
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್‌ಗೆ ಒಂದೇ ದಿನ ಬಾಕಿ ಇದೆ. ಈಗಾಗಲೇ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಜುಲೈ 28ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ, ಕೌತಿಕ ಹೆಚ್ಚಿಸಿರುವ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ವಿಶ್ವದಾದ್ಯಂತ ಎಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ, ಯಾವ ರಾಜ್ಯಗಳಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ವಿಕ್ರಾಂತ್ ರೋಣ ರಾರಾಜಿಸಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ವಿಶ್ವದಾದ್ಯಂತ ರಿಲೀಸ್
ವಿಕ್ರಾಂತ್ ರೋಣ ವರ್ಲ್ಡ್ವೈಡ್ ಮೊದಲ ದಿನ 2500 ಸ್ಕ್ರೀನ್ನಲ್ಲಿ ಸುದೀಪ್ ಸಿನಿಮಾ ಸಿನಿಮಾ ರಿಲೀಸ್ ಆಗುತ್ತಿದೆ. ವಿಶ್ವಾದ್ಯಂತ ಮೊದಲ ದಿನ 9000ಕ್ಕೂ ಅಧಿಕ ಪ್ರದರ್ಶನ ಏರ್ಪಡಿಸಲಾಗಿದೆ.
ಕರ್ನಾಟಕದಲ್ಲಿ ವಿಕ್ರಾಂತ್ ರೋಣ ದರ್ಬಾರ್
ಕರುನಾಡಿನಲ್ಲಿಯೂ ವಿಕ್ರಾಂತ್ ರೋಣ ಅಬ್ಬರ ಜೋರಾಗಿದೆ. ಮೊದಲ ದಿನ 325 ಸಿಂಗಲ್ ಸ್ಕ್ರೀನ್, 65 ಮಲ್ಟಿಪ್ಲೆಕ್ಸ್ನಲ್ಲಿ ಕಿಚ್ಚನ ಸಿನಿಮಾ ಬಿಡುಗಡೆಯಾಗುತ್ತಿದೆ.
ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2500 ಶೋಗಳನ್ನು ನಡೆಸುವ ಸಾಧ್ಯತೆ ಇದೆ. ಸುಮಾರು 900 ಸ್ಕ್ರೀನ್ 3ಡಿ ಹಾಗೂ 1600 ಸ್ಕ್ರೀನ್ನಲ್ಲಿ 2ಡಿ ವರ್ಷನ್ ಬಿಡುಗಡೆಯಾಗುತ್ತಿದೆ.
ಬೆಂಗಳೂರಿನಲ್ಲಿ ಕಿಚ್ಚನ ಖರಾಮತ್
ಬೆಂಗಳೂರಿನಲ್ಲಿ ಮೊದಲ ದಿನ ಸಾವಿರಕ್ಕೂ ಹೆಚ್ಚು ಶೋಗಳು ಇವೆ. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್ನಲ್ಲಿ 800 ಶೋನಲ್ಲಿ ವಿಕ್ರಾಂತ್ ರೋಣ ಅಬ್ಬರಿಸುತ್ತಿದೆ. ಒಟ್ಟು 70 ಸಿಂಗಲ್ ಸ್ಕ್ರೀನ್ನಲ್ಲಿ 400 ಶೋ ಆಗಲಿದೆ. ಬೆಳಗ್ಗೆಯಿಂದ 6 ಗಂಟೆಗೆಯಿಂದ 'ವಿಕ್ರಾಂತ್ ರೋಣ' ಶೋ ಆರಂಭವಾಗುತ್ತಿದೆ. ಶಂಕರ್ ನಾಗ್ ಚಿತ್ರಮಂದಿರದಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ ಪ್ರಾರಭವಾಗುತ್ತಿದೆ. ಅಂದಹಾಗೆ ದೇಶದಲ್ಲೇ ಶಂಕರ್ ನಾಗ್ ಚಿತ್ರಮಂದಿರದಲ್ಲೆೇ ಮೊದಲ ಶೋ ಆಗಲಿದೆ.
ವಿಕ್ರಾಂತ್ ರೋಣಗೆ ಮೇನ್ ಥಿಯೇಟರ್ ಕಾನ್ಸೆಪ್ಟ್ ಇರುವುದಿಲ್ಲ. ಊರ್ವಶಿ ಚಿತ್ರಮಂದಿರಕ್ಕೆ ಬೆಳಗ್ಗೆ 7 ಗಂಟೆಗೆ ಅನೂಪ್ ಭಂಡಾರಿ ಮತ್ತು ಟೀಮ್ ಬರಲಿದ್ದಾರೆ. ವೀರೇಶ್ ಥಿಯೇಟರ್ ನಲ್ಲಿಯೂ ಸಹ ದೊಡ್ಡ ಮಟ್ಟದ ಸೆಲೆಬ್ರೇಷನ್ ಮಾಡಲು ಫ್ಯಾನ್ಸ್ ಪ್ಲಾನ್ ಮಾಡಿದ್ದಾರೆ.
ರಾ..ರಾ ರಕ್ಕಮ್ಮ ಆಯ್ತು, ಈಗ ರಣ ಭಯಂಕರ ಡೆವಿಲ್! ಇದೇ 28 ಕ್ಕೆ ವಿಕ್ರಾಂತ್ ರೋಣ ಹಬ್ಬ!
ಬೇರೆ ಬೇರೆ ರಾಜ್ಯಗಳಲ್ಲಿ
ತೆಲುಗಿನಲ್ಲಿ 350 ಸಿಂಗಲ್ ಸ್ಕ್ರೀನ್ನಲ್ಲಿ ರಿಲೀಸ್ ಆಗುತ್ತಿದೆ. ಮೊದಲ ದಿನ 1400 ಶೋ ಆಗುವ ನಿರೀಕ್ಷೆ ಇದೆ. ಇನ್ನು ತಮಿಳುನಾಡಿನಲ್ಲಿ 180 ಸಿಂಗಲ್ ಸ್ಕ್ರೀನ್ ಹಾಗೂ 70 ಮಲ್ಟಿಪ್ಲೆಕ್ಸ್ನಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದೆ. ಕೇರಳದಲ್ಲಿ 110 ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗುತ್ತಿದೆ 600 ಕ್ಕೂ ಹೆಚ್ಚು ಶೋಗಳು ಕೇರಳದಲ್ಲಿ ಪ್ರದರ್ಶನವಾಗುತ್ತಿದೆ.
ಉತ್ತರ ಭಾರತದಲ್ಲಿ
ಉತ್ತರ ಭಾರತದಲ್ಲಿ ಒಟ್ಟು 690 ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ಅಬ್ಬರಿಸುತ್ತಿದೆ. ಉತ್ತರ ಭಾರತ ಭಾಗದಲ್ಲಿ ಮೊದಲ ದಿನ 2800 ಶೋಗಳನ್ನು ನಿರೀಕ್ಷೆ ಮಾಡಲಾಗಿದೆ.
ಸುದೀಪ್ ಸರ್ ಆ ಮೆಸೇಜ್ ಹಾಕಿದ್ದಕ್ಕೆ ನಾನು ಇಲ್ಲಿದ್ದೇನೆ: ನೀತು ಅಶೋಕ್
ವಿದೇಶದಲ್ಲಿ
ವಿದೇಶದಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಸುದೀಪ್ ಸಿನಿಮಾ ರಿಲೀಸ್ ಆಗುತ್ತಿದೆ. ಓವರ್ಸೀಸ್ನ 600 ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ಮೊದಲ ದಿನ 1500 ಶೋ ಪ್ರದರ್ಶನವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.