
ಸಿಂಪಲ್ ಸ್ಟಾರ್ ಚಿಕ್ಕಣ್ಣ ಹಾಗೂ ಕಿರುತೆರೆ ನಟಿ ಮಲೈಕಾ ನಟಿಸಿರುವ ಉಪಾಧ್ಯಕ್ಷ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಸ್ಯ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಚಿಕ್ಕಣ್ಣ ಈಗ 30-50 ಅಡಿ ಕಟೌಟ್ ಹಾಕುವಷ್ಟು ದೊಡ್ಡ ನಟನಾಗಿದ್ದಾರೆ. ಸ್ಮಿತಾ ಉಮಾಪತಿ ನಿರ್ಮಾಣ ಮಾಡಿರುವ ಈ ಚಿತ್ರ ಬಿಡುಗಡೆ ಕಂಡ ಮೂರೇ ದಿನಗಳಲ್ಲಿ ಹಾಕಿದ ಬಂಡವಾಳವನ್ನು ವಾಪಸ್ ಪಡೆದಿದೆ. ಚಿಕ್ಕಣ್ಣ ಸ್ಟಾರ್ ಚೇಂಜ್ ಆಯ್ತು ಅನ್ನೋದರಲ್ಲಿ ಅನುಮಾನವಿಲ್ಲ.
5.27 ಕೋಟಿ ರು. ಗಳಿಕೆ:
ಈ ಹಾಸ್ಯ ಪ್ರಧಾನ ಸಿನಿಮಾ 3 ದಿನದಲ್ಲಿ 5.27 ಕೋಟಿ ರು. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಮೊದಲ ದಿನ 1 ಕೋಟಿ 31 ಲಕ್ಷ, ಎರಡನೇ ದಿನ 1 ಕೋಟಿ 63 ಲಕ್ಷ, ಮೂರನೇ ದಿನವಾದ ಭಾನುವಾರ 2 ಕೋಟಿ 33 ಲಕ್ಷ ಕಲೆಕ್ಷನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.
Upadhyaksha Movie: ಅಧ್ಯಕ್ಷನ ಅಖಾಡದಲ್ಲಿ ಉಪಾಧ್ಯಕ್ಷನ ಕಾಮಿಡಿ ಕಿಕ್! ನಾಯಕನಾಗಿಯೂ ಗೆದ್ದ ಚಿಕ್ಕಣ್ಣ..!
ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಹಾಸ್ಯ ಘಟನೆಗಳ ಒಟ್ಟು ಮಿಶ್ರಣವೇ ‘ಉಪಾಧ್ಯಕ್ಷ’. ಆಗ ‘ಅಧ್ಯಕ್ಷ’ನಾಗಿ ಬಂದ ಶರಣ್, ಊರಿನ ಗೌಡನ ದೊಡ್ಡ ಮಗಳನ್ನು ಓಡಿಸಿಕೊಂಡು ಹೋಗುತ್ತಾನೆ. ಈಗ ‘ಉಪಾಧ್ಯಕ್ಷ’ನಾಗಿ ಬಂದ ಚಿಕ್ಕಣ್ಣನಿಗೆ ಅದೇ ಊರಿನ ಗೌಡನ ಎರಡನೇ ಮಗಳ ಜತೆಗೆ ಪ್ರೀತಿ ಹುಟ್ಟಿಕೊಳ್ಳುವುದನ್ನು ತೆರೆ ಮೇಲೆ ನೋಡಬಹುದು. ಹೀಗಾಗಿ ಈ ಚಿತ್ರವನ್ನು ‘ಅಧ್ಯಕ್ಷ’ನ ಪಾರ್ಟ್ 2 ಎಂಬುದೇ ಸೂಕ್ತ. ಸಾಧು ಕೋಕಿಲಾ, ಚಿಕ್ಕಣ್ಣ ಜತೆಗೆ ಧರ್ಮಣ್ಣ ಕಡೂರು, ಸಾಧು ಕೋಕಿಲಾ ಕೂಡ ನಗಿಸುವ ಸಾಹಸ ಮಾಡಿದ್ದಾರೆ. ಹಾಡು, ನಗು, ಪ್ರೀತಿ ಎಮೋಷನ್ ಚಿತ್ರದ ಮುಖ್ಯಾಂಶಗಳು.
ರಾಜಹುಲಿನ ಭೇಟಿ ಮಾಡಿದ ಉಪಾಧ್ಯಕ್ಷ; ಅತ್ತಿಗೆ ಮಾಡಿದ ತಿಂಡಿ ಹೇಗಿತ್ತು ಎಂದ ನೆಟ್ಟಿಗರು!
ಯಶ್ ಮನೆಯಲ್ಲಿ ತಿಂಡಿ:
ಉತ್ತಮ ಪ್ರದರ್ಶನ ಕಾಣುತ್ತಿರುವ ‘ಉಪಾಧ್ಯಕ್ಷ’ ಚಿತ್ರದ ನಾಯಕ ಚಿಕ್ಕಣ್ಣ ಹಾಗೂ ನಾಯಕಿ ಮಲೈಕಾ ವಸುಪಾಲ್ ಅವರನ್ನು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಗೆ ಆಹ್ವಾನಿಸಿ ಸತ್ಕರಿಸಿದ್ದಾರೆ. ಚಿಕ್ಕಣ್ಣ ಹಾಗೂ ಮಲೈಕಾ ಬೆಳಗಿನ ಉಪಹಾರವನ್ನು ಯಶ್ ಹಾಗೂ ರಾಧಿಕಾ ಜೊತೆಗೆ ಸವಿದಿದ್ದಾರೆ. ಈ ವೇಳೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರದ ಬಗ್ಗೆ ತಾರಾ ದಂಪತಿ ಚಿತ್ರತಂಡವನ್ನು ಅಭಿನಂದಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.