
Tamil Actor Suriya And TJ Gnanavel Movie: ತಮಿಳು ನಟ ಸೂರ್ಯ ಜೊತೆಗೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಸಿನಿಮಾ ಮಾಡುತ್ತಿದೆ. ಈ ಬಗ್ಗೆ ವಿಜಯ್ ಕಿರಗಂದೂರು ಅವರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಪ್ರೊಡಕ್ಷನ್ ಹೌಸ್ ಮಾಹಿತಿ ಹಂಚಿಕೊಂಡಿದೆ.
ಈಗಾಗಲೇ ಕೆಜಿಎಫ್, ಕಾಂತಾರ ಸಿನಿಮಾದಂತಹ ಸೂಪಟ್ ಹಿಟ್ ಸಕ್ಸಸ್ ಕೊಟ್ಟಿರುವ ಹೊಂಬಾಳೆ ಫಿಲ್ಮ್ಸ್ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕನ್ನಡದ ಹೊರತಾಗಿ ಬೇರೆ ಭಾಷೆಯ ಸ್ಟಾರ್ ನಟರ ಜೊತೆ ಕೂಡ ಈ ಸಂಸ್ಥೆ ಕೆಲಸ ಮಾಡುತ್ತಿದೆ.
ಫ್ರೇಮ್ ಬೈ ಫ್ರೇಮ್. ಸಿನಿಮಾ ಬೈ ಸಿನಿಮಾ. ಫೈಟ್ ಬೈ ಫೈಟ್. ಸತ್ಯವನ್ನು ಬಿಂಬಿಸಿದ ಪಾತ್ರಗಳು. ನೈಜ ಬದುಕಿನ ಭಾರವನ್ನು ಹೊತ್ತ ಪಾತ್ರಗಳು. ಪ್ರತಿಯೊಂದು ಬಾರಿಯೂ, ಆರಾಮದಾಯಕ ಹಾದಿಗಿಂತ ಧೈರ್ಯದ ಹಾದಿಯನ್ನೇ ಆಯ್ಕೆ ಮಾಡಿಕೊಂಡ ವೃತ್ತಿಜೀವನ. ಬೆಳ್ಳಿತೆರೆಯ ಮೇಲೆ ಮೂರು ದಶಕಗಳ ಸತ್ಯದ ಪಯಣ.
ಅದರಾಚೆಗೆ ಕೋಟ್ಯಂತರ ಹೃದಯಗಳನ್ನು ಗೆದ್ದ ಹಿರಿಮೆ. ಈ ತಲೆಮಾರಿನ ಅತ್ಯಂತ ನಿರ್ಭೀತ ನಟ, ತನ್ನ ಅತ್ಯಂತ ಭವ್ಯವಾದ ವೇದಿಕೆಯನ್ನು ಪ್ರವೇಶಿಸುವ ಕ್ಷಣವಿದು.
ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ ಸ್ವಾಗತಿಸುತ್ತದೆ.
ಈ ಸಿನಿಮಾದಲ್ಲಿ ಜೈಭೀಮ್ ಸಿನಿಮಾ ನಿರ್ದೇಶಕ TJ gnanavel ನಿರ್ದೇಶನ ಮಾಡಲಿದ್ದಾರೆ. ಒಟ್ಟಿನಲ್ಲಿ ‘ಜೈ ಭೀಮ್ʼ ಕಾಂಬಿನೇಶನ್ ಮತ್ತೆ ಒಂದಾಗಲಿದೆ. ಎಸ್ ಆರ್ ಕದೀರ್ ಅವರು ಸಿನಿಮಾಟೋಗ್ರಫಿ ಮಾಡಲಿದ್ದು, ಕಯಾದು ಲೋಹರ್ ಅವರು ನಾಯಕಿ. ಸಾಯಿ ಅಭಯಂಕರ್ ಸಂಗೀತ ಸಂಯೋಜಿಸಲಿದ್ದಾರೆ. ಫಿಲೋಮಿನ್ ರಾಜ್ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ.
ನಟ ಸೂರ್ಯ ಅವರು ಸ್ಟಾರ್ ಇಮೇಜ್ ಬದಿಗಿಟ್ಟು, ಬೇರೆ ಬೇರೆ ಕಂಟೆಂಟ್‌ಗಳು, ಪಾತ್ರಗಳಲ್ಲಿ ಇಳಿದು ತಮ್ಮ ನಟನೆ ಸಾಮರ್ಥ್ಯವನ್ನು ಹೊರಹಾಕುತ್ತಿದ್ದಾರೆ.
ತಿಂಗಳುಗಳ ಹಿಂದೆ ರಿಲೀಸ್ ಆದ ನಟ ಸೂರ್ಯ ಅವರ ‘ಕರುಪ್ಪು’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ದೇವರು, ವಕೀಲ ಪಾತ್ರದಲ್ಲಿ ನಟಿಸಿದ್ದರು, ಇದರಲ್ಲಿ ಎರಡು ಶೇಡ್ ಇತ್ತು. ಈ ಸಿನಿಮಾದಲ್ಲಿ ಸೂರ್ಯ ಅವರು ಸಖತ್ ಆಗಿ ನಟಿಸಿದ್ದರು, ಡ್ಯಾನ್ಸ್ ಕೂಡ ಮಾಡಿದ್ದರು.
ಅಂದಹಾಗೆ ‘ವಿಶ್ವನಾಥ & ಸನ್ಸ್’ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಮಮಿತಾ ಬೈಜು ನಾಯಕಿಯಾಗಿದ್ದು, ರಾಧಿಕಾ ಶರತ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.
ಇದಾದ ನಂತರ 'ಆವೇಶಂ' ಖ್ಯಾತಿಯ ಜಿತು ಮಾಧವನ್ ನಿರ್ದೇಶನದ ಚಿತ್ರದಲ್ಲಿ ನಜ್ರಿಯಾ ಮತ್ತು ನಸ್ಲೆನ್ ಜೊತೆ ನಟಿಸಲಿದ್ದಾರೆ. ಈ ಚಿತ್ರಕ್ಕೆ ಸುಶಿನ್ ಶ್ಯಾಮ್ ಸಂಗೀತ ನೀಡಲಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಕಾಂತಾರ: ಚಾಪ್ಟರ್ 1', ಪ್ರಶಾಂತ್ ನೀಲ್ ಮತ್ತು ರಕ್ಷಿತ್ ಶೆಟ್ಟಿ ನಿರ್ದೇಶನದ ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ಈ ಪಟ್ಟಿಗೆ ಈಗ ಸೂರ್ಯ ಅವರ ಚಿತ್ರವೂ ಸೇರಿದೆ. ಈ ಹಿಂದೆ ಸೂರ್ಯ-ಜ್ಞಾನವೇಲ್ ಕಾಂಬಿನೇಷನ್‌ನಲ್ಲಿ ಬಂದ 'ಜೈ ಭೀಮ್' ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಗಳಿಸಿತ್ತು. ಹೀಗಾಗಿ ಈ ಹೊಸ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.