ಬುಡಕಟ್ಟು ಜನಾಂಗದ ಮೇಲೆ ಬೆಳಕು ಚೆಲ್ಲಿದ ಗಾನಬಜಾನಾ; ಪೆಪೆ ಜೇನು ಕುರುಬರ ಗೀತೆಗೆ ಬಂತು ಜೈಕಾರ!

By Shriram BhatFirst Published Aug 11, 2024, 11:50 AM IST
Highlights

ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮೂಡಿ ಬರ್ತಿರುವ ಪೆಪೆ ಒಂದು ರೀತಿ ಪರಿಪೂರ್ಣ ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌..

ನಟಿಸಿದ ಪ್ರತಿ ಸಿನಿಮಾದಲ್ಲಿಯೂ ತಾವೊಬ್ಬ ಕ್ಲಾಸ್ ಆಕ್ಟರ್ ಅನ್ನೋದನ್ನು ಸಾಬೀತುಪಡಿಸಿಕೊಂಡು ಬಂದಿರುವ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ (Vinay Rajkumar) ಪೆಪೆ ಸಿನಿಮಾ ಮೂಲಕ ಮಾಸ್ ಅವತಾರ ತಾಳಿದಿದ್ದಾರೆ. ಪೆಪೆ ಚಿತ್ರದ ಟೀಸರ್ ಈಗಾಗಲೇ ಹಿಟ್ ಲೀಸ್ಟ್ ಸೇರಿದ್ದು, ಇದೀಗ ಬಿಡುಗಡೆಯಾಗಿರುವ ಹಾಡು ಭಾರೀ ಸದ್ದು ಮಾಡುತ್ತಿದೆ. ಪೆಪೆ ಚಿತ್ರತಂಡ ಪ್ರಿಸೆಟ್ ಎಂಬ ಟ್ಯಾಗ್ ಲೈನ್ ಅಡಿ ಚಿತ್ರ ಹಾಡೊಂದನ್ನು ಅನಾವರಣ ಮಾಡಿದೆ. 

ಪಿಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿರುವ ಗಾನಬಜಾನ ವಿಭಿನ್ನತೆಯಿಂದ ಕೂಡಿದೆ. ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ.ಜಿ.ಕುಮಾರ ಧ್ವನಿಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕಿದ್ದಾರೆ. ಇನ್ನೂ ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್ ಡಿಸೈನ್ ಬೇರೆ ರೀತಿ ಇದೆ ಅನ್ನೋದಕ್ಕೆ ಬಿಡುಗಡೆಯಾಗಿರುವ ಈ ಹಾಡು ಸೂಕ್ತ ಉದಾಹರಣೆ.

Latest Videos

ಇಲ್ಲ ಮೇಡಂ, ಆ ತರ ಏನೂ ಇಲ್ಲ, ರ್‍ಯಾಪಿಡ್ ರಶ್ಮಿ ಮಾತಿಗೆ ಅಡ್ಡಡ್ಡ ತಲೆ ಅಲ್ಲಾಡಿಸಿದ ಹಿತಾ ಚಂದ್ರಶೇಖರ್!

ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮೂಡಿ ಬರ್ತಿರುವ ಪೆಪೆ ಒಂದು ರೀತಿ ಪರಿಪೂರ್ಣ ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಗೋಲ್ಡನ್ ಸ್ಟಾರ್ ಸರ್​ಪ್ರೈಸ್​; 'ಕೃಷ್ಣಂ ಪ್ರಣಯ ಸಖಿ' ಮತ್ತೊಂದು ಸಾಂಗ್ ರಿಲೀಸ್..!

ಪೆಪೆ ಚಿತ್ರವು ಸಾಕಷ್ಟು ವಿಭಿನ್ನತೆಯಿಂದ ಕೂಡಿದೆ ಎನ್ನಲಾಗಿದೆ. ಈಗಾಗಲೇ ಬಿಡುಗಡೆ ಕಂಡಿರುವ ಪೆಪೆ ಚಿತ್ರದ ಹಾಡುಗಳೂ ಕೂಡ ಈ ನಿಟ್ಟಿನಲ್ಲಿ ಭಾರೀ ವಿಭಿನ್ನತೆಯಿಂದ ಕೂಡಿದ್ದು ಗಮನ ಸೆಳೆಯುತ್ತಿವೆ. ಈಗ ಪೆಪೆ ಚಿತ್ರದ ಮೇಲೆ ಸಿನಿಪ್ರೇಕ್ಷಕರಿಗೆ ಬಹಳಷ್ಟು ನಿರೀಕ್ಷೆ ಮೂಡತೊಡಗಿದೆ. ಆದರೆ, ಸಿನಿಮಾ ತೆರೆಗೆ ಬಂದಾಗ ನಿರೀಕ್ಷೆ ನಿಜವಾಗುತ್ತಾ ಅಥವಾ ಸುಳ್ಳಾಗುತ್ತಾ ಅನ್ನುವುದು ಸದ್ಯಕ್ಕೆ ಉತ್ತ ಸಿಗದ ಪ್ರಶ್ನೆ. 

click me!