗಿ ಅರ್ಥ ಮಾಡ್ಕೊಂಡು ನಮ್ಮ ವೇ ದಲ್ಲಿ ನಾವು ಹೋದ್ರೆ ಅದೇ ಫೋಕಸ್. ನಮ್ಮ ಬದುಕಿಗೆ ನಾವು ಫೋಕಸ್ ಮಾಡಿದ್ರೆ ಈ ಸಿನಿಮಾ..' ಎಂದಿದ್ದಾರೆ ಇಲ್ಲಿ ಹೇಳಿರುವ ಸಿನಿಮಾ ಪ್ರೇಕ್ಷಕರೊಬ್ಬರು. 

ಈ ಪ್ರೇಕ್ಷಕರ ಮಾತನ್ನು ಕೇಳಿದರೆ ಇವರು ಖಂಡಿತ ಉಪೇಂದ್ರ ಫ್ಯಾನ್ ಮಾತ್ರ ಅಲ್ಲ, ಸಿನಿಮಾ ಫ್ಯಾನ್ ಎಂಬುದು ಕೂಡ ಅರ್ಥವಾಗುತ್ತದೆ. ಅವರು ಹೇಳಿದ ಮಾತನ್ನು ಪಕ್ಕದಲ್ಲಿರುವವ ಹಲವು ಪ್ರೇಕ್ಷಕರು ಕೂಡ ಅನುಮೋದಿಸಿದ್ದಾರೆ. ಒಟ್ಟಿನಲ್ಲಿ ಹೇಳಬೇಕು ಎಂದರೆ, ಉಪೇಂದ್ರ ನಿರ್ದೇಶನದ ಯುಐ ಸಿನಿಮಾ ಅರ್ಥವಾದವರಿಗೆ ಸರಿಯಾಗಿ ಅರ್ಥವಾಗಿದೆ. ಇಂತಹ ಸಿನಿಮಾ ಮಾಡಿರುವ ಉದ್ದೇಶ, ಸಮಾಜದಲ್ಲಿ ಬೀರಬೇಕಾದ ಪರಿಣಾಮ ಎಲ್ಲವೂ ಸಿನಿಮಾವನ್ನು ಅರ್ಥ ಮಾಡಿಕೊಂಡವರಿಗೆ ಸಾಧ್ಯವಿದೆ. ಅರ್ಥ ಆಗದೇ ಇರುವವರ ಬಗ್ಗೆ ಏನೂ ಮಾತನಾಡಬೇಕಾದ ಅಗತ್ಯವಿಲ್ಲ. 

ಬಾಕ್ಸಾಫೀಸ್​ನಲ್ಲಿ ಉಪ್ಪಿ ಬ್ಯಾಂಗ್ ಬ್ಯಾಂಗ್; ಕಲೆಕ್ಷನ್​ನಲ್ಲಿ 'UI' ಕಮಾಲ್!

click me!