'ಸಂಘರ್ಷ' ಧಾರಾವಾಹಿಗೆ ನದಿ ತೀರದಲ್ಲಿ ಅದ್ದೂರಿ ಮದುವೆ ಸೆಟ್‌!

Kannadaprabha News   | Asianet News
Published : Aug 20, 2021, 10:26 AM IST
'ಸಂಘರ್ಷ' ಧಾರಾವಾಹಿಗೆ ನದಿ ತೀರದಲ್ಲಿ ಅದ್ದೂರಿ ಮದುವೆ ಸೆಟ್‌!

ಸಾರಾಂಶ

ಸಾಮಾನ್ಯವಾಗಿ ಧಾರಾವಾಹಿಗಳ ಮದುವೆ ದೃಶ್ಯಗಳನ್ನು ಅದ್ದೂರಿಯಾಗಿ ಯಾವುದಾದರೂ ರೆಸಾರ್ಟ್‌ನಲ್ಲಿ ಚಿತ್ರೀಕರಿಸುವುದು ವಾಡಿಕೆ. ಆದರೆ ಸುವರ್ಣ ವಾಹಿನಿಯಲ್ಲಿ ಪ್ರಸಾವಾಗುವ ‘ಸಂಘರ್ಷ’ ಧಾರಾವಾಹಿ ತಂಡ ಮದುವೆ ದೃಶ್ಯಗಳನ್ನು ನದಿ ತೀರದಲ್ಲಿ ಚಿತ್ರೀಕರಿಸಿ ಮಾದರಿಯಾಗಿದೆ.  

‘ನಮ್ಮ ‘ಸಂಘರ್ಷ’ ಧಾರಾವಾಹಿಯ ಮದುವೆ ದೃಶ್ಯಾವಳಿಗಳನ್ನು ಶ್ರೀರಂಗಪಟ್ಟಣ ಸಮೀಪದ ಗೋಸಾಯಿ ಘಾಟ್‌ ನದೀ ತೀರದಲ್ಲಿ ಪ್ರಕೃತಿಗೆ ಹತ್ತಿರವಾಗಿರುವಂತೆ ಚಿತ್ರೀಕರಿಸಲಾಗಿದೆ’ ಎಂದು ಸಂಘರ್ಷ ಸೀರಿಯಲ್‌ನ ನಿರ್ಮಾಪಕಿ ಶ್ರುತಿ ನಾಯ್ಡು ಹೇಳುತ್ತಾರೆ.

ಸ್ಟಾರ್‌ ಸುವರ್ಣ ಡಾನ್ಸ್‌ ರಿಯಾಲಿಟಿ ಶೋಗೆ ಹರಿಪ್ರಿಯಾ ಜಡ್ಜ್‌

‘ಮದುವೆ ಮಂಟಪವನ್ನು ಸಾಂಪ್ರದಾಯಿಕ ಮಾದರಿಯಲ್ಲಿ ಅದ್ದೂರಿಯಾಗಿ ವಿನ್ಯಾಸ ಮಾಡಲಾಗಿದೆ. ತಾವರೆ, ಆ ಪ್ರಕೃತಿಗೆ ಹೊಂದುವ ಬಣ್ಣದ ಹೂಗಳಿಂದ ಅಲಂಕರಿಸಲಾಗಿದ್ದು, ಇಡೀ ಪರಿಸರ ಕಲರ್‌, ಎಮೋಶನ್‌, ಎನ್‌ಜಾಯ್‌ಮೆಂಟ್‌ಗಳ ಒಟ್ಟು ಮೊತ್ತದ ಹಾಗಿದೆ. ಮದುಮಕ್ಕಳು ಹೂವಿಂದ ಅಲಂಕರಿಸಲಾದ ತೆಪ್ಪದಲ್ಲಿ ಬರುವುದು ಮತ್ತೊಂದು ವಿಶೇಷ. 5 ದಿನಗಳ ಕಾಲ ಮದುವೆಯ ಚಿತ್ರೀಕರಣ ನಡೆದಿದೆ. ಮುಂದಿನ ವಾರದಿಂದ 10 ದಿನಗಳ ಕಾಲ ಈ ಎಪಿಸೋಡ್‌ ಪ್ರಸಾರವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಮರಳಿ ಮನಸಾಗಿದೆ'!

ತೇಜಸ್ವಿನಿ ಶೇಖರ್‌, ರೋಹಿತ್‌ ರಂಗಸ್ವಾಮಿ, ವನಿತಾ ವಾಸು ಈ ಧಾರಾವಾಹಿಯ ಮುಖ್ಯಪಾತ್ರಗಳಲ್ಲಿದ್ದಾರೆ. ‘ಸಂಘರ್ಷ’ ಧಾರಾವಾಹಿ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಶಕಗಳ ಬಳಿಕ ಗೆಳೆಯ ದರ್ಶನ್ ಫೋಟೋ ಶೇರ್ ಮಾಡಿ, ವಿಶ್ ಮಾಡಿದ ಕಿಚ್ಚ ಸುದೀಪ್!
ದರ್ಶನ್ ಬಳಿಕ ಅಭಿಮಾನಿಗಳ ಅಶ್ಲೀಲ ಕಾಮೆಂಟ್‌ಗೆ ವಿಜಯಲಕ್ಷ್ಮಿ ಕೆಂಡಾಮಂಡಲ; 150 ಫೊಟೋ ಸಮೇತ ದೂರು!