ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ

Published : Dec 06, 2025, 02:59 PM IST
Rishab shett car

ಸಾರಾಂಶ

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ , ದೈವದ ಹರಕೆ ತೀರಿಸಲು ರಿಷಬ್ ಶೆಟ್ಟಿ ಕುಟುಂಬ ಸಮೇತ ತಮ್ಮ ವೆಲ್‌ಫೈರ್ ಕಾರಿನಲ್ಲಿ ಆಗಮಿಸಿದ್ದಾರೆ. ಬ್ಲಾಕ್ ಎಡಿಶನ್ ವೆಲ್‌ಫೈರ್ ಕಾರು ಮಿನಿ ವಿಮಾನ ಎಂದೇ ಕರೆಯಲಾಗುತ್ತದೆ.

ಮಂಗಳೂರು (ಡಿ..06) ಕಾಂತಾರ ಸಿನಿಮಾ ಮೂಲಕ ದೈವ, ಭೂತಾರಾಧನೆ, ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿಗೆ ಪ್ರಚುರಪಡಿಸಿದ ನಟ ನಿರ್ದೇಶಕ ರಿಷಬ್ ಶೆಟ್ಟಿ ಜೈ ಹನುಮಾನ್ ಸೇರಿದಂತೆ ಮುಂದಿನ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ರಿಷಬ್ ಶೆಟ್ಟಿಯ ಕಾಂತಾರಾ ಚಾಪ್ಟರ್ 1 ಸಿನಿಮಾ ಹಲವು ಅಡೆತಡೆಗಳನ್ನು ಎದುರಿಸಿ ಬಿಡುಗಡೆಯಾಗಿತ್ತು. ಇಷ್ಟೇ ಅಲ್ಲ ಬಾಕ್ಸ್ ಅಫೀಸ್‌ನಲ್ಲಿ ದಾಖಲೆ ಬರೆದಿತ್ತು. ಸಾವಿರ ಕೋಟಿ ಸಮೀಪ ಕಲೆಕ್ಷನ್, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಕಾಂತಾರಾ 1 ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ತೀರಿಸಲು ಆಗಮಿಸಿದ್ದರು. ಈ ವೇಳೆ ರಿಷಬ್ ಶೆಟ್ಟಿ ತಮ್ಮ 1.5 ಕೋಟಿ ರೂಪಾಯಿ ಟೊಯೋಟಾ ವೆಲ್‌ಫೈರ್ ಕಾರಿನಲ್ಲಿ ಆಗಮಿಸಿದ್ದಾರೆ.

ರಿಷಬ್ ಶೆಟ್ಟಿ ವೆಲ್‌ಫೈರ್ ಕಾರು

ರಿಷಬ್ ಶೆಟ್ಟಿ ಎಪ್ರಿಲ್ 2025ರಲ್ಲಿ ಈ ವೆಲ್‌ಫೈರ್ ಕಾರು ಖರೀದಿಸಿದ್ದಾರೆ. ಇದರ ಆನ್ ರೋಡ್ ಬೆಲೆ ಸರಿಸುಮಾರು 1.5 ಕೋಟಿ ರೂಪಾಯಿ.ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಹೆಚ್ಚಾಗಿ ಈ ಕಾರು ಬಳಸುತ್ತಾರೆ. ಈ ಪೈಕಿ ಸಿನಿಮಾ ನಟ ನಟಿಯರು ಈ ಕಾರು ಪ್ರಯಾಣ ಮಾತ್ರವಲ್ಲ, ಕ್ಯಾರವಾನ್ ಆಗಿಯೂ ಬಳಕೆ ಮಾಡುತ್ತಾರೆ. ಅತ್ಯಂತ ಐಷಾರಾಮಿ ಹಾಗೂ ಆರಾಮಾದಾಯಕ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕಾರಿದು. ದೂರ ಪ್ರಯಾಣಕ್ಕೆ ಇದು ಉತ್ತಮ ಕಾರು. ಅದೆಷ್ಟೇ ದೂರ ಪ್ರಯಾಣಿಸದರೂ ದಣಿವರಿಯದೇ ಉಲ್ಲಾಸದಿಂದ ಇರಲು ಸಾಧ್ಯವಿದೆ. ಇದೇ ಕಾರಿನಲ್ಲಿ ರಿಷಬ್ ಶೆಟ್ಟಿ ಕುಟುಂಬ ಸಮೇತ ಮಂಗಳೂರಿನ ಬಾರಬೈಲ್‌ಗೆ ತೆರಳಿ ಹರಕೆ ತೀರಿಸಿದ್ದಾರೆ.

ಕಿಚ್ಚ ಸುದೀಪ್ ಸೇರಿ ಕೆಲ ನಟರ ಬಳಿ ಇದೆ ಈ ಕಾರು

ರಿಷಬ್ ಶೆಟ್ಟಿಯ ವೆಲ್‌ಫೈರ್ ಕಾರಿಗೆ ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ. ರಿಷಬ್ ಶೆಟ್ಟಿ KA 50 ME 6669 ನಂಬರ್ ಪಡೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಬಳಿ ಇರುವ ಈ ಕಾರು ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ದರ್ಶನ್, ಜಾಲಿ ಧನಂಜ್ ಸೇರಿದಂತೆ ಪ್ರಮುಖ ನಟರು ಈ ಕಾರು ಬಳಸುತ್ತಾರೆ. ಬಾಲಿವುಡ್‌ನಲ್ಲಿ ಹೃತಿಕ್ ರೋಷನ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವರು ನಟ ನಟಿಯರು ಈ ಕಾರು ಬಳಕೆ ಮಾಡುತ್ತಾರೆ. ಮಲೆಯಾಳಂ ಸಿನಿಮಾ ಕ್ಷೇತ್ರದಲ್ಲಿ ಮೋಹನ್ ಲಾಲ್ ಈ ಕಾರು ಹೆಚ್ಚಾಗಿ ಬಳಸುತ್ತಾರೆ.

2487 cc ಎಂಜಿನ್ ಕಾರು ಇದಾಗಿದೆ. 190.42 bhp ಪವರ್ ಹಾಗೂ 240 Nm ಟಾರ್ಕ್ ಹೊಂದಿದ್ದು, ಗರಿಷ್ಠ ವೇಗ 170 ಕಿಲೋಮೀಟರ್. ಉತ್ತಮ ರೋಡ್ ಪ್ರೆಸೆನ್ಸ್, ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ. ದೂರ ಪ್ರಯಾಣದ ಕಾರಣ ರಿಷಬ್ ಶೆಟ್ಟಿ ವೆಲ್‌ಫೈರ್ ಕಾರಿನಲ್ಲಿ ಮಂಗಳೂರಿಗೆ ಪ್ರಯಾಣಿಸಿದ್ದಾರೆ. ಮುಂದಿನ ಸಿನಿಮಾ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ಮಂಗಳೂರಿಗೆ ಆಗಮಿಸಿದ್ದ ರಿಷಬ್ ಶೆಟ್ಟಿ, ಹರಕೆ ತೀರಿಸಿ ಬಳಿಕ ಸಿನಿಮಾ ತಂಡ ಸೇರಿಕೊಂಡಿದ್ದಾರೆ.

ಈ ದುಬಾರಿ ಕಾರಿನಲ್ಲಿ ರಿಷಬ್ ಶೆಟ್ಟಿ ಕುಟುಂಬ ಜೊತೆ ಮಂಗಳೂರಿಗೆ ಆಗಮಿಸಿ ಹರಕೆ ತೀರಿಸಿದ್ದರು. ಈ ನೇಮೋತ್ಸವದಲ್ಲಿ ಹೊಂಬಾಳೆ ಫಿಲ್ಮಂನ ವಿಜಯ್ ಕಿರಂಗದೂರು ಸೇರದಂತೆ ಕಾಂತಾರ ಚಿತ್ರ ತಂಡ ಭಾಗಿಯಾಗಿತ್ತು. ದೈವ ದೇವರ ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ರಿಷಬ್ ಶೆಟ್ಟಿ, ಕುಟುಂಬ ಹಾಗೂ ಕಾಂತಾರ ತಂಡ ಭಾಗಿಯಾಗಿತ್ತು.ಕಾಂತಾರಾ ಸಿನಿಮಾ ನಿರ್ಮಾಣದ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿತ್ತು. ಇದರ ನಡುವೆ ಕಳೆದ ಎಪ್ರಿಲ್ ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ದೈವ ಎಚ್ಚರಿಕೆ ನೀಡಿತ್ತು. ಸಂಸಾರದಲ್ಲಿ ಎಚ್ಚರಿಕೆ, ಸಿನಿಮಾ ಕ್ಷೇತ್ರದಲ್ಲಿ ಶತ್ರುಗಳ ಕುರಿತು ದೈವ ಎಚ್ಚರಿಕೆ ನೀಡಿತ್ತು. ಭಕ್ತಿಯಿಂದ ಇಲ್ಲೀವರೆಗೆ ಆಗಮಿಸಿ ನಮಿಸಿರುವ ರಿಷಬ್ ಶೆಟ್ಟಿ ಹಾಗೂ ಕುಟುಂಬಕ್ಕೆ ದೈವ ಅಭಯ ನೀಡಿತ್ತು. ಇದೀಗ ಮತ್ತೆ ಇದೇ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿದ್ದಾರೆ. ಈ ವೇಳೆ ದೈವದ ಅಭಯವನ್ನೂ ಪಡೆದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್