800 ವರ್ಷದ ಹಳೆ ಮನೆಗೆ ಪೇಂಟ್ ಮಾಡಿದ ಪತಿ; ಶುಭಾ ಪೂಂಜಾ Low ಬಜೆಟ್‌ ಮದುವೆ ಕಥೆ ಲೀಕ್

Published : Feb 17, 2023, 12:18 PM IST
800 ವರ್ಷದ ಹಳೆ ಮನೆಗೆ ಪೇಂಟ್ ಮಾಡಿದ ಪತಿ; ಶುಭಾ ಪೂಂಜಾ Low ಬಜೆಟ್‌ ಮದುವೆ ಕಥೆ ಲೀಕ್

ಸಾರಾಂಶ

 ಲಾಕ್‌ಡೌನ್‌ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ ಮತ್ತು ಸುಮಂತ್. ನಾಲ್ಕು ಫೋಟೋ ಮಾತ್ರ ವೈರಲ್ ಆಗಲು ಕಾರಣವೇನು? 

ಕನ್ನಡ ಚಿತ್ರರಂಗದ ಬಬ್ಲಿ ಗರ್ಲ್‌ ಕಮ್ ಬಿಗ್ ಬಾಸ್ ಸ್ಪರ್ಧಿ ಶುಭಾ ಪೂಂಜಾ ಮತ್ತು ಸಾಮಾಜಿಕ ಕಾರ್ಯಕರ್ತ ಸುಮಂತ್ ಜನವರಿ 5,2022ರಂದು ಮಂಗಳೂರಿನ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶುಭಾ ಮದುವೆಯಾದ ಸಮಯದಲ್ಲಿ ಕರ್ನಾಟಕದಲ್ಲಿ ಕೋವಿಡ್‌19 ಲಾಕ್‌ಡೌನ್‌ ನಡೆಯುತ್ತಿತ್ತು. ಹೀಗಾಗಿ ಮದುವೆಯಲ್ಲಿ ಕೆಲವರು ಮಾತ್ರ ಭಾಗಿಯಾಗಿದ್ದರು. ಲಾಕ್‌ಡೌನ್‌ ಮದುವೆ ಹೇಗಿತ್ತು? ಕಡಿಮೆ ಅವಧಿಯಲ್ಲಿ ಹೇಗೆಲ್ಲಾ ತಯಾರಿ ಮಾಡಿಕೊಂಡರು ಎಂದು ಶುಭಾ ಆಂಕರ್ ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.    

'ಇಬ್ಬರ ಮನೆಯಲ್ಲೂ ಮದುವೆ ಮಾಡಿಕೊಳ್ಳಿ ಎನ್ನುತ್ತಿದ್ದರು. ಡಿಸೆಂಬರ್ 29 ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದೆ. 10 ಜನ ಇದ್ದರೂ ಪರ್ವಾಗಿಲ್ಲ ಸಿಂಪಲ್ ಆಗಿ ಮದುವೆ ಮಾಡಿಕೊಳ್ಳಬೇಕು ಮನೆಯಲ್ಲಿ ಮದುವೆ ಆಗೋಣ ಆಮೇಲೆ ಎಲ್ಲರಿಗೂ ಪಾರ್ಟಿ ಅರೇಂಜ್ ಮಾಡೋಣ ಎಂದೆ. ಎರಡು ದಿನಗಳ ಮುನ್ನ ಮದುವೆ ಪ್ಲ್ಯಾನ್ ಮಾಡಲಾಗಿತ್ತು' ಶುಭಾ ಮಾತನಾಡಿದ್ದಾರೆ.

'ಊರಿನಲ್ಲಿರುವ ಮನೆಯಲ್ಲಿ ಸಿಂಪಲ್ ಆಗಿ ಮದುವೆ ಮುಗಿಸೋಣ ಎಂದು ಪ್ಲ್ಯಾನ್ ಆಯ್ತು. ಬೆಂಗಳೂರಿಗೆ ಬಂದ ಮೇಲೆ ಸಂಘಟನೆ, ಫ್ಯಾಮಿಲಿ, ಇಂಡಸ್ಟ್ರಿ ಮತ್ತು ಸ್ನೇಹಿತರಿಗೆ ಮೂರ್ನಾಲ್ಕು ಪಾರ್ಟಿ ಕೊಡೋಣ ಎಂದು ಪ್ಲ್ಯಾನ್ ಮಾಡಿ ಬೆಂಗಳೂರಿಗೆ ಬರುವಷ್ಟರಲ್ಲಿ ಫುಲ್‌ ಲಾಕ್‌ಡೌನ್‌ ಇತ್ತು. ಹೀಗಾಗಿ ಏನೂ ಮಾಡಲು ಆಗಲಿಲ್ಲ' ಶುಭಾ ಪತಿ ಸುಮಂತ್ ಹೇಳಿದ್ದಾರೆ. 

'ಎರಡು ದಿನ ಮುನ್ನ ಮದುವೆ ಪ್ಲ್ಯಾನ್ ಅಗಿದ್ದು. ಮನೆಯಿಂದ ಹೊರಗಡೆ ಸುಮಂತ್‌ ಬಂದ್ರು. ನಾವು ವಾಸ ಮಾಡುತ್ತಿದ್ದ ಮನೆ 800 ವರ್ಷ ಹಳೆ ಮನೆ. ಫುಲ್ ಪೇಂಟ್‌ ಬಿದ್ದಿತ್ತು, ಗೋಡೆ ಸರಿಯಾಗಿಲ್ಲ ಏನೂ ಇಲ್ಲ. ಏನ್ ಚಿನ್ನಿ ಇಲ್ಲಿ ಮದುವೆಯಾಗಿ ಒಂದು ಫೋಟೋ ತೆಗೆದರೂ ಹೇಗಿರುತ್ತೆ ಅಂದ. ಮದುವೆ ಹಿಂದಿನ ದಿನ ಫುಲ್ ಪೇಂಟ್ ಮಾಡಿದ್ದಾರೆ. ಮದುವೆ ಬಂದ ಗೆಸ್ಟ್‌ಗಳು  ಕೂಡ ಪೇಂಟ್ ಮಾಡಿದ್ದಾರೆ. ಸೆಲೆಬ್ರಿಟಿ ಮಂಜು ಮತ್ತು ರಾಘು ಬಂದ್ರು ಅವರಿಂದಲೂ ಪೇಂಟ್ ಮಾಡಿಸಲಾಗಿತ್ತು.' ಎಂದು ಶುಭಾ ಪೂಂಜಾ ಹೇಳಿದ್ದಾರೆ. 

'ರಾತ್ರಿ 8 ಗಂಟೆಗೆ ಹೂ ತರಲು ಮಾರ್ಕೆಟ್‌ಗೆ ಹೋಗಿದ್ದಾರೆ. ಮಂಗಳೂರಿನಲ್ಲಿ ರಾತ್ರಿ 8ಕ್ಕೆ ಜನರು ಮಲಗಿಕೊಂಡಿರುತ್ತಾರೆ. ತುಂಬಾ ಬಾಡಿರುವ ಹೂವುಗಳನ್ನು ಮದುವೆಗೆ ತೆಗೆದುಕೊಂಡು ಬಂದಿದ್ದಾರೆ. ನಮ್ಮ ಮದುವೆ ಹಾರ ಕೂಡ ಬಾಡಿದೆ. ಮದುವೆ ಪಟ್‌ ಪಟ್‌ ಅಂತ ಮುಗಿತ್ತು ಅಷ್ಟರಲ್ಲಿ ಸುಮಂತ್ ಪಂಚೆ ಬಿಚ್ಚಿ ಶಾರ್ಟ್‌ ಆಂಡ್ ಬನಿಯನ್ ಹಾಕೊಂಡು ಬಂದಿದ್ದಾನೆ. ಹೀಗಾಗಿ ನನ್ನ ಮದುವೆ ಫೋಟೋ ಅಂತ ಇರುವುದು ಕೇವಲ 4 ಅಷ್ಟೆ. ಮೀಡಿಯಾದವರು ಕರೆ ಮಾಡಿ ಫೋಟೋ ಕಳುಹಿಸಿ ಎನ್ನುತ್ತಿದ್ದಾರೆ ಅವರೇ ಹೇಳುತ್ತಿದ್ದರು 4 ಫೋಟೋ ಇದೆ ಅದು ಬಿಟ್ಟು ಬೇರೆ ಕೊಡಿ ಎಂದು. ನಮ್ಮ ಅಮ್ಮ ಅವರ ಅಪ್ಪ ಅಮ್ಮ ಜೊತೆಗೂ ಸುಮಂತ್ ಫೋಟೋ ತೆಗೆಸಿಕೊಂಡಿಲ್ಲ. ಮುಂದೆ ಮಕ್ಕಳು ಅಮ್ಮ ಮದುವೆ ಫೋಟೋ ವಿಡಿಯೋ ತೋರಿಸಿ ಎಂದು ಕೇಳಿದರೆ ಆ ನಾಲ್ಕು ಫೋಟೋ ಅಷ್ಟೇ ತೋರಿಸಬೇಕು' ಎಂದಿದ್ದಾರೆ ಶುಭಾ.

Udupi: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ Shubha Poonja!

'ತಾಳಿ ಕಟ್ಟಿರುವ ವಿಡಿಯೋ ಕೂಡ ಇಲ್ಲ. ಮದುವೆ ಮಾರನೆ ದಿನ ಮಟನ್ ಊಟ ಮಾಡಿಸಬೇಕು. ಅಡುಗೆ ಮಾಡುವವರು ಯಾರೂ ಇಲ್ಲ. ಅಲ್ಲಿದ್ದವರು ಸೆಲೆಬ್ರಿಟಿ ಶೆಫ್‌ ಮಂಜು ಪಾವಗಡ ಮತ್ತು ರಾಘು. ಯಾರದ್ದೋ ಮನೆಯಿಂದ ಪಾತ್ರ ತಂದು ಗದ್ದೆಯಲ್ಲಿ ಕಬಾಬ್ ಮಾಡುತ್ತಿದ್ದರು' ಎಂದಿದ್ದಾರೆ ಸುಮಂತ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!