Tom & Jerry: ಪ್ರೀತಿ ನೆಪದಲ್ಲಿ ಅಧ್ಯಾತ್ಮದ ಶೋಧ, ಇದು ಖಾಲಿ ರೊಮ್ಯಾನ್ಸ್ ಅಲ್ಲ

By Suvarna News  |  First Published Nov 10, 2021, 7:03 PM IST

ಸಿನಿಮಾದಲ್ಲಿ ನಾಯಕ ನಟನಾಗಿ  'ಗಂಟು ಮೂಟೆ' ಖ್ಯಾತಿಯ ನಿಶ್ಚಿತ್ ಕೊರೋಡಿ ಹಾಗೂ ಮೊದಲ ಬಾರಿ ನಾಯಕ(Hero)ನಟಿಯಾಗಿ ಬೆಳ್ಳಿ ತೆರೆ ಮೇಲೆ ಡಿಫ್ರೆಂಟ್‌ ಲುಕ್‌ನಲ್ಲಿ ಚೈತ್ರ ರಾವ್(Chaitra Rao) ಕಾಣಿಸಿಕೊಂಡಿದ್ದಾರೆ, ಈ ಚಿತ್ರಕ್ಕೆ ಮ್ಯಾಥ್ಯೂ  ಮನು ಸಂಗೀತ ನಿರ್ದೇಶನ (Music Directiom)ನೀಡಿದ್ದು ಈಗಾಗಲೇ ಚಿತ್ರದ ಹಾಡುಗಳು ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರದ ನಿರ್ಮಾಣವನ್ನು ರಾಜು ಶೆರೆಗಾರ್‌ ಮಾಡಿದ್ದಾರೆ.


-ಯಶಸ್ವಿನಿ ಶ್ರೀನಿವಾಸ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ

ಸಿನಿಮಾದಲ್ಲಿ ನಾಯಕ ನಟನಾಗಿ  'ಗಂಟು ಮೂಟೆ' ಖ್ಯಾತಿಯ ನಿಶ್ಚಿತ್ ಕೊರೋಡಿ ಹಾಗೂ ಮೊದಲ ಬಾರಿ ನಾಯಕ(Hero)ನಟಿಯಾಗಿ ಬೆಳ್ಳಿ ತೆರೆ ಮೇಲೆ ಡಿಫ್ರೆಂಟ್‌ ಲುಕ್‌ನಲ್ಲಿ ಚೈತ್ರ ರಾವ್(Chaitra Rao) ಕಾಣಿಸಿಕೊಂಡಿದ್ದಾರೆ, ಈ ಚಿತ್ರಕ್ಕೆ ಮ್ಯಾಥ್ಯೂ  ಮನು ಸಂಗೀತ ನಿರ್ದೇಶನ (Music Directiom)ನೀಡಿದ್ದು ಈಗಾಗಲೇ ಚಿತ್ರದ ಹಾಡುಗಳು ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರದ ನಿರ್ಮಾಣವನ್ನು ರಾಜು ಶೆರೆಗಾರ್‌ ಮಾಡಿದ್ದಾರೆ.

Tap to resize

Latest Videos

ಈ ಚಿತ್ರದಲ್ಲಿ ನಾಯಕ ನಟನಾಗಿ  'ಗಂಟು ಮೂಟೆ' ಖ್ಯಾತಿಯ ನಿಶ್ಚಿತ್ ಕೊರೋಡಿ ಹಾಗೂ ಮೊದಲ ಬಾರಿ ನಾಯಕ ನಟಿಯಾಗಿ ಬೆಳ್ಳಿ ತೆರೆ ಮೇಲೆ ಡಿಫ್ರೆಂಟ್‌ ಲುಕ್‌ನಲ್ಲಿ ಚೈತ್ರ ರಾವ್ ಕಾಣಿಸಿಕೊಂಡಿದ್ದಾರೆ, ಈ ಚಿತ್ರಕ್ಕೆ ಮ್ಯಾಥ್ಯೂ  ಮನು ಸಂಗೀತ ನಿರ್ದೇಶನ ನೀಡಿದ್ದು ಈಗಾಗಲೇ ಚಿತ್ರದ ಹಾಡುಗಳು ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರದ ನಿರ್ಮಾಣವನ್ನು ರಾಜು ಶೆರೆಗಾರ್‌ ಮಾಡಿದ್ದಾರೆ.

ಚಿತ್ರದ ನಾಯಕ ನಟ ಹಾಗೂ ನಾಯಕ ನಟಿಯನ್ನು ಹೇಗೆ ಆಯ್ಕೆ ಮಾಡಿದರು ?

ನಟ, ನಟಿಯನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ನನಗಿತ್ತು, ಸುಮಾರು ಆಡಿಶನ್ ಮಾಡಿದ ನಂತರ ನನಗೆ ನಿಶ್ಚಿತ್ ಕೊರೋಡಿ ನಾಯಕ ನಟನ ಪಾತ್ರಕ್ಕೆ ಸೂಕ್ತರೆಂದು ಅನಿಸಿತು, ನಾಯಕ ನಟಿ ಪಾತ್ರಕ್ಕೆ ರಂಗಭೂಮಿಯ ಹಿನ್ನಲೆ ಇರುವ ನಟಿಯನ್ನು ಹುಡುಕ್ತಿದ್ವಿ, ಆಗ ಜೋಡಿಹಕ್ಕಿ ಧಾರವಾಹಿಯಲ್ಲಿ ಚೈತ್ರ ರಾವ್ ರ ನಟನೆಯನ್ನು ನೋಡಿದ್ದೆ, ಈ ಪಾತ್ರಕ್ಕೆ ಸರಿಯಾದ ನಟಿ ಅನಿಸಿದರು" ಎಂದು ನಿರ್ದೇಶಕ ರಾಘವ್‌ ವಿನಯ್‌ ತಿಳಿಸಿದ್ದಾರೆ.

ಮೊದಲ ಬಾರಿಗೆ ತೆರೆ ಮೇಲೆ ಕಾಣಿಸುಕೊಂಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ... !

ನನಗೆ ವಿಭಿನ್ನ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಆಸೆ ಮೊದಲಿಂದಲು ಇತ್ತು. ನನ್ನ ಆಸೆಯಂತೆ ಟಾಮ್‌ ಆಂಡ್‌ ಜೆರ್ರಿಯ ಸಿನಿಮಾದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ ಹಾಗೂ ಲುಕ್‌ ಕೂಡ ಆಕರ್ಷಕವಾಗಿದೆ ಹಾಗೂ ಹೊಸ ಪ್ರಯತ್ನ ಮಾಡಿರುವ ಸಂತೋಷ ನನಗಿದೆ ಎಂದು ನಟಿ ಚೈತ್ರ ರಾವ್‌ ರವರು ಹೇಳಿದ್ದಾರೆ. 

ನಟ ನಿಶ್ಚಿತ್ ಕೊರೋಡಿಗೆ ಯಾವ ರೀತಿಯ ಪಾತ್ರ ಇಷ್ಟವಾಗುತ್ತೆ...?

ಸೆನ್ಸಿಬಲ್‌ ನಿರ್ದೇಶಕರ ಜೂತೆ ಕೆಲಸ ಮಾಡಕೆ ಇಷ್ಟ ಆಗುತ್ತೆ, ಸೆನ್ಸಿಬಲ್‌ ಹಾಗೂ ವಿಭಿನ್ನ ಪಾತ್ರ ಮಾಡಲು ನನಗೆ ಇಷ್ಟ ಆದ ಕಾರಣ ನಾನು ಹೆಚ್ಚಾಗಿ ಇಂತಹ ಪಾತ್ರಗಳನ್ನು ಆಯ್ಕೆ ಮಾಡಲು ಇಷ್ಟ ಪಡುತ್ತೇನೆ, ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ ಹಾಗೂ ಜನ ಸಾಮಾನ್ಯರಿಗೆ ಟಾಮ್‌ ಆಂಡ್‌ ಜರ್ರಿ ಸಿನಿಮಾದ ಮೂಲಕ ಒಳ್ಳೆ ಸಂದೇಶವನ್ನು ಕೊಡಲು ಪ್ರಯತ್ನಿಸಿದ್ದೀವಿ ಎಂದು ನಟ ನಿಶ್ಚಿತ್ ಕೊರೋಡಿ ಹೇಳಿದ್ದಾರೆ.

ಟಾಮ್‌ ಆಂಡ್‌ ಜರ್ರಿ ಚಿತ್ರದ ಹಿನ್ನಲೆ....!

ಹೆಸರಿಗೆ ತಕ್ಕಂತೆ ಈ ಸಿನಿಮಾದಲ್ಲಿ ಟಾಮ್‌ ಆಂಡ್‌ ಜರ್ರಿ ಯಾವಾಗಲು ಜಗಳ ಆಡ್ತ ಇರ್ತಾರೆ. ಜನರಿಗೆ ಸರಳವಾಗಿ ಅರ್ಥ ಆಗೋ ಭಾಷೆ ಅಂದ್ರೆ ಲವ್‌ ಹಾಗಾಗಿ ಕಥೆನ ಮುಗಿಸೋಕೆ ಫಿಕ್ಷನ್‌ ಪಾಯಿಂಟ್(fiction point) ಬೇಕಿತ್ತು ಅದಕ್ಕೆ ಮಾತ್ರ ಲವ್‌ ಸ್ಟೋರಿಯ ಬಳಕೆ ಮಾಡಿದ್ದೀನಿ, ಸಿನಿಮಾದಲ್ಲಿ ಲವ್‌ ತುಂಬಾ ಕಡಿಮೆ ಇದೆ̧  ಸಿನಿಮಾ ಲವ್‌ ಸ್ಟೋರಿ ಸುತ್ತ ಸುತ್ತಲ್ಲ. ಈ ಸಿನಿಮಾದಲ್ಲಿ ಅಧ್ಯಾತ್ಮ ಹಾಗೂ ಸಂತೋಷ ‌ ಕರಪ್ಟ್ (corrupt) ಆಗಿರುವ ಬಗ್ಗೆ ಪ್ರಶ್ನೆ ಮಾಡಿದ್ದೀವಿ, ಅಧ್ಯಾತ್ಮದ ಕಥೆಯನ್ನ ಕರ್ಮಶಿಯಲ್ಲಾಗಿ ತೋರಿಸುವ ಹೊಸ ಪ್ರಯತ್ನ ಮಾಡಿದ್ದೀವಿ, ಈ ನಮ್ಮ ಹೊಸ ಪ್ರಯತ್ನ ಸಿನಿಮಾ ಪ್ರಿಯರಿಗೆ ಮೆಚ್ಚುಗೆಯಾಗುತ್ತೆ ಎನ್ನುವ ನಂಬಿಕೆಯಿದೆ ಎಂದು ಸಿನಿಮಾದ ನಿರ್ದೇಶಕ ರಾಘವ್‌ ವಿನಯ್‌ ತಮ್ಮ ಚಿತ್ರದ ಬಗ್ಗೆ ಹೇಳಿದ್ದಾರೆ.

ಟಾಮ್ ಅಂಡ್ ಜೆರ್ರಿ ತಂಡ ಇತ್ತೀಚೆಗೆ ಗೌರೀಶ್ ಅಕ್ಕಿ ಸ್ಟುಡಿಯೋ ಗೆ ಬಂದು ತಮ್ಮ ಸಂತೋಷ, ಸಂಭ್ರಮ ಮತ್ತು ಟೆನ್ಶನ್ ಎಲ್ಲವನ್ನೂ ಹೇಳಿಕೊಂಡಿತು. ಈ ಸಂದರ್ಶನದ ಲಿಂಕ್ ಇಲ್ಲಿದೆ.

click me!