ಏ ಬ್ರೋ.., ಆ್ಯಕ್ಚುವಲಿ ಸೋನಲ್ ಯಾವತ್ತೂ ನಂಗೆ ಹುಡ್ಗಿ ಅಂತ ಅನ್ನಿಸ್ಲೇ ಇಲ್ಲ; ನಟ ದರ್ಶನ್!

By Shriram Bhat  |  First Published Sep 12, 2024, 6:14 PM IST

ನಟ ದರ್ಶನ್ ಅವರು ಯಾರ ಬಗ್ಗೆ, ಯಾವಾಗ ಮತ್ತು ಎಲ್ಲಿ ಮಾತನಾಡಿದ್ದ ವಿಡಿಯೋ ಈಗ ವೈರಲ್ಆಗುತ್ತಿದೆ? ಅದರಲ್ಲಿ ಅವರೇನು ಹೇಳಿದ್ದಾರೆ? ಈ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಸಾಕಷ್ಟು ಕುತೂಹಲ ಇರುತ್ತೆ. ಅದಕ್ಕೆ ಇಲ್ಲಿದೆ ಡೀಟೇಲ್ಸ್ ನೋಡಿ.. 


ನಟ ದರ್ಶನ್ ಅವರು ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ಈ ಸಮಯದಲ್ಲಿ ನಟ ದರ್ಶನ್ ಅವರು ಸಾರ್ವಜನಿಕ ವೇದಿಕೆಗಳಲ್ಲಿ, ಸಂದರ್ಶನಗಳಲ್ಲಿ ಮಾತನಾಡಿದ್ದ ಹಳೆಯ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಈಗ ಆ ಮಾತುಗಳಿಗೆ ಕೆಲವರು ನಿಜವಾಗಿ ಇರುವ, ಇರಬಹುದಾದ ಅರ್ಥವನ್ನು ಬಿಟ್ಟು ಬೇರೆ ಹೊಸ ಹೊಸ ಅರ್ಥ ಕಲ್ಪಿಸಿ ಕಾಮೆಂಟ್ ಹಾಕುತ್ತಿದ್ದಾರೆ. 

ಹಾಗಿದ್ರೆ, ನಟ ದರ್ಶನ್ (Darshan) ಅವರು ಯಾರ ಬಗ್ಗೆ, ಯಾವಾಗ ಮತ್ತು ಎಲ್ಲಿ ಮಾತನಾಡಿದ್ದ ವಿಡಿಯೋ ಈಗ ವೈರಲ್ಆಗುತ್ತಿದೆ? ಅದರಲ್ಲಿ ಅವರೇನು ಹೇಳಿದ್ದಾರೆ? ಈ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಸಾಕಷ್ಟು ಕುತೂಹಲ ಇರುತ್ತೆ. ಅದಕ್ಕೆ ಇಲ್ಲಿದೆ ಡೀಟೇಲ್ಸ್ ನೋಡಿ.. ಹೌದು ನಟ ದರ್ಶನ್ ಅವರು ಹಾವೇರಿಯಲ್ಲಿ ದೊಡ್ಡ ವೇದಿಕೆಯಲ್ಲಿ ನಟಿ ಸೋನಲ್ ಮಂಥೆರೋ ಬಗ್ಗೆ ಮಾತನಾಡಿದ್ದರು. ಅವರನ್ನು 'ಏ ಬ್ರೋ..' ಎಂದೇ ಕರೆದು ಸೋನಲ್ ಬಗ್ಗೆ ಕೆಲವು ಸಂಗತಿಗಳನ್ನು ಹೇಳಿದ್ದರು. ಅದಕ್ಕೆ ನಟಿ ಸೋನಲ್ ನಾಚಿ ನೀರಾಗಿದ್ದರು. 

Tap to resize

Latest Videos

undefined

ನಟ ದರ್ಶನ್ ಅವರು' ಏ ಬ್ರೋ, ಅಕ್ಚ್ಯುಲಿ ಸೋನಲ್ (Sonal Monteiro) ಯಾವತ್ತೂ ನಂಗೆ ಹುಡ್ಗಿ ಅಂತ ಅನ್ನಿಸ್ಲೇ ಇಲ್ಲ..ಅನ್ಸೋದೂ ಇಲ್ಲ, ಅವ್ಳು ಒಂಥರಾ ಹುಡಗ್ರ ಥರಾನೇ! ನಮ್ ಗುಂಪಲ್ಲಿ ಬರೀ ಹುಡುಗ್ರೇ ಇರ್ತೀವಿ, ಅದ್ರಲ್ಲಿ ಒಂದ್ ಎಕ್ಸೆಪ್ಶನ್ ಅಂದ್ರೆ ಅದು ಸೋನಲ್ ಒಬ್ರೇನೇ.. ನಮ್ ಜೊತೆ ಹೊರಗಡೆ ಬರುವಾಗ, ಸಾರಿ, ಈ ಥರ ಎಲ್ಲಾ ಡ್ರೆಸ್ ಎಲ್ಲಾ, ಇದೇನಿದು ಹೊಸ ಅವತಾರ ಅನ್ನೋ ತರ.. ಸೋನಲ್ ಅವ್ರು ನಮ್ಗೆಲ್ಲಾ ಒಂಥರಾ ಹುಡುಗ್ರ ಥರಾನೇ.. 'ಅಂತ ಹೇಳಿದ್ದ ನಟ ದರ್ಶನ್ ಅವರು ಬಳಿಕ, 'ಗರಡಿಯಲ್ಲಿ ತಮ್ಮ ಪಾತ್ರವನ್ನು ಸೋನಲ್ ಚೆನ್ನಾಗಿ ನಿರ್ವಹಿಸಿದ್ದಾರೆ' ಎಂದಿದ್ದರು. 

ಸೋನಲ್ ಯಾಕೆ ನಟ ದರ್ಶನ್‌ ನೋಡಲು ಇನ್ನೂ ಜೈಲಿಗೆ ಹೋಗಿಲ್ಲ? ಕಾರಣ ಬಿಚ್ಚಿಟ್ಟ ನಟಿ !

ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ಈಗ ನಟಿ ಸೋನಲ್ ಮಂಥೆರೋ ಅವರು ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರನ್ನು ಲವ್ & ಅರೇಂಜ್ಡ್‌ ಮ್ಯಾರೇಜ್ ಆಗಿದ್ದಾರೆ. ಸಾಕಷ್ಟು ಅದ್ದೂರಿ ಹಾಗೂ ಆಡಂಬರದ ಈ ಮದುವೆ ಸುದ್ದಿ ಕರ್ನಾಟಕದ ಮೂಲೆಮೂಲೆಯನ್ನೂ ತಲುಪಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮೊದಲು ಹಿಂದೂ ಸಂಪ್ರದಾಯದಂತೆ, ಬಳಿಕ ಕ್ರಿಶ್ಚಿಯನ್ ಪದ್ಧತಿಯಂತೆ ಈ ಜೋಡಿ ಮದುವೆ ನಡೆದಿದೆ. ಚಿತ್ರರಂಗದ ಬಹುತೇಕರು ಇದರಲ್ಲಿ ಭಾಗಿಯಾಗಿದ್ದರು. 

ಇನ್ನೊಂದು ಸಂಗತಿ ಎಂದರೆ, ಸೋನಲ್ ಹಾಗೂ ತರುಣ್ ಲವ್ & ಮದುವೆಯಲ್ಲಿ ನಟ ದರ್ಶನ್ ಅವರದೂ ಮುಖ್ಯ ಪಾತ್ರವಿದೆ ಎನ್ನಲಾಗಿದೆ. ನಟ ದಶ್ನ್ ಅವರು ಮಾಡಿರುವ ತಮಾಷೆಯನ್ನೇ ಸೀರಿಯಸ್ ಆಗಿ ಅವರಿಬ್ಬರೂ ತೆಗೆದುಕೊಂಡು ಬಳಿಕ ಅವರು ಲವ್ವಲ್ಲಿ ಬಿದ್ದು ಈಗ ಮದುವೆ ಆಗಿದ್ದಾರೆ ಎನ್ನಲಾಗಿದೆ. ಸತ್ಯ ಸಂಗತಿ ಅವರವರಿಗೇ ಗೊತ್ತು! 

ಡಾ. ರಾಜ್‌ಕುಮಾರ್ ಬಗ್ಗೆ ವಿ‍ಷ್ಣುವರ್ಧನ್ ನೇರಾನೇರ ಮಾತು, 'ನಾನವನಲ್ಲ' ಅಂದೇಬಿಟ್ರು ಸಾಹಸಸಿಂಹ!

ಅದೇನೇ ಇದ್ದರೂ ದರ್ಶನ್ ನಟನೆಯ ಕಾಟೇರ ಚಿತ್ರದ ನಿರ್ದೇಶಕರಾಗಿರುವ ತರುಣ್ ಸುಧೀರ್ ಅವರು ದರ್ಶನ್ ಅವರಿಗೆ ಅತ್ಯಾಪ್ತರಂತೂ ಹೌದು. ಇದೀಗ ಸೋನಲ್ ದರ್ಶನ್ ಅವರಿಗೆ ಸಿಸ್ಟರ್ ಅಲ್ಲ, 'ಬ್ರದರ್' ಎಂಬುದು ಎಲ್ಲರಿಗೂ ಗೊತ್ತಾಗಿದೆ! ಒಟ್ಟಿನಲ್ಲಿ, ನಟ ದರ್ಶನ್ ಮಾತು ಕೇಳಿ ಸ್ವತಃ ಸೋನಲ್ ಸೇರಿದಂತೆ ಅಲ್ಲಿದ್ದ ಎಲ್ಲರೂ ಒಂದು ಕ್ಷಣ ನಗೆಗಡಲಿನಲ್ಲಿ ತೇಲಿದ್ದಾರೆ. ಇನ್ನು ಸೋನಲ್ ನಾಚಿಕೆಯಿಂದ ಮುಖ ಮುಚ್ಚಿಕೊಂಡಿದ್ದಾರೆ. 

click me!