"ಯಾವ ಭಾವನೆ ಮಿಸ್ ಆಗಿದೆ ನೀವೇ ಹೇಳಿ"?: ಮಧ್ಯರಾತ್ರಿಲೀ Toxic ವಿಮರ್ಶೆ ಮಾಡಿದ ಮಾಸ್ಟರ್ ಆನಂದ್‌ಗೆ ನೆಟ್ಟಿಗರ ಸಪೋರ್ಟ್

Published : Aug 30, 2026, 10:17 AM IST
Master Anand Toxic Review

ಸಾರಾಂಶ

Master Anand Toxic Review: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಗ್ಗೆ ನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಕೇಳಿಬರುತ್ತಿರುವ ನಾನಾ ವಿಮರ್ಶೆಗಳ ಕುರಿತು ಆಶ್ಚರ್ಯ ವ್ಯಕ್ತಪಡಿಸಿರುವ ಅವರು, ಸಿನಿಮಾ ಬಗ್ಗೆ ಏನ್ ಹೇಳಿದ್ದಾರೆ ನೀವೇ ಕೇಳಿ..

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾದ ದಿನದಿಂದಲೂ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ವಿಮರ್ಶೆಗಳು ಹರಿದಾಡುತ್ತಿರುವ ಬೆನ್ನಲ್ಲೇ, ನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರು ಸಿನಿಮಾ ನೋಡಿ ಬಂದ ಮೇಲೆ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸುತ್ತಿದ್ದು, ಯಶ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಮಧ್ಯರಾತ್ರಿಯಲ್ಲೇ 'ಟಾಕ್ಸಿಕ್' ವಿಶ್ಲೇಷಣೆ

ಮಾಸ್ಟರ್ ಆನಂದ್ ಅವರು ಈ ವಿಡಿಯೋವನ್ನು ಮಧ್ಯರಾತ್ರಿಯೇ ಚಿತ್ರಮಂದಿರದಿಂದ ಬಂದ ತಕ್ಷಣ ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ್ದಾರೆ. "ಇದೊಂದು ಮಿಡ್ ನೈಟ್ ಪೋಸ್ಟ್. ಸಿನಿಮಾ ನೋಡಿ ಬಂದ ಮೇಲೆ ಮನಸ್ಸಿನಲ್ಲಿರುವ ಆ ಫೀಲಿಂಗ್ ಹಾಗೆಯೇ ಇರುವಾಗ ಮಾತಾಡಬೇಕು ಎನ್ನುವ ಉದ್ದೇಶದಿಂದ ವಿಡಿಯೋ ಮಾಡುತ್ತಿದ್ದೇನೆ" ಎಂದು ಮಾತು ಆರಂಭಿಸಿದ್ದಾರೆ. ಚಿತ್ರದ ಬಗ್ಗೆ ಕೆಲವು ನೆಗೆಟಿವ್ ವಿಮರ್ಶೆಗಳು ಕೇಳಿಬರುತ್ತಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಅವರು, "ನನಗೆ ನಿಜಕ್ಕೂ ತಿಳಿಯುತ್ತಿಲ್ಲ ಯಾಕೆ ಈ ಚಿತ್ರದ ಬಗ್ಗೆ ಇಷ್ಟೊಂದು ನೆಗೆಟಿವ್ ಮಾತುಗಳು ಕೇಳಿಬರುತ್ತಿವೆ? ನಿಜಕ್ಕೂ ಇದೊಂದು ಬ್ರಿಲಿಯಂಟ್ ಸ್ಕ್ರಿಪ್ಟ್, ಅತ್ಯದ್ಭುತವಾದ ಸ್ಕ್ರೀನ್ ಪ್ಲೇ ಮತ್ತು ನವೀನ ಶೈಲಿಯ ನಿರ್ದೇಶನ ಇಲ್ಲಿದೆ" ಎಂದು ಮನಸಾರೆ ಶ್ಲಾಘಿಸಿದ್ದಾರೆ.

ಭಾವನೆಗಳಿಗೆ ಒತ್ತು ನೀಡಿದ ಸಿನಿಮಾ

ಸಿನಿಮಾವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಹೇಳಿರುವ ಆನಂದ್, ಸಂಸ್ಕೃತಿಯ ಹೆಸರಿನಲ್ಲಿ ಚಿತ್ರವನ್ನು ಟೀಕಿಸುವವರಿಗೆ ನೇರ ಉತ್ತರ ನೀಡಿದ್ದಾರೆ. "ಕೆಲವರು ಚಿತ್ರದಲ್ಲಿನ ರೋಮ್ಯಾನ್ಸ್ ಮತ್ತು ಇಂಟಿಮಸಿ ದೃಶ್ಯಗಳನ್ನು ಇಟ್ಟುಕೊಂಡು ಇದು ನಮ್ಮ ಸಂಸ್ಕೃತಿ ಅಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ಚಿತ್ರದಲ್ಲಿ ಮಾನವೀಯ ಭಾವನೆಗಳಿಗೆ ದೊಡ್ಡ ಒತ್ತು ನೀಡಲಾಗಿದೆ. ಕೆಜಿಎಫ್‌ನಲ್ಲಿ ತಾಯಿ-ಮಗನ ಸೆಂಟಿಮೆಂಟ್ ನಮಗೆ ಇಷ್ಟವಾಗಿತ್ತು. ಆದರೆ ಟಾಕ್ಸಿಕ್‌ನಲ್ಲಿ ತಾಯಿ-ಮಗನ ಜೊತೆಗೆ ಅಕ್ಕ-ತಮ್ಮನ ಬಾಂಧವ್ಯ ಮತ್ತು ಗೆಳೆಯರ ನಡುವಿನ ಅಪೂರ್ವ ಸ್ನೇಹವಿದೆ. ಯಾವ ಭಾವನೆ ಮಿಸ್ ಆಗಿದೆ ಎಂದು ನೀವು ಹೇಳುತ್ತೀರಿ? ಎಲ್ಲವೂ ಇಲ್ಲಿದೆ" ಎಂದು ಚಿತ್ರದ ಒಳಗಿನ ಭಾವನಾತ್ಮಕ ಸತ್ವವನ್ನು ವಿವರಿಸಿದ್ದಾರೆ.

ತಾಂತ್ರಿಕ ಶ್ರೀಮಂತಿಕೆ ಮತ್ತು ಕನ್ನಡಿಗರ ಜವಾಬ್ದಾರಿ

ಚಿತ್ರದ ಮೇಕಿಂಗ್ ಬಗ್ಗೆ ಮಾತನಾಡುತ್ತಾ, ಚಿತ್ರದ ಆರ್ಟ್ ಡೈರೆಕ್ಷನ್, ಕಾಸ್ಟ್ಯೂಮ್ ಡಿಸೈನ್, ಮೇಕಪ್ ಮತ್ತು ಪ್ರತಿಯೊಂದು ದೃಶ್ಯದ ಮೇಕಿಂಗ್‌ನಲ್ಲಿರುವ ಸೂಕ್ಷ್ಮತೆಯನ್ನು (Detailing) ಕಂಡು ಆನಂದ್ ಬೆರಗಾಗಿದ್ದಾರೆ. "ಕನ್ನಡಿಗರಾದ ನಾವು ಇಂತಹ ಹೊಸ ರೀತಿಯ ಪರಿಶ್ರಮದ ಸಿನಿಮಾವನ್ನು ಬೆಂಬಲಿಸದಿದ್ದರೆ, ಮುಂದೆ ಇನ್ಯಾವ ರೀತಿಯ ದೊಡ್ಡ ಸಿನಿಮಾಗಳನ್ನು ಕನ್ನಡದಲ್ಲಿ ತರಬೇಕು ಎನ್ನುವ ಪ್ರಶ್ನೆ ನಮ್ಮೆಲ್ಲರಲ್ಲಿ ಉಳಿಯುತ್ತದೆ. ಟಾಕ್ಸಿಕ್ ಸಿನಿಮಾವನ್ನು ಮಿಸ್ ಮಾಡದೆ ನೋಡಿ, ಈ ಚಿತ್ರವನ್ನು ನೋಡಲು ಒಂದು ವಿಶೇಷ ಆಯಾಮವೇ ಬೇಕು" ಎಂದು ಮನವಿ ಮಾಡಿದ್ದಾರೆ.

ನೆಟ್ಟಿಗರ ಬೆಂಬಲ

ಮಾಸ್ಟರ್ ಆನಂದ್ ಅವರ ಈ ವಿಡಿಯೋ ಪೋಸ್ಟ್‌ಗೆ ನೆಟ್ಟಿಗರು ಹಾಗೂ ಯಶ್ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. "ಸತ್ಯವಾದ ಮಾತು ಸರ್, ನೋಡುವ ಕಣ್ಣು ಸರಿಯಾಗಿದ್ದರೆ ಸಿನಿಮಾ ಎಷ್ಟು ಅದ್ಭುತವಾಗಿದೆ ಎಂಬುದು ಅರ್ಥವಾಗುತ್ತದೆ", "ಯಶ್ ಅವರ ನಟನೆ ಮತ್ತು ಸಿನಿಮಾದ ಮೇಕಿಂಗ್ ನಿಜಕ್ಕೂ ನೆಕ್ಸ್ಟ್ ಲೆವೆಲ್‌ನಲ್ಲಿದೆ" ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಾಸ್ಟರ್ ಆನಂದ್ ಅವರ ಈ ಬೆಂಬಲ ಟಾಕ್ಸಿಕ್ ಚಿತ್ರತಂಡಕ್ಕೆ ಹೆಚ್ಚಿನ ಬಲ ನೀಡಿದೆ.

'ಟಾಕ್ಸಿಕ್' (Toxic) ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರ ವೃತ್ತಿಜೀವನದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ಖ್ಯಾತ ಮಲಯಾಳಂ ನಟಿ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ (Geetu Mohandas) ಅವರು ನಿರ್ದೇಶಿಸಿದ್ದಾರೆ. ಇವರು ಈ ಹಿಂದೆ 'ಮೂತೋನ್' ಮತ್ತು 'ಲಯರ್ಸ್ ಡೈಸ್' ನಂತಹ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಬಗ್ಗೆ ರಕ್ಷಿತಾ ಪ್ರೇಮ್ ಫಸ್ಟ್ ರಿಯಾಕ್ಷನ್; ಜನ ಏನೇನೋ ಹೇಳ್ತಾರೆ, ನೀವ್ ಹೋಗಿ ಮೂವಿ ನೋಡಿ, ಆಮೇಲೆ ಮಾತಾಡಿ
ಟಾಕ್ಸಿಕ್ 'Vicious Fight' ಸೀಕ್ರೆಟ್ ಔಟ್: ಯಶ್ ಕ್ರಿಯೇಟಿವಿಟಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಫಿದಾ