ರಿಷಬ್ ಶೆಟ್ಟಿ ಕಾಂತಾರ-ಪ್ರೀಕ್ವೆಲ್‌ನಲ್ಲಿ ತೆಲುಗು ಸ್ಟಾರ್ ಜೂ. ಎನ್‌ಟಿಆರ್ ನಟಿಸ್ತಾರಾ?

By Shriram Bhat  |  First Published Sep 13, 2024, 7:58 AM IST

ರಿಷಬ್ ಶೆಟ್ಟಿ ಕಾಂತಾರದಲ್ಲಿ ಟಾಲಿವುಡ್ ಸ್ಟಾರ್ ನಟ, ರಾಜಮೌಳಿಯವರ 'ಆರ್‌ಆರ್‌ಆರ್' ಖ್ಯಾತಿಯ ಜೂ. ಎನ್‌ಟಿಆರ್ ನಟಿಸಿದರೆ ಯಾವುದೇ ಅಚ್ಚರಿಯಿಲ್ಲ ಎನ್ನಬಹುದು. ಜೊತೆಗೆ, ಅವರಿಗೆ ಕನ್ನಡ ನಾಡು, ತುಳು ನಾಡು ಹೊಸದೇನೂ ಅಲ್ಲ. ಏಕೆಂದರೆ, ಅವರ ತಾಯಿಯ ಊರು ಉಡುಪಿಯ ಕುಂದಾಪುರ...


ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಿನಿಮಾ ವಿಷ್ಯದಲ್ಲಿ ಸೀಕ್ರೆಟ್ ಮೆಂಟೇನ್ ಮಾಡೋದ್ರಲ್ಲಿ ಸಿದ್ಧ ಹಸ್ತರು ಎನ್ನಬಹುದು. ಈಗ ಯಾಕೆ ಈ ವಿಷ್ಯ ಅಂದ್ರೆ, ಕಾಂತಾರ ಸಿನಿಮಾದ ಪ್ರೀಕ್ವೆಲ್‌ನಲ್ಲಿ, ಅಂದ್ರೆ ಮುಂಬರುವ ಚಿತ್ರದಲ್ಲಿ ಯಾರೆಲ್ಲ ನಟಿಸ್ತಾ ಇದಾರೆ, ನಾಯಕಿ ಯಾರು ಅನ್ನೋ ಸಂಗತಿಯನ್ನ ಎಲ್ಲೂ ಅವರು ಹೊರಜಗತ್ತಿಗೆ ಬಹಿರಂಗ ಪಡಿಸಿಲ್ಲ. ಇದೀಗ ಕೆಲವರಿಗೆ ಬರುತ್ತಿರುವ ಸಂದೇಹ ಏನಂದ್ರೆ, ಈ ಚಿತ್ರದಲ್ಲಿ ಖ್ಯಾತ ತೆಲುಗು ನಟರೊಬ್ಬರು ನಟಿಸ್ತಾರಾ ಅಂತ!

ಹೌದು, ಕೆಲವರು ಹೇಳೋ ಪ್ರಕಾರ, ಇತ್ತೀಚೆಗೆ ತಮ್ಮ ಅಜ್ಜಿಯ ಮನೆ ಊರು ಕುಂದಾಪುರಕ್ಕೆ, ಅಕ್ಕಪಕ್ಕದ ದೇವಸ್ಥಾನಗಳಿಗೆ ಕಾಂತಾರ ನಿರ್ದೇಶಕರು, ನಟರು ಆಗಿರುವ ರಿಷಬ್ ಶೆಟ್ಟಿ ಅವರೊಂದಿಗೆ ಜೂನಿಯರ್ ಎನ್‌ಟಿಆರ್ ಅವರು ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ರಿಷಬ್ ಶೆಟ್ಟಿ ಅವರು ಅವರೊಂದಿಗೆ ಇದ್ದ ರೀತಿ ಕ್ಲಾಸ್‌ಮೇಟ್‌ ತರಹ ಇತ್ತು ಎನ್ನಲಾಗುತ್ತಿದೆ. ಹಾಗಿದ್ದರೆ ವಿಷ್ಯ ಬೇರೇನೋ ಇದ್ಯಾ? ಬೇರೆ ಏನೋ ಅಂದ್ರೆ, ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್‌ನಲ್ಲಿ ಜೂ. ಎನ್‌ಟಿಆರ್‌ ನಟಿಸ್ತಾ ಇದಾರಾ?

Tap to resize

Latest Videos

undefined

ಗೊತ್ತಿಲ್ಲ. ಈ ಬಗ್ಗೆ ಕಾಂತಾರ ಟೀಮ್‌ ಕಡೆಯಿಂದ ಅಥವಾ ಸ್ವತಃ ರಿಷಬ್ ಶೆಟ್ಟಿ ಅವರಿಂದ ಯಾವುದೇ ಅಧಿಕೃತ ಸುದ್ದಿ ಬಂದಿಲ್ಲ. ಅದು ಬಂದ ಮೇಲೆ ಜಗತ್ತಿಗೇ ಗೊತ್ತಾಗುತ್ತೆ ಬಿಡಿ.. ಆದರೆ ಇತ್ತೀಚಿನ ಬೆಳವಣಿಗೆ, ಅವರಿಬ್ಬರ ನಡೆ-ನುಡಿ ನೋಡಿದರೆ ನಟ ಜೂ. ಎನ್‌ಟಿಆರ್ ಅವರು ಕಾಂತಾರ ಸಿನಿಮಾದ ಮುಖ್ಯ ಭಾಗವಾದರೂ ಅಚ್ಚರಿಯೇನೂ ಇಲ್ಲ. ಏಕೆಂದರೆ, ಈ ಮೊದಲು ಬಂದ ಕಾಂತಾರಕ್ಕೆ, ಪ್ಯಾನ್ ಇಂಡಿಯಾ ಸೇರಿದಂತೆ ಯಾವುದೇ ಪ್ರೀ-ಪ್ಲಾನ್ ಇರಲಿಲ್ಲ. ಆದರೆ, ಈಗ ಹಾಗಿಲ್ಲ ಪರಿಸ್ಥಿತಿ!

ಈ ಕಾರಣಕ್ಕೆ, ರಿಷಬ್ ಶೆಟ್ಟಿ ಕಾಂತಾರದಲ್ಲಿ ಟಾಲಿವುಡ್ ಸ್ಟಾರ್ ನಟ, ರಾಜಮೌಳಿಯವರ 'ಆರ್‌ಆರ್‌ಆರ್' ಖ್ಯಾತಿಯ ಜೂ. ಎನ್‌ಟಿಆರ್ ನಟಿಸಿದರೆ ಯಾವುದೇ ಅಚ್ಚರಿಯಿಲ್ಲ ಎನ್ನಬಹುದು. ಜೊತೆಗೆ, ಅವರಿಗೆ ಕನ್ನಡ ನಾಡು, ತುಳು ನಾಡು ಹೊಸದೇನೂ ಅಲ್ಲ. ಏಕೆಂದರೆ, ಅವರ ತಾಯಿಯ ಊರು ಉಡುಪಿಯ ಕುಂದಾಪುರ. ಹೀಗಾಗಿ ಅವರಿಗೆ ತುಳು ಹಾಗೂ ಕನ್ನಡ ಹೊಸದೇನೂ ಅಲ್ಲ. ಮೇಲಾಗಿ, ಕನ್ನಡ ಸಿನಿಮಾದಲ್ಲಿ ನಟಿಸುವುದು ಈಗ ಭಾರತದ ಯಾವುದೇ ಕಲಾವಿದರಿಗೆ ಹೆಮ್ಮೆ ತರುವಂತ ಸಂಗತಿ!

ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ, ಜೂನಿಯರ್ ಎನ್‌ಟಿಆರ್‌ ಅವರು ಕನ್ನಡದ ಪ್ಯಾಮ್ ಇಂಡಿಯಾ ಸಿನಿಮಾ ಆಗಲಿರುವ 'ಕಾಂತಾರ-ಪ್ರೀಕ್ವೆಲ್‌ನಲ್ಲಿ ನಟಿಸಲೂಬಹುದು. ಈ ಬಗ್ಗೆ ಮಾಧ್ಯಮದ ಕಡೆಯಿಂದ ಬಂದ ಪ್ರಶ್ನೆಗಳಿಗೆ ನಟ ಜೂ. ಎನ್‌ಟಿಆರ್‌ ಅದೇನು ಹೇಳಿದ್ದಾರೆ ಗೊತ್ತಾ? ಸೂಕ್ಷ್ಮವಾಗಿ ಅವರ ಮಾತನ್ನು ಗಮನಿಸದರೆ ಇಲ್ಲ ಎನ್ನಲೂ ಅಸಾಧ್ಯ! ಹಾಗಿದ್ದರೆ, ನಟಿಸ್ತಿದಾರಾ ಅಂದ್ರೆ, ಹೌದು ಎನ್ನಲೂ ಅಸಾಧ್ಯ! ಇದೊಂಥರಾ ಅಡ್ಡಗೋಡೆಯ ಮೇಲಿನ ದೀಪದಂತೆ!

ಕಾಂತಾರದಲ್ಲಿ ಜೂ. ಎನ್‌ಟಿಆರ್‌ ನಟಿಸ್ತಿದಾರಾ? ಈ ಪ್ರಶ್ನೆಗೆ ನಟ ಜೂನಿಯರ್ ಎನ್‌ಟಿಆರ್ ಅವರು 'ದೇವಸ್ಥಾನದಲ್ಲಿ ಈ ವಿಷ್ಯ ಬೇಡ..' ಅಂತಷ್ಟೇ ಅಂದಿದಾರೆ, ಜೊತೆಗೆ, ಮತ್ತೆ ಮತ್ತೆ ಕೇಳಿದಾಗ 'ಅವ್ರು ಪ್ಲಾನ್ ಮಾಡಿದ್ರೆ ನಾನು ರೆಡಿ..' ಅಂದ್ರು.  ಹಾಗಿದ್ರೆ, ಮಂಗಳೂರು ನೆಂಟ ಜೂ. ಎನ್‌ಟಿಆರ್ ಕಾಂತಾರಾ ಪ್ರೀಕ್ವೆಲ್‌ನಲ್ಲಿ ನಟಿಸುವ ಸಾಧ್ಯತೆ ಇದೆಯಾ? ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು! ಸಾಧ್ಯತೆಯಂತೂ ಇದ್ಧೇ ಇದೆ, ಏನಂತೀರಾ?

click me!