ಚುನಾವಣಾ ಪ್ರಚಾರಕ್ಕೆ ಹೊಸ ಫೇಸ್‌ಬುಕ್ ಪೇಜ್ ತೆರೆದ ಸುಮಲತಾ

By Web Desk  |  First Published Mar 11, 2019, 4:25 PM IST

ಲೋಕಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕೈಗೊಂಡಿರುವ ಸುಮಲತಾ ಅಂಬರೀಶ್ |  ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಫೈಟ್ ನೀಡಲು ರೆಡಿಯಾಗಿದ್ದಾರೆ ಸುಮಲತಾ | ಫೇಸ್‌ಬುಕ್‌ನಲ್ಲಿ ಹೊಸ ಪೇಜ್ ತೆರೆದಿದ್ದಾರೆ. 


ಬೆಂಗಳೂರು (ಮಾ. 11): ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮಂಡ್ಯ ಚುನಾವಣಾ ಕಣ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಚುನಾವಣೆಗೆ ಸ್ಪರ್ಧಿಸಲು ಸುಮಲತಾ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಫೇಸ್ ಬುಕ್ ನಲ್ಲಿ ಸುಮಲತಾ ಅಮರ್ ನಾಥ್ ಎಂಬ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿದ್ದು ಈಗ ಸುಮಲತಾ ಅಂಬರೀಶ್ ಎಂಬ ಹೆಸರಿನಲ್ಲಿ ಇನ್ನೊಂದು ಖಾತೆ ತೆರೆದಿದ್ದಾರೆ.

Tap to resize

Latest Videos

 

’ಆತ್ಮೀಯರೇ ನಮಸ್ಕಾರ. ಸಾಮಾಜಿಕ ಜಾಲತಾಣಗಳಲ್ಲಿ ಸಹ ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.  ಖಾತೆ ತೆರೆದ ಮೂರು ಗಂಟೆಗೆ ಸುಮಾರು 5 ಸಾವಿರ ಜನ ಪೇಜ್ ಲೈಕ್ ಮಾಡಿದ್ದಾರೆ. 

click me!