ಅಭಿಷೇಕ್ ಅವಿವಾ ದಂಪತಿಗೆ ಗಂಡು ಮಗು ಜನನ; ಮಂಡ್ಯದ ಗಂಡು ಬಂದ್ರು ಎಂದ ಫ್ಯಾನ್ಸ್, ಅಜ್ಜಿಯಾದ ಸುಮಲತಾ

By Vaishnavi Chandrashekar  |  First Published Nov 12, 2024, 9:22 AM IST

ಅಂಬರೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ...ಜೂನಿಯರ್ ರೆಬೆಲ್ ಸ್ಟಾರ್ ಎಂಟ್ರಿಯಿಂದ ಕರ್ನಾಟಕವೇ ಖುಷಿ ಪಟ್ಟಿದೆ...
 


ಕನ್ನಡ ಚಿತ್ರರಂಗ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದು, ಮೊಮ್ಮಗನನ್ನು ಹಿಡಿದು ಮಾಜಿ ಸಂಸದೆ ಸುಮಲತಾ ಭಾವುಕರಾಗಿದ್ದಾರೆ. ತಾಯಿ ಅವೀವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಪೋಷಕರ ಒಪ್ಪಿಗೆ ಮೇಲೆ ಜೂನ್ 5, 2023ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡ್ಡಪ್ಪ ಪುತ್ರಿ ಅವಿವಾ ಸ್ಟಾರ್ ನಟನನ್ನು ಮದುವೆಯಾದರೂ ಸಿಕ್ಕಾಪಟ್ಟೆ ಸಿಂಪಲ್ ಆಗಿದ್ದು, ಅತ್ತೆ ಸುಮಲತಾ ಮಾತನನ್ನು ಚಾಚುತಪ್ಪದೆ ಪಾಲಿಸುತ್ತಾರೆ. ಅತ್ತೆ- ಸೊಸೆ ಎಷ್ಟು ಕ್ಲೋಸ್ ಎಂದು ಈ ಹಿಂದೆ ಅಭಿಷೇಕ್ ರಿವೀಲ್ ಮಾಡಿದ್ದರು. 

Tap to resize

Latest Videos

undefined

ಹಸಿರು ಸೀರೆ ಗಾಜಿನ ಬಳೆ ಧರಿಸಿ ಮರದ ಜೋಕಾಲಿಯಲ್ಲಿ ಕುಳಿತು ಸೀಮಂತ ಮಾಡಿಕೊಂಡ ಅಂಬಿ ಸೊಸೆ!

ಆಗಸ್ಟ್‌ ತಿಂಗಳಿನಲ್ಲಿ ಅಂಬರೀಶ್‌ ನಿವಾಸದಿಂದ ಸಿಹಿ ಸುದ್ದಿ ಹೊರ ಬಂದಿದೆ. ಅವಿವಾ ಮೊಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಸುದ್ದಿ ಹೊರ ಬಂದರೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಗುಡ್‌ ನ್ಯೂಸ್ ರಿವೀಲ್ ಮಾಡಿದ ಬೆನ್ನಲೆ ಅಂಬಿ ಆಪ್ತ ಸ್ನೇಹಿತ ತಮಿಳು ನಟ ಮೋಹನ್ ಬಾಬು ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಸೆಪ್ಟೆಂಬರ್‌ 18, 2024ರಂದು ಅವೀವಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಹಸಿರು ಸೀರೆಯಲ್ಲಿ ಅವೀವಾ ಮಿಂಚಿದ್ದರು, ಫೋಟೋ ನೋಡಿ ಗಂಡು ಮಗುನೇ ಬರುವುದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದರು. 

ಅವಿವಾ ಬಿದ್ದಪ್ಪ ಫ್ಯಾಷನ್‌ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್‌ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ. ಪೊಲ್ಕಾ ಡಾಟ್ಸ್‌ ಇರುವ ಇಂಡಿಯನ್ ವೇರ್ ಸ್ವಿಮ್‌ ಸೂಟ್‌ ಲಾಂಚ್ ಮಾಡಿದ್ದಾರೆ. 'ನಿದ್ರೆಗೆ ಹೆಚ್ಚಿನ ಪ್ರಮುಖ್ಯತೆ ನೀಡುತ್ತೇನೆ ಹೀಗಾಗಿ ಬೇಗ ಮಲಗಿಕೊಂಡು ಬೆಳಗ್ಗೆ ಬೇಗ ಎದ್ದು ನಾನು ವ್ಯಾಯಾಮ ಮುಗಿಸಿ ತಿಂಡಿ ತಿಂದು ಕೆಲಸ ಶುರು ಮಾಡುವ ಕಾಮನ್ ಹುಡುಗಿ ನಾನು. ಬಾಲ್ಯದಿಂದಲ್ಲೂ ನಾನು ಟಾಮ್ ಬಾಯ್ ಆಗಿದ್ದ ಕಾರಣ ಈ ವೃತ್ತಿ ಜೀವನ ನನಗೆ ಎಂದುಕೊಂಡಿರಲಿಲ್ಲ' ಎಂದು ಡೈಲಿ ಸಲಾರ್ ಸಂದರ್ಶನದಲ್ಲಿ ಅವಿವಾ ಮಾತನಾಡಿದ್ದಾರೆ. 

click me!