ರಿಯಲ್ ಸ್ಟಾರ್‌ಗಾಗಿ ಮತ್ತೆ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಿದ ತಾನ್ಯಾ ಹೋಪ್

Published : Feb 08, 2023, 04:58 PM ISTUpdated : Feb 08, 2023, 05:18 PM IST
ರಿಯಲ್ ಸ್ಟಾರ್‌ಗಾಗಿ ಮತ್ತೆ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಿದ ತಾನ್ಯಾ ಹೋಪ್

ಸಾರಾಂಶ

ಬಹುಭಾಷಾ ನಟಿ ತಾನ್ಯಾ ಹೋಪ್ ಮತ್ತೆ ಕನ್ನಡಕ್ಕೆ ವಾಪಾಸ್ ಆಗಿದ್ದು ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

ಕರ್ನಾಟಕ ಮೂಲದ ನಟಿ ತಾನ್ಯಾ ಹೋಪ್ ಪರಭಾಷೆಯಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ. ಕನ್ನಡದ ಕೆಲವು ಸಿನಿಮಾಗಳಲ್ಲಿ  ಮಿಂಚಿದ ನಟಿ ತಾನ್ಯ ಬಳಿಕ ಕಾಣೆಯಾಗಿದ್ದರು. ಹಾಗಂತ ಸಿನಿಮಾದಿಂದ ದೂರ ಉಳಿದಿರಲಿಲ್ಲ. ತೆಲುಗು, ತಮಿಳು ಅಂತ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಾಗಿ ತಾನ್ಯ ಕನ್ನಡ ಕಡೆ ಮುಖಮಾಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ತಾನ್ಯಾ ಹೋಪ್ ರಿಯಲ್ ಸ್ಟಾರ್ ನಟನೆಯ ಕಬ್ಜ ಸಿನಿಮಾದಲ್ಲಿ ನಟಿಸಲಿದ್ದಾರಂತೆ. 

ಕಬ್ಜ ಸಿನಿಮಾದ ವಿಶೇಷ ಹಾಡಿಗೆ ತಾನ್ಯಾ ಹೆಜ್ಜೆ ಹಾಕುತ್ತಿದ್ದಾರೆ. ಈ ಹಾಡನ್ನು ಸದ್ಯದಲ್ಲೇ ಚಿತ್ರೀಕರಿಸಲಿದ್ದು ಈಗಾಗಲೇ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆಯಂತೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅನೇಕ ಡಾನ್ಸರ್ ನಡುವೆ ಈ ಹಾಡನ್ನು ಸೆರೆಹಿಡಿಯಲಾಗುತ್ತಿದೆಯಂತೆ. ಅಂದಹಾಗೆ ಉಪೇಂದ್ರ ಜೊತೆ ತಾನ್ಯಾಗೆ ಇದು ಎರಡನೇ ಸಿನಿಮಾವಾಗಿದೆ. ಈ ಮೊದಲು ಹೋಮ್ ಮಿನಿಸ್ಟರ್ ನಲ್ಲಿ ನಟಿಸಿದ್ದರು. ಕಬ್ಜ ಸಿನಿಮಾದ ವಿಶೇಷ ಹಾಡಿಗೆ ಖ್ಯಾತ ನೃತ ನಿರ್ದೇಶಕ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರಂತೆ. ಜಾನಿ ಮಾಸ್ಟರ್ ಜೊತೆ ತಾನ್ಯಾ ಈಗಾಗಲೇ ಕೆಲಸ ಮಾಡಿದ್ದಾರೆ. ಅದ್ದೂರಿ ಸೆಟ್ ನಲ್ಲಿ ಕಬ್ಜ ಹಾಡು ಮೂಡಿಬರುತ್ತಿದೆಯಂತೆ. ಸುಮಾರು ನಾಲ್ಕೈದು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. 

ಗ್ಯಾಪಲ್ಲಿ ಬಂದು ಬಾಕ್ಸಾಫೀಸ್‌ ಹೊಡ್ಕೊಂಡು ಹೋಗೋ ಸಿನಿಮಾಗಳೇ ಗ್ರೇಟ್‌ : ಉಪೇಂದ್ರ

ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ 9 ಭಾಷೆಯಗಳಲ್ಲು ರಿಲೀಸ್ ಆಗುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಬಹು ಭಾಷೆಗಳಲ್ಲಿ ಮೊದಲ ಲಿರಿಕಲ್ ಸಾಂಗ್ ವೀಡಿಯೊವನ್ನು ಬಿಡುಗಡೆ ಮಾಡಲಾಯಿತು. ಕಬ್ಜ ರೆಟ್ರೋ ಶೈಲಿಯ ಸಿನಿಮಾವಾಗಿದೆ. 40 ರಿಂದ 80 ದಶಕದಲ್ಲಿ ನಡೆದ ಕಥೆಯಾಗಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತತವಾಗಿದೆ. ಈ ಸಿನಿಮಾದಲ್ಲಿ ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ಜಗಪತಿ ಬಾಬು, ಡ್ಯಾನಿಶ್ ಅಖ್ತರ್, ಕಬೀರ್ ದುಹಾನ್ ಸಿಂಗ್ ಸೇರಿದಂತೆ ಅನೇಕ ನಟರು ಬಣ್ಣ ಹಚ್ಚಿದ್ದಾರೆ. ವಿಶೇಷ ಎಂದರೆ ಅಭಿನಯ ಚಕ್ರವಕರ್ತಿ ಕಿಚ್ಚ ಸುದೀಪ್ ಕೂಡ ನಟಿಸಿದ್ದಾರೆ. ಭಾರ್ಗವ್ ಬಕ್ಷಿ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ.  ನಾಯಕಿಯಾಗಿ ಶ್ರೀಯಾ ಸರಣ್ ಕಾಣಿಸಿಕೊಂಡಿದ್ದಾರೆ.  

3 ವರ್ಷ ಪರಿಶ್ರಮದ ಬಳಿಕ ಮಾ.17 'ಕಬ್ಜ' ರಿಲೀಸ್; ಪ್ರಮೋಷನ್ ಅಖಾಡದಲ್ಲಿ ಆರ್‌.ಚಂದ್ರು

ಸದ್ಯ ತಾನ್ಯಾ ಎಂಟ್ರಿ ಮತ್ತಷ್ಟು ಕುತೂಹಲ ಮೂಡಿಸಿದೆ. ಕಬ್ಜ ಸಿನಿಮಾದ ಹಾಡು ಹೇಗೆ ಮೂಡಿಬರಲಿದೆ, ತಾನ್ಯಾ ಹೇಗೆ ಹೆಜ್ಜೆ ಹಾಕಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.  ಅಂದಹಾಗೆ ಈ ಬಹುನಿರೀಕ್ಷೆಯ ಸಿನಿಮಾ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ