ಮೇಘನಾ ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ನಮಗೆ ಬೇಸರವಾಗಿತ್ತು, ಆದ್ರೆ... ಅಪ್ಪ ಸುಂದರರಾಜ್​ ಮನದಾಳದ ಮಾತು

Published : Jul 01, 2024, 01:37 PM IST
ಮೇಘನಾ ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ನಮಗೆ ಬೇಸರವಾಗಿತ್ತು, ಆದ್ರೆ... ಅಪ್ಪ ಸುಂದರರಾಜ್​ ಮನದಾಳದ ಮಾತು

ಸಾರಾಂಶ

ಮೇಘನಾ ರಾಜ್​ ಸಿನಿಮಾಕ್ಕೆ ಹೊಸದಾಗಿ ಸೇರಿದಾಗ ತಮಗೆ ಇಷ್ಟವಾಗಿರಲಿಲ್ಲ ಎನ್ನುತ್ತಲೇ ಅದರ ಬಗ್ಗೆ ಮಾತನಾಡಿದ್ದಾರೆ ತಂದೆ ಸುಂದರ ರಾಜ್​  

ಮೇಘನಾ ಸುಂದರ್ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ಎಲ್ಲರಿಗೂ ತಿಳಿದಿರುವಂತೆ ಇವರ ಕುಟುಂಬವೇ ಸಿನಿಮಾ ಲೋಕಕ್ಕೆ ಸೇರಿದ್ದು.  ನಟ ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರ ಒಬ್ಬಳೇ ಮಗಳಾಗಿರುವ ಮೇಘನಾ ಅವರ ಬಾಳಲ್ಲಿ  2020 ಜೂನ್ 7 ರಂದು ಬರಸಿಡಿಲು ಬಡಿದಿತ್ತು. ಮದುವೆಯಾದ ಎರಡೇ ವರ್ಷಕ್ಕೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿ ಇಡೀ ಸಿನಿ ಲೋಕವನ್ನೇ ನೋವಿನಲ್ಲಿ ಮುಳುಗಿಸಿದವರು. ಪತಿ ಸಾವನ್ನಪ್ಪಿದ್ದಾಗ ಮೇಘನಾ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ಮಗನ ಲಾಲನೆ ಪಾಲನೆಯಲ್ಲಿ ತೊಡಗಿರುವ ನಟಿ, ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ಮಗಳ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಅಪ್ಪ ಸುಂದರರಾಜ್​. ಮಿರ್ಚಿ ಕನ್ನಡಾ ಯೂಟ್ಯೂಬ್​ ಚಾನೆಲ್​ಗೆ ಕೊಟ್ಟ ಸಂದರ್ಶನದಲ್ಲಿ ಸುಂದರ್​ ರಾಜ್​ ಅವರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಮೊದಲಿಗೆ ಅವರು ಮೇಘನಾ ಚಿತ್ರರಂಗಕ್ಕೆ ಕಾಲಿಟ್ಟಾಗ ತಮಗೆ ತುಂಬಾ ಬೇಸರವಾಗಿತ್ತು. ಇದು ನಮಗೆ ಇಷ್ಟವಾಗಿರಲಿಲ್ಲ ಎಂದು ಹೇಳಿದ್ದಾರೆ. ಅಷ್ಟಕ್ಕೂ ಮೇಘನಾ ಅವರು, ಬಾಲ್ಯದಲ್ಲಿ ತಂದೆಯೊಡನೆ ನಾಟಕದಲ್ಲಿ ಅಭಿನಯಿಸಿದ್ದ ಮೇಘನಾ 2009 ರಲ್ಲಿ ತೆರಕಂಡ `ಬೆಂಡು ಅಪ್ಪಾರಾವ್ RMP' ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಕೆ.ಬಾಲಚಂದರ್ ನಿರ್ಮಾಣದ `ಕೃಷ್ಣಲೀಲೈ' ಚಿತ್ರದಲ್ಲಿ ನಟಿಸಿದ್ದರೂ ಅದು ತೆರೆ ಕಾಣಲಿಲ್ಲ. 2010ರಲ್ಲಿ ತೆರೆಕಂಡ ಯೋಗೇಶ್ ಚಿತ್ರ `ಪುಂಡ' ಮೂಲಕ ಚಂದನವನದಲ್ಲಿ ಕೂಡ ನಾಯಕಿಯಾಗಿ ಇನ್ನಿಂಗ್ಸ್ ಆರಂಭಿಸಿದರು.ಮೇಘನಾಗೆ ಸಿನಿ ಕರಿಯರ್‌ಗೆ ಬ್ರೇಕ್ ನೀಡಿದ್ದು ಮಲಯಾಳಂ ಚಿತ್ರರಂಗ. ಹಲವು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ 2013 ರಲ್ಲಿ ತೆರೆಕಂಡ `ರಾಜಾಹುಲಿ' ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದರು. ನಂತರ `ಬಹುಪರಾಕ್',`ಆಟಗಾರ' ಇತ್ತೀಚಿಗೆ ತತ್ಸಮ ತದ್ಭವ ಸೇರಿದಂತೆ ಮುಂತಾದ ಹಿಟ್ ಚಿತ್ರ ನೀಡಿದ್ದಾರೆ. 

ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?

ಮಗಳು ಸಿನಿಮಾಕ್ಕೆ ಬಂದಾಗ ನನಗೆ ಸಂತೋಷವಾಗಿರಲಿಲ್ಲ ಎನ್ನುತ್ತಲೇ ಅದಕ್ಕೆ ಕಾರಣವನ್ನು ಹೇಳಿದ್ದಾರೆ ಸುಂದರರಾಜ್​ ಅವರು, ಹುಡುಗರಿಗೆ ಚಿತ್ರರಂಗ ಬೇರೆಯದ್ದೇ ಮಾತು, ಹುಡುಗಿಯರ ವಿಷಯದಲ್ಲಿ ಅದು ಬೇರೆಯದ್ದೇ ಮಾತು. ತುಂಬಾ ವರ್ಷಗಳಿಂದ ನಾನು ಚಿತ್ರರಂಗವನ್ನು ನೋಡಿಕೊಂಡು ಬಂದಿದ್ದೇನೆ. ಎಷ್ಟು ಮಂದಿಗೆ ಯಶಸ್ಸು ಸಿಕ್ಕಿದೆ, ಎಷ್ಟು ಮಂದಿಗೆ ಸಿಕ್ಕಿಲ್ಲ ಎನ್ನುವುದನ್ನು ನೋಡಿದ್ದೇನೆ. ಅದಕ್ಕಾಗಿ ಮಗಳು ಹೋಗುವುದು ಇಷ್ಟವಿರಲಿಲ್ಲ.  ಏಕೆಂದರೆ ಅವಳು ಯಾವತ್ತೂ ಡ್ರಾಮಾ ಸ್ಕೂಲ್​ಗೆ ಹೋಗಿದವಳಲ್ಲ. ಅವಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡುವುದಷ್ಟೇ ನಮ್ಮ ಗುರಿಯಾಗಿತ್ತು. ಆದರೆ ಕಾಲೇಜಿನಲ್ಲಿ ಫ್ರೆಂಡ್ಸ್​ ಫೋರ್ಸ್​ ಮಾಡಿ ನಟಿಯಾದಳು ಎಂದು ಹೇಳಿದರು. 

ಆದರೆ ಅವಳ ನಟನೆ ನೋಡಿ ನಂತರ ನಮಗೆಲ್ಲಾ ತುಂಬಾ ಖುಷಿಯಾಯಿತು. ಅವಳು ಇಷ್ಟು ಸಕ್ಸಸ್​ ಕಾಣುತ್ತಾಳೆ ಎಂದು ಕಂಡಿರಲಿಲ್ಲ ಎಂದ ಸುಂದರ್​ರಾಜ್​ ಅವರು,  ಅವಳ ಈಚಿನ ತತ್ಸಮ ತತ್ಭವ ನೋಡಿದಾಗ, ನನಗೇ ರೋಮಾಂಚನವಾಯಿತು, ತುಂಬಾ ಚೆನ್ನಾಗಿ ಆ್ಯಕ್ಟ್​ ಮಾಡ್ತಾಳೆ. ಅವಳಿಗೆ ಇನ್ನೂ ಉಜ್ವಲ ಭವಿಷ್ಯವಿದೆ. ಅವಳು ಒಳ್ಳೆಯ ನಟಿ ಮಾತ್ರವಲ್ಲದೇ, ಒಳ್ಳೆಯ ಸಿಂಗರ್​, ಡ್ಯಾನ್ಸರ್​ ಕೂಡ ಹೌದು. ಎಲ್ಲ ಕಲೆಗಳ ಸಮ್ಮಿಳನ ಅವಳು. ಅವಳ ಕರಿಯರ್​ ಇನ್ನೂ ಬೆಳೆಯುವ ಆಸೆ ಇದೆ.  ಅವಳು ತುಂಬಾ ಗಟ್ಟಿ ಹುಡುಗಿ, ನಾವು ಯಾರೂ ಅವಳಿಗೆ ಏನೂ ಹೇಳುವ ಅಗತ್ಯವಿಲ್ಲ ಎಂದು ಮಗಳು ಮೇಘನಾ ಅವರನ್ನು ಬಣ್ಣಿಸಿದ್ದಾರೆ. 

ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು! ಮಗಳ ಗುಟ್ಟಾದ ಮದ್ವೆ, ಟೀಕೆಗಳಿಂದ ನೊಂದುಬಿಟ್ರಾ ನಟ? ಆಗಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!