ಬೆಂಗಳೂರಿನಲ್ಲಿ ಆಯ್ತು ಈಗ ಮುಂಬೈನಲ್ಲಿ ರಾಕಿಂಗ್ ಸ್ಟಾರ್ ಯಶ್; ಹೊಸ ಲುಕ್‌ಗೆ ಫಿದಾ ಆದ ಕನ್ನಡಿಗರು!

By Vaishnavi Chandrashekar  |  First Published Nov 12, 2024, 11:33 AM IST

ಮುಂಬೈನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್. ಮಡ್ ಐಲ್ಯಾಂಡ್​​ನಲ್ಲಿ ಟಾಕ್ಸಿಕ್‌ ಚಿತ್ರಕ್ಕೆ ಸೆಟ್ ರೆಡಿ....


ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಸದ್ಯ ಮುಂಬೈನಲ್ಲಿ ಶೂಟ್ ಆಗ್ತಿರೋ ಸಂಗತಿ ನಿಮಗೆ ಗೊತ್ತೇ ಇದೆ. ಮುಂಬೈನಲ್ಲಿ ರಾಕಿಭಾಯ್ ಹವಾ ಹೇಗಿದೆ ಅಂದ್ರೆ ಯಶ್ ಹೋದ ಕಡೆ, ಬಂದ ಕಡೆಯೆಲ್ಲಾ ಪಾಪರಾಜಿಗಳು ಕ್ಯಾಮೆರಾ ಹಿಡಿದು ಹಿಂಬಾಲಿಸ್ತಾ ಇದ್ದಾರೆ. ಬಾಲಿವುಡ್ ಸ್ಟಾರ್​ಗಳನ್ನೂ ಮೀರಿಸುವಂತೆ ಮುಂಬೈನಲ್ಲಿ ಸೌಂಡ್ ಮಾಡ್ತಿದ್ದಾರೆ ನಮ್ಮ ರಾಕಿ.

ಯೆಸ್! ಸದ್ಯ ಮುಂಬೈನಲ್ಲಿ ರಾಕಿಂಗ್ ಸ್ಟಾರ್ ಯಶ್‌ದೇ ಹವಾ.. ನಾನ್ ಬರೋವರಗೂ ಮಾತ್ರ ಬೇರೆಯವರ ಹವಾ.. ನಾನ್ ಬಂದ್ ಮೇಲೆ ನಂದೇ ಹವಾ ಅಂತ ಡೈಲಾಗ್ ಹೊಡೆದಿದ್ದ ಯಶ್, ಅಕ್ಷರಶಃ ಮುಂಬೈನಲ್ಲಿರೋ ಹೀರೋಗಳನ್ನೆಲ್ಲಾ ಹಿಂದಿಕ್ಕಿ ಹವಾ ಮೆಂಟೈನ್ ಮಾಡ್ತಾ ಇದ್ದಾರೆ. ಸದ್ಯ ಮುಂಬೈನಲ್ಲಿ ಟಾಕ್ಸಿಕ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ನಡೀತಾ ಇದೆ. ಮುಂಬೈ ಸಮುದ್ರದ ನಡುವೆ ಇರೋ ಮಡ್ ಐಲ್ಯಾಂಡ್​​ನಲ್ಲಿ ಸೆಟ್ ಹಾಕಿದ್ದು ಅಲ್ಲಿ, ಕೆಲ ಪ್ರಮುಖ ದೃಶ್ಯಗಳು ಮತ್ತು ಆಕ್ಷನ್ ಸಿಕ್ವೆನ್ಸ್​​ಗಳ ಶೂಟಿಂಗ್ ನಡೀತಾ ಇದೆ.

Tap to resize

Latest Videos

undefined

ಈ ಮಹಿಳಾ ಸ್ಪರ್ಧಿಯಲ್ಲಿ ತಾಯಿಯನ್ನು ಕಾಣುತ್ತೀನಿ ಎಂದು ಕೈಗೆ ಗುಲಾಬಿ ಕೊಟ್ಟ ಮಂಜಣ್ಣ

ಭಾನುವಾರ ಈ ಸೆಟ್ ಇರೋ ಐಲ್ಯಾಂಡ್​​ಗೆ ಹೊರಟು ನಿಂತ ರಾಕಿ ಹಿಂದೆ ಪಾಪರಾಜಿಗಳು ಕ್ಯಾಮೆರಾ ಹಿಡಿದು ಮುಗಿಬಿದ್ದಿದ್ದಾರೆ. ಲುಕ್ ರಿವೀಲ್ ಆಗಬಾರದು ಅಂತ ಮಾಸ್ಕ್ ಧರಿಸಿದ್ದ ಯಶ್, ಬೌನ್ಸರ್​​ಗಳ ಜೊತೆ ಬೋಟ್ ಏರಿದ್ದಾರೆ. ಸದ್ಯ ಪಾಪರಾಜಿಗಳು ಸೆರೆಹಿಡಿದಿರೋ ಈ ವಿಡಿಯೋ ವೈರಲ್ ಆಗಿದ್ದು ಸೋಷಿಯಲ್ ಮಿಡಿಯಾದಲ್ಲಿ ಕಿಚ್ಚು ಹಚ್ಚಿದೆ. ಕೆಲ ಕ್ಯಾಮೆರಾಮನ್​ಗಳು ಯಶ್​​ನ ಕನ್ನಡದಲ್ಲೇ ಮಾತನಾಡಿಸಿದ್ದು, ಯಶ್ ಬಾನುವಾರ ಮನೆಗೆ ಹೋಗಿ ಎಂಜಾಯ್ ಮಾಡಿ ಎಂದಿದ್ದಾರೆ. ಸದ್ಯ ಮುಂಬೈನಲ್ಲಿ ನಡೀತಿರೋ ಟಾಕ್ಸಿಕ್​ ಶೂಟ್​​ನಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ ಕೂಡ ಭಾಗಿಯಾಗಿದ್ದಾರೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆ ಜೆ ಪೆರ್ರಿ ಕೂಡ ತಂಡವನ್ನ ಸೇರಿಕೊಂಡಿದ್ದು ಌಕ್ಷನ್ ದೃಶ್ಯಗಳನ್ನ ಡೈರೆಕ್ಟ್ ಮಾಡ್ತಾ ಇದ್ದಾರೆ. 

ಮತ್ತೆ ಚಿಗುರುತ್ತಿದ್ದ ಪ್ರೀತಿಗೆ ಹುಳಿ ಹಿಂಡಿದ ನೇರ ನಾಮಿನೇಷನ್; ಧರ್ಮ- ಅನುಷಾ

ಒಟ್ಟಾರೆ ಕೆಜಿಎಫ್ ಬಂದ ಮೇಲೆ ಯಶ್ ಗ್ಲೋಬಲ್ ಸ್ಟಾರ್ ಆಗಿಬಿಟ್ಟದ್ದಾರೆ. ಅದ್ರಲ್ಲೂ ಮುಂಬೈನಲ್ಲಂತೂ ಯಶ್ ಹವಾ ಬಾಲಿವುಡ್ ಸ್ಟಾರ್​ಗಳನ್ನೂ ಮೀರಿಸುವಂತೆ ಇದೆ.

click me!