500 ರೂ. ಕೊಡುವ ಗಿಡಕ್ಕೆ 1990 ರೂ. ಕೊಟ್ರಾ? ಅದಿತಿ ಪ್ರಭುದೇವಾ ಶಾಪಿಂಗ್‌ಗೆ ನೆಟ್ಟಿಗರು ಶಾಕ್!

By Vaishnavi ChandrashekarFirst Published Jul 25, 2022, 3:22 PM IST
Highlights

ದಿ ಮೋಸ್ಟ್‌ ಹ್ಯಾಪನಿಂಗ್ ಜಾಗಕ್ಕೆ ಭೇಟಿ ಕೊಟ್ಟ ಅದಿತಿ ಪ್ರಭುದೇವಾ. ಹಣಕ್ಕೆ ಬೆಲೆ ಇಲ್ವಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು...

ವೀಕೆಂಡ್ ಬಂದ್ರೆ ಸಾಕು ಇಡೀ ಬೆಂಗಳೂರು IKEA ಕಡೆ ಮುಖ ಮಾಡುತ್ತದೆ. ಜನ ಸಾಮಾನ್ಯರು ಮಾತ್ರವಲ್ಲದೆ ಬ್ಲಾಗರ್‌ಗಳು ಮತ್ತು ಸೆಲೆಬ್ರಿಟಿಗಳು ಕೂಡ ಭೇಟಿ ಕೊಟ್ಟು ವ್ಲಾಗ್ ಮಾಡುತ್ತಾ ಶಾಪಿಂಗ್ ಮಾಡಿದ್ದಾರೆ. ಅಲ್ಲಿನ ವಿಶೇಷತೆಗಳು ಮತ್ತು ಆಹಾರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಯಾವ ಸ್ಥಳದಲ್ಲಿ ಏನೆಲ್ಲಾ ಸಿಗುತ್ತದೆ, ಕಡಿಮೆ ಬೆಲೆಗೆ ಏನೂ ಬೆಸ್ಟ್‌ ನೀವು ಶಾಪಿಂಗ್ ಮಾಡುವಾಗ ಏನೆಲ್ಲಾ ಫಾಲೋ ಮಾಡಬೇಕು ಎಂದು ರಿವೀಲ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಮುದ್ದು ಮುಖದ ನಟಿ ಅದಿತಿ ಪ್ರಭುದೇವ ಕೂಡ IKEAಗೆ ಭೇಟಿ ಕೊಟ್ಟು ಶಾಪಿಂಗ್ ಮಾಡಿರುವ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. 

'ತುಂಬಾ ಒಳ್ಳೆಯ ದಿನ ಈ ಸ್ಥಳಕ್ಕೆ ಭೇಟಿ ನೀಡಿರುವೆ ಏಕೆಂದರೆ ಜಾಸ್ತಿ ಜನರಿಲ್ಲ. ಕಡಿಮೆ ಜನರಿದ್ದಾರೆ. ಪ್ರವೇಶ ಮಾಡುತ್ತಿದ್ದಂತೆ ನಾನು ಐಕಿಯಾ ರೂಟ್‌ ಮ್ಯಾಪ್‌ ಪಡೆದುಕೊಂಡೆ. ನಮಗೆ ಗೊತ್ತಿಲ್ಲದೆ ಇರುವುದನ್ನು ತಿಳಿದುಕೊಳ್ಳುವುದಕ್ಕೆ ಹಿಂಜರಿಯಬಾರದು. ಏಕೆಂದರೆ ಟೈಂ ವೇಸ್ಟ್‌ ಆಗಬಾರದು. ಇದೆಲ್ಲಾ ನೋಡುವುದರಿಂದ ಬ್ಯೂಟಿಫುಲ್ ಐಡಿಯಾ ಸಿಗುತ್ತೆಆದರೆ ಶೋ ರೂಮ್‌ಗೆ ಹೋಗುವುದಕ್ಕಿಂತ ಮಾರ್ಕೆಟ್‌ ಜಾಗಕ್ಕೆ ಹೋಗುವುದು ಬೆಸ್ಟ್‌ ಅನಿಸಿತ್ತು. ನನಗೆ ಇಂಟೀರಿಯರ್ಸ್‌ ಏನೂ ಬೇಕಿರಲಿಲ್ಲ ಹೀಗಾಗಿ ನೇರವಾಗಿ ಮಾರ್ಕೆಟ್‌ಗೆ ಭೇಟಿ ಕೊಟ್ಟೆ' ಎಂದು ಅದಿತಿ ಮಾತನಾಡಿದ್ದಾರೆ. 

'ತುಂಬಾ ದಿನಗಳಿಂದ ನಾನು ಐಕಿಯಾಗೆ ಹೋಗಬೇಕು ಅಂದುಕೊಂಡಿದ್ದೆ ಕೊನೆಗೂ ಇವತ್ತು ಸಮಯ ಆಯ್ತು. ನಾನು ಐಕಿಯಾದಲ್ಲಿ ಕೆಲವೊಂದು ವಿಚಾರಗಳನ್ನು ಗಮನಿಸಿರುವೆ. ಶೋ ರೂಮ್ ಭಾಗಕ್ಕೆ ಮೊದಲು ಭೇಟಿ ಕೊಟ್ಟರೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಮೈಂಡ್ ಡೈವರ್ಟ್ ಆಗುತ್ತದೆ. ಮಾರ್ಕೆಟ್‌ನಲ್ಲಿ ಸಮಯ ಕೊಟ್ಟು ಖರೀದಿ ಮಾಡುವುದಕ್ಕೆ ಆಗೋಲ್ಲ. ಫರ್ನಿಚರ್‌ಗಳು ಓಕೆ ಓಕೆ ಆಗಿದೆ. ಅಲ್ಲಿನ ಬಟ್ಟೆ ಟೆಕ್ಸಚರ್‌ ಚೆನ್ನಾಗಿದೆ. ಐಕಿಯಾ ತುಂಬಾ ದುಬಾರಿ ಅನಿಸಿತ್ತು. ಕೆಲವೊಂದು ದುಬಾರಿ ಇದ್ರೂ ಬೇಕು ಅನಿಸುತ್ತದೆ.' ಎಂದು ತಂದಿರುವ ವಸ್ತುಗಳನ್ನು ತೋರಿಸಿದ್ದಾರೆ.

 

8 ವರ್ಷದಿಂದ ಲವ್ ಮಾಡ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದಕ್ಕೆ Aditi Prabhudeva ಕ್ಲಾರಿಟಿ ಇದು!

ಪ್ಲಾಸ್ಟಿಕ್ ಹೂ, ಸ್ಟೀಲ್ ಪಾಟ್, ಮೂರ್ನಾಲ್ಕು ಸಣ್ಣ ಪುಟ್ಟ ಗಿಡಗಳು, ಹಾಸಿಗೆಗೆ ಹಾಸುವ ಬೆಡ್‌ಶೀಟ್‌, ನೇಲ್‌ ಸೆಟ್ ಬಾಕ್ಸ್‌ ಮತ್ತು ಅದನ್ನ ಡ್ರಿಲ್ ಮಾಡಲು ಡ್ರಿಲರ್‌ ಮಷಿನ್, ಮರದ ಬೌಲ್‌ಗಳು, ಸೀಲಿಂಗ್ ಕ್ಲಿಪ್, ಹಣ್ಣು ಇಡುವುದಕ್ಕೆ ಬೌಲ್, ಸೌಟು, ಬಾರ್ಬೆಕ್ಯೂ ಬ್ರಷ್, ಲಿಂಟ್ ರೋಲರ್‌, ಕೇಬಲ್ ವಯರ್‌ಗಳನ್ನು ಕಟ್ಟಿಗೆ ಕಟ್ಟಲು ಪ್ಲಾಸ್ಟಿಕ್ ಕೇಬಲ್ ಮತ್ತು ಎರಡು ಗಿಡಗಳು.

'ನನಗೆ ಮನೆ ಡೆಕೋರೇಟ್ ಮಾಡುವುದಕ್ಕೆ ಸೆಟಪ್ ಮಾಡುವುದಕ್ಕೆ ಕೆಲವೊಂದು ವಸ್ತುಗಳು ಬೇಕಾಗುತ್ತದೆ ಅದನ್ನ ನಾನು ತೆಗೆದುಕೊಂಡು ಬಂದಿದ್ದೀನಿ. ಯಾವುದು ವೇಸ್ಟ್‌ ಆಗುವುದಿಲ್ಲ. ಪ್ರತಿಯೊಂದು ನನಗೆ ಉಪಯೋಗ ಅಗುತ್ತದೆ. ಕೆಲವೊಂದು ವಸ್ತುಗಳು ತುಂಬಾ ಚೆನ್ನಾಗಿದೆ. ಕೆಲವೊಂದು ವಸ್ತು ನೋಡಲು ಚೆನ್ನಾಗಿದ್ದರೂ ಕ್ವಾಲಿಟಿ ಅಷ್ಟು ಚೆನ್ನಾಗಿರಲಿಲ್ಲ. ನಾವು ಸ್ವಲ್ಪ ಯೋಚನೆ ಮಾಡಿ ಖರೀದಿ  ಮಾಡಿದೆ. ನಾನು ಅನೇಕ ಫಾರಿನರ್‌ಗಳನ್ನು ನೋಡಿದ್ದೆ ಯಾವಾಗಲೂ ಐಕಿಯಾದಿಂದ ತಂದಿರುವೆ ಎಂದು ಹೇಳುತ್ತಿದ್ದರು. ಇವತ್ತು ಆ ಜಾಗಕ್ಕೆ ಹೋಗಿರುವುದಕ್ಕೆ ಖುಷಿ ಇದೆ.' ಎಂದಿದ್ದಾರೆ ಅದಿತಿ. 

Aditi prabhudeva Youtube earnings ಯುಟ್ಯೂಬ್‌ ಹಣದಲ್ಲಿ EMI ಕಟ್ಟುತ್ತಿರುವ ನಟಿ

ಟ್ರೋಲ್: 

ಎರಡು ಮೂರು ಗಿಡದ ಪಾಟ್‌ಗಳನ್ನು ಖರೀದಿಸಿರುವ ಅದಿತಿ ಹೆಚ್ಚಿಗೆ ಹಣ ಕೊಟ್ಟಿದ್ದಾರಂತೆ. ಹೀಗಂತ ನೆಟ್ಟಿಗರು ಹೇಳುತ್ತಿದ್ದಾರೆ. ಹೊರಗಡೆ 500 ರೂ.ಗೆ ಸಿಗುವ ಗಿಡಕ್ಕೆ 1990 ರೂ. ಕೊಟ್ಟಿದ್ದಾರೆ. 100ರೂ. ಕೊಡುವ ಗಿಡಕ್ಕೆ 500 ರೂ. ಕೊಟ್ಟಿದ್ದಾರೆ. ಐಷಾರಾಮಿ ಅಂಗಡಿಗಳಿಗೆ ಹೋಗಿ ಖರೀದಿ ಮಾಡುವ ಬದಲು ಲೋಕಲ್‌ ಅಂಗಡಿಗಳಲ್ಲಿ ಖರೀದಿ ಮಾಡಿ ಎಂದು ಅದಿತಿಗೆ ನೆಟ್ಟಿಗರು ಬುದ್ಧಿ ಹೇಳಿದ್ದಾರೆ.

 

click me!