
ನಟಿ, ಬಿಗ್ ಬಾಸ್ ಖ್ಯಾತಿಯ ಶ್ವೇತಾ ಭಟ್ ಅವರು ಹಾರ್ಟ್ ಟಚಿಂಗ್ ವೀಡಿಯೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ನಟಿ ಅನುಶ್ರೀ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಷ್ಟೇ ಅಲ್ಲ, 'ಈ ಸುಂದರ ಕ್ಷಣದ ಸವಿನೆನಪಿಗಾಗಿ ಥ್ಯಾಂಕ್ಸ್ ಮೇಡಂ' ಎಂದಿದ್ದಾರೆ. ಜೊತೆಗೆ, ಈ ಕೋಕೋ ಹುಟ್ಟಿದಾಗ ಅಂಗವಿಕಲನಾಗಿದ್ದ, ಅಶಕ್ತನಾಗಿದ್ದ.. ಆದರೆ, ಆಂಕರ್ ಅನುಶ್ರೀ ಮೇಡಂ ಅವರು ಅವನಿಗೆ ಊಟ ಮಾಡಿಸಿದ್ದಾರೆ' ಎಂದಿದ್ದಾರೆ.
ಹಾಗಿದ್ದರೆ ನಟಿ ಶ್ವೇತಾ ಭಟ್ ಹೇಳುತ್ತಿರುವುದೇನು? ಬಿಡಿಸಿ ಹೇಳಬೇಕು ಎಂದರೆ, ಶ್ವೇತಾ ಭಟ್ ಸಾಕಿರುವ ನಾಯಿಮರಿ ಹೆಸರು ಕೋಕೋ. ಅದು ಸಣ್ಣ ಮರಿಯಾಗಿದ್ದಾಗ ನಡೆದಾಡಲು ಕಷ್ಟ ಪಡುತ್ತಿತ್ತು. ಕಾರಣ, ಅದು ತುಂಬಾ ಅಶಕ್ತ ಸ್ಥಿತಿಯಲ್ಲಿ ಇತ್ತು. ಆದರೆ, ನಟಿ, ನಿರೂಪಕಿ ಅನುಶ್ರೀ ಅವರು ಅದನ್ನು ತಮ್ಮ ಮಡಿಲಿನಲ್ಲಿ ಎತ್ತಿಕೊಂಡು ಅದಕ್ಕೆ ತಮ್ಮ ಕೈಯಾರೆ ಊಟವನ್ನು ಮಾಡಿಸಿದ್ದರು. ಆ ಬಗ್ಗೆ ಶ್ವೇತಾ ಭಟ್ ಹೇಳಿಕೊಂಡಿದ್ದಾರೆ.
ಸೋನಲ್ ಮಂಥೆರೋ ನಟ ದರ್ಶನ್‌ಗೆ ಬ್ರದರ್ ಅಂತೆ ಸಿಸ್ಟರ್ ಅಲ್ಲ! ಸುಳ್ಳಲ್ಲ, ಸ್ವತಃ ದರ್ಶನ್ ಹೇಳಿದ್ದು ರೀ!
ತಮ್ಮ ಇನ್‌ಸ್ಟಾಗ್ರಾಂನಲ್ಲಿ ನಾಯಿಮರಿಗೆ ಅನುಶ್ರೀ ಅವರು ಊಟ ಮಾಡಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಅದಕ್ಕೆ ಚೆಂದದ ಕ್ಯಾಪ್ಶನ್ ಕೊಟ್ಟಿದ್ದಾರೆ ಶ್ವೇತಾ ಭಟ್. ಜೊತೆಗೆ, ಎಲ್ಲರಿಗೂ ಗೊತ್ತು, 'ಅನುಶ್ರೀ ಕರ್ನಾಟಕದ ಹಾರ್ಟ್.. ಕೋಕೋ ಬಗ್ಗೆ ಮೇಡಂ ಲವ್ ಬಣ್ಣಿಸಲು ಅಸಾಧ್ಯ, ಅಪರಿಮಿತ..' ಎಂದು ಬರೆದಿದ್ದಾರೆ. ಇಷ್ಟು ದಿನ ಕರ್ನಾಟಕದ ಹುಡುಗರ ಹಾರ್ಟ್ ಅನುಶ್ರೀ ಎಂದು ಅಂದುಕೊಂಡಿದ್ದವರಿಗೆ ಈಗ ಶಾಕ್ ಆಗಿರುತ್ತೆ. ಏಕೆಂದರೆ, ಶ್ವೇತಾ ಭಟ್ ಹೇಳಿದ್ದಾರೆ, ಇಡೀ ಕರ್ನಾಟಕದ ಹಾರ್ಟ್ ಅಂತ...!
ನಟಿ ಅನುಶ್ರೀ ಅವರು ಮಾತಿನ ಪ್ರಿಯೆ ಎಂಬುದು ಎಲ್ಲರಿಗೂ ಗೊತ್ತು. ಅವರು ಪ್ರಾಣಿ ಪ್ರಿಯೆ ಎಂಬುದೂ ಹಲವರಿಗೆ ಗೊತ್ತು. ಹೌದು, ನಟಿ, ಆಂಕರ್ ಅನುಶ್ರೀ ಅವರಿಗೆ ಪ್ರಾಣಿಗಳು ಎಂದರೆ ತುಂಬಾ ಪ್ರೀತಿ, ಅದರಲ್ಲೂ ನಾಯಿ ಎಂದರೆ ಅಪಾರ ಅಕ್ಕರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೋಕೋ ವಿಡಿಯೋ ಮ್ಯಾಟರ್ ಕೂಡ ಬಯಲಾಗಿದೆ. ಕೋಕೋವನ್ನು ತಮ್ಮ ಬೆಚ್ಚನೆಯ ಮಡಿಲಲ್ಲಿ ಇಟ್ಟುಕೊಂಡು ಊಟ ತಿನ್ನಿಸಿದ್ದಾರೆ ಅನುಶ್ರೀ. ಹಲವು ಹುಡುಗರ ಹಾರ್ಟ್ ಕಥೆ ಏನಾಗಿದೆಯೋ ಏನೋ!
ಡಾ. ರಾಜ್‌ಕುಮಾರ್ ಬಗ್ಗೆ ವಿಷ್ಣುವರ್ಧನ್ ನೇರಾನೇರ ಮಾತು, 'ನಾನವನಲ್ಲ' ಅಂದೇಬಿಟ್ರು ಸಾಹಸಸಿಂಹ!
ಒಟ್ಟಿನಲ್ಲಿ, ಕರ್ನಾಟಕದ ಕ್ರೇಜ್ ಆಗಿರುವ ಅನುಶ್ರೀ ಅವರು ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಅವರೇನು ಮಾಡಲಿ, ಮಾಡದಿರಲಿ, ಅವರ ಸುದ್ದಿ ಕರುನಾಡಿತ ತುಂಬಾ ಸುತ್ತುತ್ತಲೇ ಇರುತ್ತದೆ. ಈಗ ನೋಡಿ, ಕೋಕೋ ಚಿಕ್ಕವನಾಗಿದ್ದಾಗ ಅನುಶ್ರೀ ಮಾಡಿಸಿದ್ದ ಊಟ ನೆನಪಿಸಿಕೊಂಡು ನಟಿ ಶ್ವೇತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಅದೀಗ, ಸಖತ್ ವೈರಲ್ ಆಗಿ ಗಲ್ಲಿಗಲ್ಲಿಯನ್ನೂ ಸುತ್ತುತ್ತಿದೆ. ಇನ್ನು ನಿಲ್ಲಿಸೋದು ಕಷ್ಟ ಬಿಡಿ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.