
ಬೆಳಗಾವಿ(ಅ.30): ಕನ್ನಡ ಚಿತ್ರರಂಗದ(Sandalwood) ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ಸುದ್ದಿಯಿಂದ ಮನನೊಂದ ಮೂವರು ಸಾವಿಗೀಡಾದ ಘಟನೆ ಜಿಲ್ಲೆಯಲ್ಲಿ ಇಂದು(ಶನಿವಾರ) ನಡೆದಿದೆ.
"
ಅಪ್ಪು ಅಗಲಿಕೆಯಿಂದ ರಾಹುಲ್ ಗಾಡಿವಡ್ಡರ ಆತ್ಮಹತ್ಯೆ ಮಾಡಿಕೊಂಡರೆ, ಪರುಶರಾಮ ಹನುಮಂತ ದೇಮಣ್ಣವರ ಎಂಬ ಯುವಕ ಹೃದಯಾಘಾತದಿಂದ(Heart Attack) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪುನೀತ್ ರಾಜಕುಮಾರ್(Puneeth Rajkumar) ನಿಧನದಿಂದ(Death) ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಬೆಳಗಾವಿ(Belagavi) ಜಿಲ್ಲೆಯ ಅಭಿಮಾನಿಯೊಬ್ಬ(Fan) ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪುನೀತ್ ರಾಜಕುಮಾರ ಅವರ ಕಟ್ಟಾ ಅಭಿಮಾನಿಯಾದ ರಾಹುಲ್ ಗಾಡಿವಡ್ಡರ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ(Athani) ಪಟ್ಟಣದಲ್ಲಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪೋಲಿಸ್(Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೃದಯಾಘಾತದಿಂದ ಅಭಿಮಾನಿ ಸಾವು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಬೆಳಗಾವಿಯ ಅಭಿಮಾನಿಯೋರ್ವ ಸಾವಿಗೀಡಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಅಪ್ಪುವಿನ ಅಪ್ಪಟ ಅಭಿಮಾನಿ ಆಗಿದ್ದ ಶಿಂಧೋಳ್ಳಿ ಗ್ರಾಮದ ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಎಂಬ ಯುವಕ ಕೊನೆಯುಸಿರೆಳೆದಿದ್ದಾನೆ.
ಪುನೀತ್ ರಾಜಕುಮಾರ ಸಾವಿನ ಸುದ್ದಿ ಕೇಳಿ ಶುಕ್ರವಾರ ಸಂಜೆಯಿಂದ ಟಿವಿ ಎದುರು ಕುಳಿತಿದ್ದನು. ಸಾವಿನಿಂದ ಆಘಾತಗೊಂಡು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮಾಳಿ ಕೆಲಸ ಮಾಡುತ್ತಿದ್ದ ಪರುಶರಾಮ ದೇಮಣ್ಣವರ ಶಿವರಾಜಕುಮಾರ ಹಾಗೂ ಪುನೀತ್ ರಾಜಕುಮಾರ ಅವರ ಅಪ್ಪಟ ಅಭಿಮಾನಿ ಆಗಿದ್ದನು ಎಂದು ತಿಳಿದು ಬಂದಿದೆ.
ಪುನೀತ್ ರಾಜ್‌ಕುಮಾರ್ ಕೊನೆಯ ಕ್ಷಣ ಹೇಗಿತ್ತು..? ಚಿಕಿತ್ಸೆ ನೀಡಿದ ಡಾ. ರಮಣ್ ರಾವ್ ಮಾತು
ಚಿತ್ರ ಬಿಡುಗಡೆ(Realease) ಆದಾಗ ಮೊದಲ ಶೋ ನೋಡಲು ಹೋಗುತ್ತಿದ್ದನು. ಶುಕ್ರವಾರ ಕೆಲಸ ಮುಗಿಸಿಕೊಂಡು ಬಂದು ಟಿವಿ ಎದುರು ಕುಳಿತಿದ್ದನು. ಅಪ್ಪುವಿನ ಪಾರ್ಥೀವ ಶರೀರ(Deadbody) ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದನು. ಶುಕ್ರವಾರ ರಾತ್ರಿ ಆಘಾತಗೊಂಡು ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು(Villagers) ತಿಳಿಸಿದ್ದಾರೆ.
ಕಂಬನಿ ಮಿಡಿದ ಕೆಎಂಎಫ್ ಅಧ್ಯಕ್ಷ ಜಾರಕಿಹೊಳಿ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಕೆಎಂಎಫ್(KMF) ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ(Balchandra Jarkiholi) ಕಣ್ಣೀರು ಹಾಕಿದ ಘಟನೆ ನಡೆಯಿತು. ಅಲ್ಲದೆ ಕೆಎಂಎಫ್ ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.
‘ಕರ್ನಾಟಕದ(Karnataka) ಹೆಮ್ಮೆಯ ಪುನೀತ ರಾಜಕುಮಾರ ನಿಧನರಾಗಿದ್ದಾರೆ ಎಂದು ತಿಳಿದು ದುಃಖವಾಯಿತು. ಕೆಎಂಎಫ್ ಪರವಾಗಿ ಪುನೀತ್‌ಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಪುನೀತ್ ರಾಜಕುಮಾರ್‌ಗೆ ನಂದಿನಿ, ಕೆಎಂಎಫ್ ಬಗ್ಗೆ ಬಹಳ ಗೌರವ ಇತ್ತು. ಕೆಎಂಎಫ್ ಬೆಳೆಯಲು ಡಾ. ರಾಜಕುಮಾರ್, ಪುನೀತ್ ಸಹಕರಿಸಿದರು, ಉಳಿಸಿದರು’ ಎಂದರು.
ಕೊಪ್ಪಳದಲ್ಲಿ ಅಭಿಮಾನಿ ಸಾವು
ಪುನೀತ್ ರಾಜಕುಮಾರ ನಿಧನದ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ(Koppal) ಅಪ್ಪು ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಜ್ಞಾನಮೂರ್ತಿ ನಿಂಗಾಪುರ (40) ಎಂಬುವರೇ ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿಯಾಗಿದ್ದಾರೆ.
ಪುನೀತ್ ರಾಜಕುಮಾರ ಪಕ್ಕಾ ಅಭಿಮಾನಿಯಾಗಿದ್ದ ಜ್ಞಾನಮೂರ್ತಿ ಬಗನಾಳ ಗ್ರಾಮದಲ್ಲಿ ಕಿರಾಣಿ ಅಂಗಡಿಯನ್ನ ನಡೆಸುತ್ತಿದ್ದರು. ನಿನ್ನೆ ಪುನೀತ್ ನಿಧನದಿಂದ ಜ್ಞಾನಮೂರ್ತಿ ಆಘಾತಕ್ಕೊಳಗಾಗಿದ್ದರು. ಪುನೀತ್ ನಿಧನದ ಸುದ್ದಿಯನ್ನು ಜ್ಞಾನಮೂರ್ತಿ ನಿರಂತರವಾಗಿ ನೋಡುತ್ತಿದ್ದರು. ಹೀಗಾಗಿ ಜ್ಞಾನಮೂರ್ತಿ ಬಹಳಷ್ಟು ಅಸ್ವಸ್ಥರಾಗಿದ್ದರು. ಬಳಿಕ ಜ್ಞಾನಮೂರ್ತಿಯನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೃದಯಘಾತಕ್ಕೊಳಗಾಗಿ ಜ್ಞಾನಮೂರ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕಿರಾಣಿ ಅಂಗಡಿಯಲ್ಲಿ ಜ್ಞಾನಮೂರ್ತಿ ಸದಾ ಪುನೀತ್ ರಾಜ್‍ಕುಮಾರ್ ಹಾಡುಗಳನ್ನೇ ಕೇಳುತ್ತಿದ್ದರು. ಪುನೀತ್ ರಾಜಕುಮಾರ ಅವರ ಬಹುತೇಕ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.