ನಾನು ನನ್ನ ತಾಯಿ ಜವಾಬ್ದಾರಿ ಅಲ್ಲ, ಮುಚ್ಕೊಂಡು ಕೆಲಸ ಮಾಡಬೇಕು: ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಹೇಳಿಕೆ

By Vaishnavi ChandrashekarFirst Published Feb 8, 2023, 4:11 PM IST
Highlights

ಹಿರಿಯ ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಯೂಟ್ಯೂಬ್ ಚಾನೆಲ್ ಆರಂಭಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಹುಭಾಷಾ ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚಿಗೆ ಐಶ್ವರ್ಯ ತಮ್ಮ ಯುಟ್ಯೂಬ್ ಚಾನೆಲ್ ಓಪನ್ ಮಾಡಿದಾರೆ. ಸ್ಟಾರ್ ನಟಿಯ ಪುತ್ರಿಯಾಗಿ ನಿರ್ಮಾಣ ಸಂಸ್ಥೆ ತೆಗೆಯುವ ಬದಲು ಯೂಟ್ಯೂಬ್ ಚಾನೆಲ್ ಅರಂಭಿಸಿದ್ದಾರೆ ಎಂದು ಕಾಲೆಳೆದಿದ್ದಾರೆ. ತಾಯಿ ಲೆಜೆಂಡ್ ಆಗಿರುವುದರಿಂದ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಐಶ್ವರ್ಯ ಹೇಳಿದ್ದಾರೆ.

'ನನಗೆ ಸಾಮರ್ಥ್ಯ ಏನಿದೆ ಅದರ ಮೇಲೆ ಕೆಲಸ ಮಾಡಬಹುದು ಕೆಪ್ಯಾಸಿಟಿ ಇಲ್ಲದ ವಿಚಾರಗಳ ಮೇಲೆ ಕೆಲಸ ಮಾಡಲು ಆಗುವುದಿಲ್ಲ. ನಾನು ಬಾಲ್ಯದಿಂದಲೂ ಅವರ ಮಗಳು ಇವರ ಮಗಳು ಎಂದು ಬೆಳೆದಿಲ್ಲ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು. ತುಂಬಾ ಅಸಯ್ಯ ಅನಿಸುವ ವಿಚಾರ ಏನೆಂದರೆ ತಾಯಿ ಸಹಾಯ ಪಡೆಯಬಾರದು, ದೊಡ್ಡ ಮನೆ ದೊಡ್ಡ ನಟಿ ಅವರನ್ನು ನೋಡಿ ಕಲಿಯಬೇಕು.ಅವರ ಮನೆಯಲ್ಲಿ ಕುಳಿತುಕೊಂಡು ಅವರ ಪ್ರಾಣ ತೆಗೆಯಬಾರದು. ಮಕ್ಕಳಿಗೆ ಅರ್ಥವಾಗುವುದಿಲ್ಲ ನೀನು ಸ್ಟಾರ್ ನಟಿಯ ಮಗಳು, ನಿನ್ನ ಬಳಿ ಇಷ್ಟಿದೆ ಅಷ್ಟಿದೆ ಎಂದು.' ಎಂದು ನಟ ಕಮ್ ನಿರ್ದೇಶಕ ರಘುರಾಮ್ ಯೂಟ್ಯೂಬ್ ಸಂದರ್ಶನದಲ್ಲಿ ಐಶ್ವರ್ಯ ಮಾತನಾಡಿದ್ದಾರೆ. 

'ನಮ್ಮ ಕೆಲಸ ನಾವು ಮಾಡಬೇಕು ತಾಯಿ ಅವರು ಲೆಜೆಂಡ್ ಅವರು ರಿಯಲ್ ಸ್ಟಾರ್. ನಾನು ಲೆಜೆಂಡ್ ಅಲ್ಲ ಯಾವ ಸ್ಟಾರ್‌ ಅಲ್ಲ. ನನ್ನ ಜೀವನ ಪೂರ್ತಿ ಕೆಲಸ ಮಾಡುವೆ ತಂದೆ ತಾಯಿ ಗಂಡ ಮಕ್ಕಳು ಯಾರ ಮೇಲೂ ಡಿಪೆಂಡ್ ಆಗುವುದಿಲ್ಲ. ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆಗೆ ಹಣ ಮುಂದಿಟ್ಟು ಹೋಗುತ್ತೀನಿ. ಒಂದು ವಿಚಾರವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ಸ್ಟಾರ್ ನಟ-ನಟಿಯರ ಮಕ್ಕಳು, ರಾಜಕಾರಣಿಗಳ ಮಕ್ಕಳು ಯಾರೇ ಆಗಿದ್ದರು ಸಾವು ಅನ್ನೋದು ಎಲ್ಲರಿಗೂ ಬರುತ್ತದೆ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ನಾವು 100 ವರ್ಷ ಇರುವುದಿಲ್ಲ ಭೂಮಿಯಲ್ಲಿ ಅಂದಮೇಲೆ ಜನರ ಮಾತುಗಳ ಮೇಲೆ ಗಮನ ಕೊಡುವುದು ಸ್ಟುಪಿಡ್ ಕೆಲಸ. ಆಗಲೇ ನನ್ನ ಜೀವನದ 50 ವರ್ಷ ಕಳೆದಿರುವೆ ಇನ್ನು ಎಷ್ಟು ವರ್ಷ ಉಳಿದಿದೆ ನನ್ನ ಗಮನ ನನ್ನ ಕೆಲಸ ಮತ್ತು ಭೂಮಿ ತಾಯಿ ಮೇಲೆ ಇರುತ್ತದೆ' ಎಂದು ಐಶ್ವರ್ಯ ಹೇಳಿದ್ದಾರೆ.

ತಿನ್ಸ್‌ಬೇಕು, ಕುಡ್ಸ್ಬೇಕು ಒಂದಷ್ಟು ಮಜಾ ಮಾಡ್ಸ್ಬೇಕು, ಚಿತ್ರರಂಗದಲ್ಲಿ ಬಕೆಟ್ ಹಿಡಿಬೇಕು: ಮಯೂರ್ ಪಟೇಲ್

 

'ಯೋಗ ಮಾಡಲು ಶುರು ಮಾಡಿದರೆ ಒಂದು ವಿಚಾರ ತಿಳಿದುಕೊಳ್ಳಬಹುದು ಈಗ ಸಮಯ ಏನಿದು ಅದು ಜೀವನ ಕಲಿಯುಗ ಜೀವನ ಭವಿಷ್ಯ ಅವೆಲ್ಲಾ ಏನೂ ಇಲ್ಲ. ಭೂಮಿ ಮೇಲೆ ಗಮನ ಹರಿಸುವುದು ಬಿಟ್ಟರೆ ಕಲಿಯುಗದಲ್ಲಿ ಮನುಷ್ಯ ಮನುಷ್ಯರನ್ನು ತಿನ್ನುತ್ತಾರೆ. ಜೀವನದಲ್ಲಿ ಮುಕ್ತಿ ಬೇಕು ಅಂದ್ರೆ 12 ಜ್ಯೋತಿರ್ಲಿಂಗ ನೋಡಬೇಕು? ಈ ಐಡಿಯಾ ನನಗೆ ಬಹಳ ವರ್ಷಗಳ ಹಿಂದೆ ಬಂತು ಒಂದಾದ ಮೇಲೊಂದು ನೋಡಿರುವೆ. ಭೂಮಿ ಮೇಲೆ ನಾನು ಹೆಚ್ಚಿಗೆ ಗಮನ ಕೊಡುವ ಕಾರಣ ಕಲಿಯುಗ ಬೇಡ ಮುಕ್ತಿ ಬೇಕು ಎಂದು ಏನೆಲ್ಲಾ ಮಾಡಬೇಕು ಅದನ್ನು ಮಾಡುವೆ. ಸಾಯುವ ಮುನ್ನ ಕರ್ಮಗಳನ್ನು ಮುಗಿಸಿಕೊಳ್ಳಬೇಕು ಮತ್ತೆ ಸೈಕಲ್ ರೀತಿ ಬರಬಾರದು. ಇದೆಲ್ಲಾ ಅರ್ಥ ಮಾಡಿಕೊಂಡ ಮೇಲೆ ಜೀವನದಲ್ಲಿ ಬದುಕಲು ಏನು ಮಾಡಬೇಕು ಹೇಗೆ ಮಾಡಬೇಕು ಅನ್ನೋದು ನಮ್ಮ ಕೆಪ್ಯಾಸಿಟಿ' ಎಂದಿದ್ದಾರೆ ಐಶ್ವರ್ಯ.

ಮನೆಯಲ್ಲಿ ಅಪ್ಪ ಸರಿಯಾಗಿದ್ದರೆ ಸಿನಿಮಾ ಮಾಡ್ತಿರಲಿಲ್ಲ; ಹೆಣ್ಣು ಮಕ್ಕಳಿಗೆ ಮೊದಲು ಗೌರವ ಕೊಡಿ ಎಂದ ನಟಿ ಮಾಧುರಿ

'ನನಗೆ ಗೊತ್ತಿರುವುದು ನಾನು ಮಾಡುತ್ತಿರುವೆ. ಕೆಲಸ ಮಾಡುವುದರಿಂದ ನನ್ನ ಸಾಕು ಪ್ರಾಣಿಗಳು ಮತ್ತು ನನ್ನನ್ನು ನೋಡಿಕೊಳ್ಳಲು ಸಹಾಯವಾಗುತ್ತದೆ. 18 ವರ್ಷದವರೆಗೂ ನಾನು ನನ್ನ ತಾಯಿ ಜವಾಬ್ದಾರಿ, ಒಳ್ಳೆ ವಿದ್ಯಾಭ್ಯಾಸ ಕೊಟ್ಟಿದ್ದಾರೆ ಅಂದ್ಮೇಲೆ ಮುಚ್ಕೊಂಡು ನಾವು ನಮ್ಮ ಕೆಲಸ ಮಾಡಬೇಕು. ದೊಡ್ಡವರಾದ ಮೇಲೆ ಮಕ್ಕಳು ತಂದೆ ತಾಯಿ ಬಳಿ ಸಹಾಯ ಪಡೆಯುವುದು ಹಣ ಕೇಳುವುದು ತುಂಬಾನೇ ತಪ್ಪು. ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳಬೇಕು ಆದರೆ ಕಲವರು ಇದ್ದಾರೆ ಏನೂ ಕೆಲಸ ಮಾಡುವುದಿಲ್ಲ ಫ್ಯಾಮಿಲಿಗೆ ಭಾರವಾಗಿರುತ್ತಾರೆ ಅವರನ್ನು ನೋಡಿದ್ದೆ ನಿಜ ಕೋಪ ಬರುತ್ತದೆ' ಎಂದು ಹೇಳಿದ್ದಾರೆ.  

click me!