ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?

Published : Dec 07, 2025, 10:29 AM IST
Rishab Shetty

ಸಾರಾಂಶ

ತನ್ನಿಂದ ದೈವಕ್ಕೆ ಅಪಮಾನವಾಯ್ತೇನೋ ಅನ್ನೋ ನೋವು ರಿಷಬ್​ಗೂ ಕಾಡ್ತಾ ಇರುವಂತೆ ಇದೆ. ತನ್ನ ಬಗ್ಗೆ ಬರ್ತಿರೋ ಟೀಕೆ ಟಿಪ್ಪಣಿಗಳು ನೋವು ತಂದಂತೆ ಕಾಣ್ತಾ ಇದೆ. ಸೋ ದೈವ ಕಣ್ಣೀರು ಸುರಿಸಬೇಡ ಅಂತ ಅಭಯ ನೀಡಿದೆ. ಅಲ್ಲಿಗೆ ರಿಷಬ್​​ಗೆ ದೈವಬಲ ಸಿಕ್ಕಂತೆ ಆಗಿದೆ.

ಪಂಜುರ್ಲಿ ದೈವದ ಅಭಯ

ಕಾಂತಾರ (Kantara 1) ಯಶಸ್ಸಿನಿಂದ ರಿಷಬ್​ ಶೆಟ್ಟಿಗೆ (Rishab Shetty) ಅದೆಷ್ಟು ಪ್ರಶಂಸೆ, ಪ್ರಶಸ್ತಿ ಸಿಕ್ಕವೋ ಅಷ್ಟೇ ವಿರೋಧ ಕೂಡ ವ್ಯಕ್ತವಾಯ್ತು. ಇತ್ತೀಚಿಗೆ ರಣ್​ವೀರ್ ಸಿಂಗ್ ಗೋವಾ ಫಿಲ್ಮ್ ಫೆಸ್ಟ್ ವೇದಿಕೆ ಮೇಲೆ ದೈವದ ಅನುಕರಣೆ ಮಾಡಿ ವಿವಾದ ಎಬ್ಬಿಸಿದ್ರು. ಆಗಲೂ ರಿಷಬ್​ರನ್ನ ಟೀಕೆ ಮಾಡಲಾಗಿತ್ತು. ಇದೀಗ ಇದೆಲ್ಲಕ್ಕೂ ಉತ್ತರ ಅನ್ನುವಂತೆ ದೈವ ರಿಷಬ್​ಗೆ ಸಂದೇಶವೊಂದನ್ನ ಕೊಟ್ಟಿದೆ.

ಟೀಕೆ, ಟಿಪ್ಪಣಿಗಳಿಂದ ಬೇಸರಗೊಂಡ್ರಾ ರಿಷಬ್..? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ..?

ಯೆಸ್ ಕಾಂತಾರ ಮತ್ತು ಕಾಂತಾರ ಚಾಪ್ಟರ್-1 ತೆರೆಗೆ ಬಂದ ಮೇಲೆ ಕರಾವಳಿ ದೈವ ಆಚರಣೆಗಳ ಬಗ್ಗೆ ಜಗತ್ತಿಗೆ ಗೊತ್ತಾಗಿದೆ. ಕನ್ನಡ ಸಿನಿಮಾವೊಂದು ವರ್ಲ್ಡ್​ ವೈಡ್ ಯಶಸ್ಸು ಕಂಡಿದೆ. ಕಾಂತಾರ ಚಾಪ್ಟರ್-1 ಅಂತೂ ವಿಶ್ವದಾದ್ಯಂತ 900 ಕೋಟಿ ಗಳಿಕೆ ಮಾಡಿದೆ.

ಈ ಯಶಸ್ಸು ಒಂದು ಕಡೆಯಾದ್ರೆ ಇನ್ನೊಂದು ಕಡೆಗೆ ರಿಷಬ್​ಗೆ ಸಿಕ್ಕಾಪಟ್ಟೆ ಟೀಕೆ ಟಿಪ್ಪಣಿಗಳು ಕೂಡ ಬಂದಿರೋದು ಸುಳ್ಳಲ್ಲ. ಕಾಂತಾರನಲ್ಲಿ ದೈವ ಆವಾಹನೆ ತೋರಿಸಿದ್ದು ಸರಿಯಲ್ಲ ಅಂತ ದೈವನರ್ತಕರು ಟೀಕೆ ಮಾಡಿದ್ರು. ಇನ್ನೂ ಈ ಸಿನಿಮಾ ಬಂದ ಮೇಲೆ ಅನೇಕರು ದೈವಗಳ ಅನುಕರಣೆ ಮಾಡಿ ದೈವಕ್ಕೆ ಅಪಚಾರ ಮಾಡೋದು ಕೂಡ ಹೆಚ್ಚಾಗಿದೆ. ಇತ್ತೀಚಿಗೆ ನಟ ರಣ್​ವೀರ್ ಸಿಂಗ್ ಗೋವಾ ಫಿಲ್ಮ್ ಫೆಸ್ಟ್ ವೇದಿಕೆ ಮೇಲೆ ದೈವದ ಅನುಕರಣೆ ಮಾಡಿದ್ರು.

ರಿಷಬ್ ಎದುರೇ ರಣ್​ವೀರ್ ಸಿಂಗ್ ವಿಕ್ಷಿಪ್ತವಾಗಿ ಅನುಕರಣೆ ಮಾಡಿದ್ರು. ಅದನ್ನ ತಡೆಯಲೂ ಆಗದೇ ಬಿಡೋದಕ್ಕೂ ಆಗದೇ ರಿಷಬ್ ಶೆಟ್ಟಿ ಪರದಾಡಿದ್ರು. ರಣ್​ವೀರ್ ವಿಚಾರಕ್ಕೆ ರಿಷಬ್​ ಕೂಡ ಸಿಕ್ಕಾಪಟ್ಟೆ ಟೀಕೆ ಎದುರಿಸಿದ್ರು.

ದೈವಕ್ಕೆ ಹರಕೆ ಸಲ್ಲಿಸಿದ ಕಾಂತಾರ ಸಿನಿಮಾ ತಂಡ; ರಿಷಬ್ ಶೆಟ್ಟಿ​ಗೆ ಸಂತೈಸಿ ಅಭಯ ನೀಡಿದ ದೈವ..!

ಹೌದು ಕಾಂತಾರ ಚಾಪ್ಟರ್-1 ಸಕ್ಸಸ್ ಬಳಿಕ ಚಿತ್ರತಂಡದಿಂದ ವಾರಾಹಿ ಪಂಜುರ್ಲಿ ದೈವಕ್ಕೆ ಮಂಗಳೂರಿನಲ್ಲಿ ಹರಕೆಯ ನೇಮೋತ್ಸವ ಸಲ್ಲಿಸಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಟ-ನಿರ್ದೇಶಕ ರಿಷಬ್ ಇದ್ರಲ್ಲಿ ಭಾಗಿಯಾಗಿದ್ರು.

ಕಾಂತಾರ ಸಿನಿಮಾ ನಿರ್ಮಾಣಕ್ಕೂ ಮೊದಲು ಸಿನಿಮಾ ಯಶಸ್ವಿಗಾಗಿ ರಿಷಬ್ ಶೆಟ್ಟಿ ಪ್ರಾರ್ಥನೆ ಮಾಡಿ ಹರಕೆ ಹೊತ್ತಿದ್ರು. ಅದರಂತೆ ದೈವದ ಆಶೀರ್ವಾದದಿಂದ ಸಿನಿಮಾ ಯಶಸ್ಸು ಕಂಡಿದೆ. ಹೀಗಾಗಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ಸಲ್ಲಿಸಲಾಗಿದೆ. ಈ ವೇಳೆ ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನು ಇದ್ದೇನೆ ಅಂತ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಅಭಯ ನೀಡಿದೆ.

ತನ್ನಿಂದ ದೈವಕ್ಕೆ ಅಪಮಾನವಾಯ್ತೇನೋ ಅನ್ನೋ ನೋವು ರಿಷಬ್​ಗೂ ಕಾಡ್ತಾ ಇರುವಂತೆ ಇದೆ. ತನ್ನ ಬಗ್ಗೆ ಬರ್ತಿರೋ ಟೀಕೆ ಟಿಪ್ಪಣಿಗಳು ನೋವು ತಂದಂತೆ ಕಾಣ್ತಾ ಇದೆ. ಸೋ ದೈವ ಕಣ್ಣೀರು ಸುರಿಸಬೇಡ ಅಂತ ಅಭಯ ನೀಡಿದೆ. ಅಲ್ಲಿಗೆ ರಿಷಬ್​​ಗೆ ದೈವಬಲ ಸಿಕ್ಕಂತೆ ಆಗಿದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್