'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ ರಿವೀಲ್

By Suvarna NewsFirst Published Oct 23, 2021, 12:37 PM IST
Highlights

ನೀನು ನನಗೆ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ, ಯಾಕೆಂದರೆ ಅದು ನಿನಗೆ ಹೇಳಿದರೂ  ಅರ್ಥ ಆಗಲ್ಲ. ನನ್ನ ಹೆಸರು ವಿಕ್ರಮಾದಿತ್ಯ. ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲೊಬ್ಬನು ಅಲ್ಲ ಎಂದು ಪ್ರಭಾಸ್ ಹೇಳಿದ್ದಾರೆ.

ಟಾಲಿವುಡ್‌ (Tollywood) ರೆಬೆಲ್ ಸ್ಟಾರ್ ಪ್ರಭಾಸ್ (Prabhas)  ಅಭಿನಯದ ಬಹು ನಿರೀಕ್ಷಿತ ಚಿತ್ರ 'ರಾಧೆ ಶ್ಯಾಮ್' (Radhe Shyam) ಟೀಸರ್ ಬಿಡುಗಡೆಯಾಗಿದೆ. ಇಂದು ಪ್ರಭಾಸ್ 42ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ಪ್ರಯುಕ್ತ ಚಿತ್ರತಂಡ ವಿಕ್ರಮಾದಿತ್ಯನ ಲುಕ್‌ನಲ್ಲಿ ಪ್ರಭಾಸ್ ಪರಿಚಯದ ಟೀಸರ್‌ನ್ನು (Teaser) ಬಿಡುಗಡೆ ಮಾಡಿದೆ.

ಟೀಸರ್‌ನಲ್ಲಿ ಪ್ರಭಾಸ್ ವಿಕ್ರಮಾದಿತ್ಯನ (Vikramaditya) ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, 'ನೀನು ನನಗೆ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ. ಪ್ರೀತಿಯಲ್ಲಿ ನಿನ್ನ ಮನಸು ಯಾವಾಗ ಹೊಡೆದೋಗುತ್ತೊ ನನಗೆ ಗೊತ್ತು, ಆದರೆ ನಿನಗೆ ಹೇಳಲ್ಲ. ನಿನ್ನ ಸೋಲುಗಳು ನನಗೆ ಕಾಣುತ್ತೆ, ಆದರೆ ನಾನು ನಿನಗೆ ಹೇಳಲ್ಲ. ನಿನ್ನ ಸಾವಿನ ಅರಿವು ನನಗಾಗುತ್ತೆ, ಆದರೆ ನಾನು ನಿನಗೆ ಹೇಳಲ್ಲ. ನನಗೆಲ್ಲಾ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ. ಯಾಕೆಂದರೆ ಅದು ನಿನಗೆ ಹೇಳಿದರೂ  ಅರ್ಥ ಆಗಲ್ಲ. ನನ್ನ ಹೆಸರು ವಿಕ್ರಮಾದಿತ್ಯ. ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲೊಬ್ಬನು ಅಲ್ಲ' ಎಂದು ಪ್ರಭಾಸ್ ಖಡಕ್ ಡೈಲಾಗ್ ಹೇಳಿದ್ದಾರೆ. ಇಂಗ್ಲಿಷ್‌ ಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿದ್ದು, ವಿವಿಧ ಭಾಷೆಗಳಲ್ಲಿ ಉಪಶೀರ್ಷಿಕೆಗಳಿವೆ.
 


ಇನ್ನು ಇತ್ತಿಚೆಗಷ್ಟೇ ಪ್ರಭಾಸ್, 'ವಿಕ್ರಮಾದಿತ್ಯ ಯಾರು? 23 ರಂದು ಅವರನ್ನು ಭೇಟಿ ಮಾಡಿ. ಇಂಗ್ಲಿಷ್‌ ಭಾಷೆಯಲ್ಲಿ, ವಿವಿಧ ಭಾಷೆಗಳ ಉಪಶೀರ್ಷಿಕೆಗಳೊಂದಿಗೆ  'ರಾಧೆ ಶ್ಯಾಮ್' ಟೀಸರ್ ನೋಡಿ ಆನಂದಿಸಿ ಎಂದು ತಮ್ಮ ಪಾತ್ರದ ಆರು ಭಾಷೆಗಳಲ್ಲಿನ ಪೋಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ ಮಾಡಿದ್ದರು. ರೊಮ್ಯಾಂಟಿಕ್​ ಕಥಾ ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್, ವಿಕ್ರಮಾದಿತ್ಯ ಎಂಬ ಲವರ್​ ಬಾಯ್ (Lover Boy)​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಪೂಜಾ ಹೆಗ್ಡೆ (Pooja Hegde) ಪ್ರೇರಣಾ ಪಾತ್ರವನ್ನು ನಿರ್ವಹಿಸಲಿದ್ದಾರೆ. 

ಪ್ರಭಾಸ್ ಹುಟ್ಟುಹಬ್ಬಕ್ಕೆ ರಾಧೆ ಶ್ಯಾಮ್ ಟೀಸರ್ ರಿಲೀಸ್

ರಾಧಾ ಕೃಷ್ಣ ಕುಮಾರ್ (Radha Krishna Kumar) ನಿರ್ದೇಶನವಿರುವ ಈ ಚಿತ್ರಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ.  

ಆದಿಪುರುಷನ ಸೆಟ್‌ನಿಂದ ಪ್ರಭಾಸ್, ಸನ್ನಿ ಸಿಂಗ್ ಲೇಟೆಸ್ಟ್ ಸೆಲ್ಫಿ!

ಸಚಿನ್ ಖೇಡೇಕರ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. 'ರಾಧೆ ಶ್ಯಾಮ್' ಚಿತ್ರವು 2022ರ ಜನವರಿ 14ರ ಸಂಕ್ರಾಂತಿ ಹಬ್ಬದಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಒಟ್ಟಿನಲ್ಲಿ ಪ್ರಭಾಸ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ 'ರಾಧೆ ಶ್ಯಾಮ್' ಟೀಸರ್ ನೀಡುವ ಮೂಲಕ ಅವರ ಅಭಿಮಾನಿಗಳಿಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ.

"

click me!