Latest Videos

ಐಷಾರಾಮಿ ಮನೆಯ ಪಾರ್ಕಿಂಗ್‌ನ ಹಸು ಕೊಟ್ಟಿಗೆ ಮಾಡಿದ ನಟಿ ಭಾವನಾ ರಾಮಣ್ಣ; ಹುಲ್ಲು ಹೋಮ್‌ ಡೆಲಿವರಿ ಅಗುತ್ತಾ?

By Vaishnavi ChandrashekarFirst Published Jul 1, 2024, 1:30 PM IST
Highlights

ಬೆಂಗಳೂರಿನ ಐಷಾರಾಮಿ ಮನೆಯಲ್ಲಿ ಹಸು ಸಾಕುತ್ತಿರುವ ನಟಿ ಭಾವನಾ. ಜಿಪಿಎಸ್‌ ಟ್ರಾಕಿಂಗ್‌ ಹಾಕಿಸಿದರೆ ನೆಮ್ಮದಿ ಎಂದ ನಟಿ.... 

ಕನ್ನಡ ಚಿತ್ರರಂಗದ ಅದ್ಭುತ ನಟಿ ಭಾವನಾ ರಾಮಣ್ಣ ತಮ್ಮ ಬೆಂಗಳೂರಿನ ಐಷಾರಾಮಿ ಮನೆಯ ಪಾರ್ಕಿಂಗ್‌ನಲ್ಲಿ ಹಸು ಕೊಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಹಸು ಗೌರಿ ಮತ್ತು ಕರು ಕೃಷ್ಣ ಬಂದ ಮೇಲೆ ಜೀವನ ಎಷ್ಟು ಬದಲಾಗಿದೆ ಎಂದು ಭಾವನಾ ಹಂಚಿಕೊಂಡಿದ್ದಾರೆ.

'ಗೌರಿ ಮತ್ತು ಕೃಷ್ಣ ಬಂದ ಮೇಲೆ ನನ್ನ ಜೀವನ ತುಂಬಾ ಬದಲಾಗಿದೆ. ಬೆಂಗಳೂರಿನಲ್ಲಿ ಹಸು ಸಾಕುವುದು ತುಂಬಾನೇ ಕಷ್ಟ ಅನಿಸಬಹುದು ಆದರೆ ಮೈಂಡ್ ಸೆಟ್ ಮಾಡಿಕೊಂಡರೆ ಎಲ್ಲವೂ ಸುಲಭ. ನಾನು ಮಳೆನಾಡಿನಲ್ಲಿ ಬೆಳೆದಿರುವ ಕಾರಣ ನನ್ನ ಅಜ್ಜಿ ಮತ್ತು ಹಸುಗಳ ನಡುವೆ ಇರುವ ಬಾಂಧವ್ಯ ನೋಡಿರುವೆ. ನನ್ನ ಅಕ್ಕಪಕ್ಕದವರು ಹಸುವನ್ನು ನನಗೆ ಕೊಡಲು ನಿರ್ಧರಿಸಿದರು ಒಂದು ನಿಮಿಷವೂ ಯೋಜನೆ ಮಾಡದೆ ಬರ ಮಾಡಿಕೊಂಡೆ. ಗೌರಿ ಮನೆಗೆ ಬಂದ ಮೇಲೆ ತಿಳಿಯಿತ್ತು ಆಕೆ ಗರ್ಭಿಣಿ ಎಂದು. ಅಲ್ಲಿಗೆ ಕರು ಕೃಷ್ಣನೂ ಮನೆಗೆ ಬಂದ. ದಿನ ಬೆಳಗ್ಗೆ ಮನೆಯಲ್ಲಿ ಹಸು ಕೂಗು ಹೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ' ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಭಾವನಾ ಮಾತನಾಡಿದ್ದಾರೆ.

ಈ ವರ್ಷ ಬರ್ತಡೇ ಪಾರ್ಟಿಗೆ ಬ್ರೇಕ್ ಹಾಕಿದ ಗಣೇಶ್; ಕಾರಣ ಓದಿ ನೆಟ್ಟಿಗರು ಶಾಕ್!

'ಗೌರಿಯನ್ನು ಮನೆ ಕರೆದುಕೊಂಡು ಬರುವಾಗ ಮೊದಲು ಬಂದ ಆಲೋಚನೆಯೇ ಆಕೆಗೆ ಕಂಫರ್ಟ್‌ ಆಗಿರುವ ಜಾಗ ಕೊಡುವುದು. ಹೀಗಾಗಿ ನಮ್ಮ ಮನೆಯ ಗ್ಯಾರೇಜ್‌ನ ಕೊಟ್ಟಿಗೆಯಾಗಿ ಕನ್‌ವರ್ಟ್‌ ಮಾಡಿದೆ. ಅಲ್ಲಿ ಫೀಡಿಂಗ್ ಬಂಕರ್, ನೀರು ಬರುವ ಜಾಗ ಹಾಗೂ ಅಕೆ ನೆಮ್ಮದಿಯಾಗಿ ಮಲಗಲು ವ್ಯವಸ್ಥೆ ಮಾಡಲಾಗಿತ್ತು. ನಾವು ಕಾರು ತೆಗೆದು ನಿಲ್ಲಿಸಿದರೂ ಆಕೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ನನ್ನ ದಿನ ಬೆಳಗ್ಗೆ 6 ಗಂಟೆಗೆ ಶುರುವಾಗುತ್ತದೆ, ಎದ್ದ ತಕ್ಷಣವೇ ಗೌರಿ ಮತ್ತು ಕೃಷ್ಣನನ್ನು ಮಾತನಾಡಿಸಲು ಹೋಗುತ್ತೀನಿ ಆನಂತರ ಎಲ್‌ಲಾ ತರಕಾರಿಗಳನ್ನು ರುಬ್ಬಿ ಕಲಗಚ್ಚು ಮಾಡಿ ನಾನೇ ಅವರಿಗೆ ಕೊಡುವೆ. ಅಕ್ಕ ಪಕ್ಕದ ಮನೆಯವರಿಗೆ ಹಾಲು ಕೊಡುತ್ತೀನಿ ಆದರೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸುವುದಿಲ್ಲ. ಹುಳಗಳನ್ನು ದೂರವಿಡಲು ಶುದ್ಧ ಬೇವಿನ ಎಣ್ಣೆಯನ್ನು ಬಳಸುತ್ತೀನಿ' ಎಂದು ಭಾವನಾ ಹೇಳಿದ್ದಾರೆ.

ನನ್ನ ಗಂಡ ಸಲಿಂಗಕಾಮಿ, ನೀನೊಬ್ಬಳು ಸತ್ತ ಕಾಗೆ ಇದ್ದಂತೆ ಕೆಟ್ಟದಾಗಿ ಸಾಯುತ್ತೀಯಾ: ಗಾಯಕಿ ಸುಚಿತ್ರಾ

'ಹಸು ಬರ ಮಾಡಿಕೊಳ್ಳುವ ಮುನ್ನ ಒಳ್ಳೆಯ ಪಶುವೈದ್ಯರನ್ನು ಸಂಪರ್ಕ ಮಾಡಬೇಕು. ಹಸುಗಳಿಗೆ ಮೇಯಲು ಜಾಗ ಬೇಕು ಒಂದು ವೇಳೆ ಆ ರೀತಿ ಜಾಗ ಇಲ್ಲ ಅಂದ್ರೆ ಮನೆಗೆ ಹುಲ್ಲನ್ನು ಹೋಮ್ ಡೆಲಿವರಿ ಮಾಡುತ್ತಾರೆ, ನಾನು ಡೆಲಿವರಿ ಮಾಡಿಸಿಕೊಳ್ಳುತ್ತೀನಿ.  ನೆಲದ ಮೇಲೆ ಸಾಫ್ಟ್‌ ಬೆಡ್ಡಿಂಗ್ ರಬ್ಬರ್ ಮ್ಯಾಟ್ ಹಾಕಿದರೆ ಅವರ ಕಾಲುಗಳಿಗೆ ಪೆಟ್ಟು ಆಗುವುದಿಲ್ಲ. ಸುರಕ್ಷಿತ ಟಿಪ್‌ ಅಂದ್ರೆ ಹಸುಗಳಿಗೆ ಜಿಪಿಎಸ್‌ ಅಳವಡಿಸುವುದು..ಇದರಿಂದ ನಾವು ನೆಮ್ಮದಿಯಾಗಿ ಇರಬಹುದು' ಎಂದಿದ್ದಾರೆ ಭಾವನಾ. 

click me!