
ವಿಕ್ಟರಿ ಕಿಂಗ್ ಶರಣ್ ತನ್ನ ನೆಚ್ಚಿನ ಶಾಲಾ ಶಿಕ್ಷಕರನ್ನು ಕಳೆದುಕೊಂಡಿದ್ದಾರೆ. ತಂದೆ-ತಾಯಿ ನಂತರ ಜೀವನದಲ್ಲಿ ಹಾಗೂ ಶಿಕ್ಷಣದಲ್ಲಿ ಮಹತ್ವ ಸ್ಥಾನ ಪಡೆಯುವುದು ಗುರುಗಳೇ. ಗಣಿತವೆಂದರೆ ಸಾಕು ಇದು ತುಂಬಾ ಕಷ್ಟ ಎಂದು ದೂರ ಹೋಗುವವರೇ ಹೆಚ್ಚು. ಆದರೆ ನಟ ಶರಣ್‌ಗೆ ತನ್ನ ಗಣಿತ ಮೇಸ್ಟ್ರು ಮಾತ್ರ ಫೇವರೇಟ್!
ಅನಾರೋಗ್ಯದಿಂದ ಬಳಲುತ್ತಿದ್ದ ಬೆಲಹರ್ ಮೇಸ್ಟ್ರು ವಿಧಿವಶರಾಗಿದ್ದು, ನೋವಿನಲ್ಲಿರುವ ಶರಣ್ ಟ್ಟೀಟರ್ ನಲ್ಲಿ 'ನನ್ನ ಫೇವರೆಟ್ ಟೀಚರ್ Mr.Belahar ಸರ್ ನನ್ನು ಕಳೆದುಕೊಂಡಿದ್ದೇನೆ. ನಾನು ಪ್ರೈಮರಿ ಹಾಗೂ ಸೆಕೆಂಡರಿಯಲ್ಲಿದ್ದಾಗ ಗಣಿತ ಹೇಳಿಕೊಟ್ಟವರು. ನನ್ನ ಜೀವನದಲ್ಲಿ ನಿಮ್ಮನ್ನು ಪಡೆದಿದ್ದು ನನ್ನ ಅದೃಷ್ಟ. RIP' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.