‘ಸೂರರೈ ಪೊಟ್ರು’ಕನ್ನಡ ದನಿಯಾದ ಸುಮಂತ್‌;'ಕೆಲಸ ಹೋದ ನೋವಿನಲ್ಲೇ ಡಬ್ಬಿಂಗ್‌ ಮಾಡಿದ್ದೆ'!

By Kannadaprabha NewsFirst Published Nov 16, 2020, 11:06 AM IST
Highlights

ಕ್ಯಾಪ್ಟನ್‌ ಗೋಪಿನಾಥ್‌ ಬದುಕನ್ನಾಧರಿಸಿದ ತಮಿಳು ಸಿನಿಮಾ ‘ಸೂರರೈ ಪೊಟ್ರು’ ಕನ್ನಡಕ್ಕೂ ಡಬ್ಬಿಂಗ್‌ ಆಗಿದೆ. ಇದರಲ್ಲಿ ಹೀರೋ ಸೂರ್ಯ ಪಾತ್ರಕ್ಕೆ ಡಬ್ಬಿಂಗ್‌ ಮಾಡಿದವರು ಸುಮಂತ್‌ ಭಟ್‌. 

ಇವರ ಧ್ವನಿ ಕೇಳಿ, ನಟ ಸೂರ್ಯನೇ ಕನ್ನಡದಲ್ಲೂ ಮಾತನಾಡಿದ್ದಾರಾ ಅಂತ ಜನ ಮಾತನಾಡಿಕೊಳ್ತಿದ್ದಾರೆ. ‘ದಬಾಂಗ್‌ 2’ಕನ್ನಡಕ್ಕೆ ಡಬ್ಬಿಂಗ್‌ ಆದಾಗ ಸಲ್ಮಾನ್‌ ಖಾನ್‌ ಅವರಿಗೆ ಧ್ವನಿ ನೀಡಿದವರು ಇವರೇ. ಅವರ ಮಾತುಗಳು ಇಲ್ಲಿವೆ.

ನನ್ನ ಕತೆ ಹುಡುಗರಿಗೆ ಸ್ಫೂರ್ತಿಯಾದರೆ ಅಷ್ಟೇ ಸಾಕು;ಕ್ಯಾಪ್ಟನ್‌ ಗೋಪಿನಾಥ್‌ ಸಂದರ್ಶನ 

ಸ್ನೇಹಿತೆಯೊಬ್ಬರು ಸೂರ್ಯ ಅವರ ಪಾತ್ರಕ್ಕೆ ಡಬ್ಬಿಂಗ್‌ ಮಾಡ್ಬೇಕು ಸಹಜವಾಗಿಯೇ ಖುಷಿಯಾಯ್ತು. ಆತ ವಂಡರ್‌ಫುಲ್‌ ಪರ್ಫಾಮರ್‌. ಅವರಿಗೆ ಧ್ವನಿಯಾಗ್ತಾ ಅವರ ಜೊತೆಗೆ ಆ್ಯಕ್ಟ್ ಮಾಡಿದಷ್ಟೇ ಸಂತೋಷ ಆಯ್ತು. ಅವರ ಅಭಿನಯದಲ್ಲಿ ಆವರಿಸಿಕೊಳ್ಳುವ ಗುಣ ಇದೆ. ಇಂಥವರಿಗೆ ಧ್ವನಿ ನೀಡೋದು ನಿಜಕ್ಕೂ ಚಾಲೆಂಜ್‌. ಇಂಥಾ ಚಾಲೆಂಜ್‌ಗಳೇ ಅಲ್ವಾ, ನಮ್ಮನ್ನು ನೆಕ್ಸ್ಟ್‌ಲೆವೆಲ್‌ಗೆ ಕರೆದೊಯ್ಯೋದು.

ಒಂದೂವರೆ ದಿನದಲ್ಲೇ ಮುಗೀತು ಡಬ್ಬಿಂಗ್‌

ಚೆನ್ನೈನಲ್ಲಿ ಡಬ್ಬಿಂಗ್‌ ಇತ್ತು. ಕೋವಿಡ್‌ ಕಾಲ, ಡ್ರೈವ್‌ ಮಾಡ್ಕೊಂಡು ಹೋಗಿದ್ದೆ. ಈ ಹಿಂದೆ ಸಲ್ಮಾನ್‌ ಖಾನ್‌ ಅವರ ದಬಾಂಗ್‌ಗೆ ದನಿ ನೀಡಿದ ಅನುಭವವಿತ್ತು. ಒಂದೂವರೆ ದಿನದಲ್ಲೇ ಶೂಟಿಂಗ್‌ ಮುಗಿಸಿದೆ. ಎಲ್ಲರೂ ಖುಷಿ ಪಟ್ರು. ಏಕೆಂದರೆ ಸೂರ್ಯ ಅವರ ಪರ್ಫಾಮೆನ್ಸ್‌ಗೆ ನನ್ನ ಧ್ವನಿ ಪರ್ಫೆಕ್ಟ್ ಆಗಿ ಮ್ಯಾಚ್‌ ಆಗುತ್ತಿತ್ತು. ಸೂರ್ಯ ಅವರ ಮಾತು ತಮಿಳಿನವರಿಗೇ ಬಹಳ ಫಾಸ್ಟ್‌ ಅನಿಸೋದು. ನಮ್ಮ ಕನ್ನಡ ಭಾಷೆ ತುಸು ನಿಧಾನ ಗತಿಯದ್ದು. ಅದೇ ಸ್ಪೀಡ್‌ ಜೊತೆಗೆ ಸ್ಪಷ್ಟತೆ ತಂದುಕೊಂಡು ಕಂಠದಾನ ಮಾಡಿದ್ದು ನಿಜಕ್ಕೂ ಚಾಲೆಂಜಿಂಗ್‌. ಎಲ್ಲಾ ಟೀಮ್‌ನವರ ಸಹಕಾರವೂ ಬಹಳ ಚೆನ್ನಾಗಿತ್ತು. ಸ್ಕಿ್ರಪ್ಟ್‌ಅನ್ನೂ ಲಿಪ್‌ಸಿಂಕ್‌ ಆಗುವಂತೆ ಬಹಳ ಶ್ರಮಪಟ್ಟು ಉದಯ್‌ ಅವರು ಮಾಡಿದ್ದರು.

ಕೆಲಸ ಹೋದ ನೋವಿತ್ತು

ನಾನು ಟಿವಿ ಚಾನೆಲ್‌ನಲ್ಲಿ ಡಬ್ಬಿಂಗ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದೆ. ಈ ಡಬ್ಬಿಂಗ್‌ಗಾಗಿ ಚೆನ್ನೈಗೆ ಹೊರಡೋ ಹೊತ್ತಿಗೇ ಆ ಚಾನೆಲ್‌ನವರು ನಿಮ್ಮ ಸವೀರ್‍ಸ್‌ ಸಾಕು ಅಂತ ಕಳಿಸಿಬಿಟ್ರು. ಪರ್ಸನಲ್‌ ಬದುಕಿನಲ್ಲಿ ಏನೇ ಬೆಳವಣಿಗೆ ಆಗ್ತಿತ್ತು. ಮನೆಯಲ್ಲಿ ಹೇಳ್ಕೊಳ್ಳಕ್ಕೆ ಆಗ್ತಿರಲಿಲ್ಲ. ಬಹುಶಃ ಕನ್ನಡದಲ್ಲಿ ಈ ಸಿನಿಮಾ ನೋಡಿದವರಿಗೆ ಆ ಧ್ವನಿಯಲ್ಲಿನ ವಿಷಾದ ಗೊತ್ತಾಗಬಹುದು. ಕ್ಯಾ.ಗೋಪಿನಾಥ್‌ ಅವರು ಬದುಕಿನುದ್ದಕ್ಕೂ ಬಹಳ ನೋವು ತಿಂದವರು, ಹೋರಾಟ ಮಾಡಿದವರು. ಅದರ ಮುಂದೆ ನನ್ನ ನೋವು ಏನೇನೂ ಅಲ್ಲ. ಆದರೆ ಆ ನೋವಿಗೆ ತಕ್ಕಂತೆ ಧ್ವನಿ ಹೊಂದಿಸೋದಕ್ಕೆ ಸನ್ನಿವೇಶವೇ ದಾರಿ ಮಾಡಿಕೊಟ್ಟಿತು. ಆದರೆ ಅಲ್ಲಿಂದ ಹೊರಬರುವಾಗ ಬೇರೆಯೇ ವ್ಯಕ್ತಿಯಾಗಿ ಹೊರಬಂದೆ.

click me!