'ಕರುನಾಡ ತಾಯಿ ಸದಾ ಚಿನ್ಮಯಿ' ಹಾಡಿನಲ್ಲೇ ಕನ್ನಡದ ಬಾವುಟ ಉಲ್ಟಾ! 41 ವರ್ಷಗಳ ಬಳಿಕ ಈಗ ವೈರಲ್​

Published : Nov 20, 2026, 08:30 PM IST
Karunada Thayi Song

ಸಾರಾಂಶ

1985ರಲ್ಲಿ ಬಿಡುಗಡೆಯಾದ ರವಿಚಂದ್ರನ್ ಅವರ 'ನಾನು ನನ್ನ ಹೆಂಡ್ತಿ' ಚಿತ್ರದ ಪ್ರಸಿದ್ಧ 'ಕರುನಾಡ ತಾಯಿ' ಹಾಡಿನಲ್ಲಿ ಕನ್ನಡ ಬಾವುಟ ಉಲ್ಟಾ ಹಾರಿಸಿರುವ ವಿಚಾರ ಈಗ ವೈರಲ್ ಆಗಿದೆ. 41 ವರ್ಷಗಳ ಬಳಿಕ ಈ ಕಲಾ ಪ್ರಮಾದ ನೆಟ್ಟಿಗರ ಗಮನಕ್ಕೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಬೆಂಗಳೂರು: ನವೆಂಬರ್​ ಬಂತೆಂದರೆ ಸಾಕು, ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಕನ್ನಡಿಗರಿಗೆ ಅಭಿಮಾನ ಉಕ್ಕಿ ಹರಿಯುತ್ತದೆ. 'ಕನ್ನಡ್​ ಗೊತಿಲ್'​ ಎಂದು ಸ್ಟೈಲ್​ ಆಗಿ ಹೆಮ್ಮೆಯಿಂದ ಹೇಳಿಕೊಳ್ಳುವವರೂ ಕನ್ನಡದ ಬಗ್ಗೆ ಹೆಮ್ಮೆಯಿಂದ ಭಾಷಣ ಮಾಡುವುದು ಇದೆ. ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ಇತಿಹಾಸವನ್ನು ಗೂಗಲ್​ನಲ್ಲಿ ಹುಡುಕಿ ಕನ್ನಡದ ಅಭಿಮಾನವನ್ನು ಮೆರೆಯುವವರು ಇದ್ದಾರೆ. ಅದೇನೇ ಇದ್ದರೂ ನವೆಂಬರ್​ ತಿಂಗಳಿನಲ್ಲಿ ಕನ್ನಡದ ಒಂದಷ್ಟು ಹಾಡುಗಳಿಗೆ ಸಕತ್​ ಬೇಡಿಕೆ ಇದ್ದೇ ಇದೆ. ಕನ್ನಡದ ಹೆಮ್ಮೆಯ ಬಗ್ಗೆ ಡಾ.ರಾಜ್​, ವಿಷ್ಣುವರ್ಧನ್​, ರವಿಚಂದ್ರನ್, ಪುನೀತ್​ ರಾಜ್​, ಶಿವರಾಜ್ ಕುಮಾರ್​​... ಹೀಗೆ ಹಲವು ಕಲಾವಿದರು ಹಾಡಿರುವ ಹಾಡುಗಳಿಗೆ ತುಂಬಾ ಬೇಡಿಕೆ ಇದ್ದು, ಅವುಗಳನ್ನೇ ಹಾಡಲಾಗುತ್ತದೆ. ಅವುಗಳಲ್ಲಿ ಒಂದು ಕರುನಾಡ ತಾಯಿ ಸದಾ ಚಿನ್ಮಯಿ ಹಾಡು.

ಕನ್ನಡದ ಬಾವುಟವೇ ಉಲ್ಟಾ

'ನಾನು ನನ್ನ ಹೆಂಡ್ತಿ' ಚಿತ್ರದ ಹಾಡು ಇದಾಗಿದೆ. ನಟ ರವಿಚಂದ್ರನ್​ ಅಭಿನಯದ ಸಿನಿಮಾ ಬಿಡುಗಡೆಯಾಗಿದ್ದು 1985ರಲ್ಲಿ. ಇದರಲ್ಲಿನ 'ಕರುನಾಡ ತಾಯಿ ಸದಾ ಚಿನ್ಮಯಿ' ಹಾಡು ಕನ್ನಡದ ಪ್ರೇಮವನ್ನು ಹೇಳುವಾಗ ಎಲ್ಲೆಡೆ ಪ್ರಸಾರ ಮಾಡಲಾಗುತ್ತದೆ. ನವೆಂಬರ್​ ತಿಂಗಳಿನಲ್ಲಿ ನಡೆಯುವ ಆರ್ಕೆಷ್ಟ್ರಾಗಳಲ್ಲಿಯೂ ಈ ಹಾಡು ಇದ್ದೇ ಇರುತ್ತದೆ. ಈ ಚಿತ್ರ ಬಿಡುಗಡೆಯಾಗಿ ಇದೀಗ 41 ವರ್ಷವಾಗಿದೆ. ಆದರೆ ಇಷ್ಟೂ ವರ್ಷಗಳವರೆಗೆ ಗಮನಿಸದೇ ಇದ್ದ ಒಂದು ವಿಷ್ಯ ಈಗ ಸಕತ್​ ಟ್ರೋಲ್​ ಆಗುತ್ತಿದೆ. ಅದು ಕನ್ನಡದ ಈ ಹಾಡಿನಲ್ಲಿ ಕನ್ನಡದ ಧ್ವಜವನ್ನು ಉಲ್ಟಾ ಹಾಕಿರುವುದು!

ಕನ್ನಡ ಬಾವುಟದ ಅಧಿಕೃತ ಮತ್ತು ಸರಿಯಾದ ಕ್ರಮದಲ್ಲಿ ಮೇಲ್ಭಾಗ ಹಳದಿ (ಅರಿಶಿನ) ಮತ್ತು ಕೆಳಭಾಗ ಕೆಂಪು (ಕುಂಕುಮ) ಇರಬೇಕು. ಅರಿಶಿಣ, ಶಾಂತಿ, ಮಂಗಳ ಮತ್ತು ಆರೋಗ್ಯಕರ ಸಮಾಜದ ಸಂಕೇತವನ್ನು ಹಳದಿ ಬಣ್ಣ ಸೂಚಿಸಿದರೆ, ಕುಂಕುಮವು ಧೈರ್ಯ, ಶಕ್ತಿ ಮತ್ತು ಅಭಿವೃದ್ಧಿಯನ್ನು ಸೂಚಿಸುತ್ತದೆ. 1965ರಲ್ಲಿ 'ಕನ್ನಡ ಪಕ್ಷ'ದ ಮುಖಂಡರಾಗಿದ್ದ ಎಂ. ರಾಮಮೂರ್ತಿ ಅವರು ಈ ಬಾವುಟವನ್ನು ರೂಪಿಸಿದರು. ಆದರೆ ಈ ಹಾಡಿನಲ್ಲಿ ಕೆಂಪು ಭಾಗ ಮೇಲುಗಡೆ ಮತ್ತು ಹಳದಿ ಕೆಳಭಾಗದಲ್ಲಿ ಇರುವುದು ಇಷ್ಟು ವರ್ಷವಾದರೂ ಯಾರ ಗಮನಕ್ಕೂ ಬರಲೇ ಇಲ್ಲ.

ಜಾಲತಾಣದಲ್ಲಿ ಚರ್ಚೆ

ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಇದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ರವಿಚಂದ್ರನ್​ ಅವರು ಹಾಡುತ್ತಿರುವ ಕರುನಾಡ ತಾಯಿ... ಹಾಡಿನ ವಿಡಿಯೋ ವೈರಲ್ ಆಗುತ್ತಿದ್ದು, ಅಲ್ಲಿ ವೇದಿಕೆ ಮೇಲೆ ಹಾಕಿರುವ ಕನ್ನಡದ ಬಾವುಟದಿಂದ ಹಿಡಿದು, ಅಲ್ಲಿಯ ಕಲಾವಿದರು ಧರಿಸಿರುವ ಕನ್ನಡದ ಬಾವುಟ ಎಲ್ಲವೂ ಉಲ್ಟಾ ಆಗಿರುವುದನ್ನು ನೋಡಬಹುದಾಗಿದೆ. ಹಂಸಲೇಖ ಅವರ ಸಾಹಿತ್ಯ, ಶಂಕರ್-ಗಣೇಶ್ ಸಂಗೀತ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಗಾಯನವಿರುವ ಈ ಹಾಡು ಕನ್ನಡಿಗರ ಅತ್ಯಂತ ನೆಚ್ಚಿನ ನಾಡಗೀತೆಗಳಲ್ಲಿ ಒಂದಾಗಿದೆ. ಆದರೆ, ಚಿತ್ರೀಕರಣದ ಸಮಯದಲ್ಲಿ ಕಲಾ ವಿಭಾಗದ ಅಜಾಗರೂಕತೆಯಿಂದ ಈ ಪ್ರಮಾದ ನಡೆದಿದೆ. ಬಹುಶಃ ಖುದ್ದು ರವಿಚಂದ್ರನ್​ ಅವರಿಗೇ ಈ ವಿಷಯ ತಿಳಿದಿರಲಿಕ್ಕಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಲಕ್ಷ್ಮೀಪುತ್ರ' ವೇದಿಕೆಯಲ್ಲಿ ಯಶ್ ಅವರ ಫೇಮಸ್ ಡೈಲಾಗ್ ಹೊಡೆದ ಚಿಕ್ಕಣ್ಣ; ಖಡಕ್ ಸಂದೇಶ ಪಾಸ್ ಮಾಡಿದ್ದು ಯಾರಿಗೆ?
ನಟಿ ಕಲ್ಪನಾ ಸಾವನ್ನಪ್ಪಿದ ಬಂಗ್ಲೆಯಲ್ಲಿ ಆ ರಾತ್ರಿ ಭಯಾನಕ ಅನುಭವ: ಜೀವ ಬಾಯಿಗೆ ಬಂದದ್ದನ್ನು ನೆನೆದ 'ಮುಖ್ಯಮಂತ್ರಿ' ಚಂದ್ರು