ಕರ್ನಾಟಕದ, ಅದರಲ್ಲೂ ಮಂಗಳೂರು ಮೂಲದ ಅಮ್ಮನ ಮಗನಾಗಿರುವ ನಟ ಜೂನಿಯರ್ ಎನ್‌ಟಿಆರ್ ಅವರು ಕನ್ನಡವನ್ನು ಮಾತನಾಡುತ್ತಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಸಿನಿಮಾವೊಂದಕ್ಕೆ ಹಾಡನ್ನು ಕೂಡ ಹಾಡಿದ್ದಾರೆ...
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ (Junior NTR) ಭೇಟಿ ನೀಡಿದ್ದಾರೆ. ಅವರಿಗೆ ಅಲ್ಲಿ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಸಾಥ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕೆಜಿಎಫ್ ಖ್ಯಾತಿಯ ನಟ ಪ್ರಶಾಂತ್ ನೀಲ್ (Prashanth Neel) ಕೂಡ ಅಲ್ಲಿ ಬಂದು ಅವರೆಲ್ಲರ ಜೊತೆ ಭಾಗಿಯಾಗಿದ್ದಾರೆ. ಈ ಮೂಲಕ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸ್ಟಾರ್ ನಟ-ನಿರ್ದೇಶಕರುಗಳ ಸಂಗಮವಾಗಿದೆ. ಅಲ್ಲಿ ಜೂನಿಯರ್ ಎನ್ ಟಿ ಆರ್ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಕೈಗೊಂಡಿದ್ದಾರೆ.
ಸೆಲೆಬ್ರಿಟಿ ನಿರ್ದೇಶಕ ಪ್ರಶಾಂತ್ ನೀಲ್, ಜೂನಿಯರ್ ಎನ್‌ಟಿಆರ್ ಹಾಗು ರಿಷಬ್ ಶೆಟ್ಟಿ ಅವರು ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಕೈಗೊಂಡಿದ್ದಾರೆ. ಕೃಷ್ಣನ ಸನ್ನಿಧಿಯಲ್ಲಿ ಸ್ಟಾರ್ ನಟ, ನಿರ್ದೇಶಕರು ಧನ್ಯತಾ ಭಾವ ಹೊಂದಿದ್ದಾರೆ. ಶ್ರಾವಣ ಮಾಸದ ಶನಿವಾರದಂದು ಕುಟುಂಬ ಸಹಿತ ಬಂದು ಜೂನಿಯರ್ ಎನ್‌ಟಿಆರ್ ಶ್ರೀ ಕೃಷ್ಣ ದೇವರ ದರ್ಶನ ಮಾಡಿದ್ದಾರೆ. ಅಂದಹಾಗೆ, ನಟ ಜೂ. ಎನ್‌ಟಿಆರ್ ಅವರ ತಾಯಿ ಕರ್ನಾಟಕದವರೇ ಆಗಿದ್ದು, ಮಂಗಳೂರು ಮೂಲದವರೇ ಆಗಿದ್ದಾರೆ.
ಹೆಲೋ, ನಿಮ್ಮ ಅಚ್ಚುಮೆಚ್ಚಿನ ಸ್ಯಾಂಡಲ್‌ವುಡ್ ತಾರೆಗಳ ಮನೆ ಹೆಸರುಗಳು ಹೀಗಿವೆ ನೋಡಿ..!
ಕರ್ನಾಟಕದ, ಅದರಲ್ಲೂ ಮಂಗಳೂರು ಮೂಲದ ಅಮ್ಮನ ಮಗನಾಗಿರುವ ನಟ ಜೂನಿಯರ್ ಎನ್‌ಟಿಆರ್ ಅವರು ಕನ್ನಡವನ್ನು ಮಾತನಾಡುತ್ತಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಸಿನಿಮಾವೊಂದಕ್ಕೆ ಹಾಡನ್ನು ಕೂಡ ಹಾಡಿದ್ದಾರೆ. ಅವರು ಬೆಂಗಳೂರು ಅಥವಾ ಕರ್ನಾಟಕದ ಯಾವುದೇ ಭಾಗಕ್ಕೆ ಭೇಟಿ ಕೊಟ್ಟರೂ ಅವರು ಸಾಧ್ಯವಾದಷ್ಟು ಕನ್ನಡ ಮಾತನಾಡುವ ಮೂಲಕ ತಮ್ಮ ಅಮ್ಮನ ಭಾಷೆ (ಮಾತೃಭಾಷೆ) ಅಭಿಮಾನ ಮೆರೆಯುವುದನ್ನು ಮರೆಯುವುದಿಲ್ಲ.
ಒಟ್ಟಿನಲ್ಲಿ, ಕಾಂತಾರ ಮೂಲಕ ರಿಷಬ್ ಶೆಟ್ಟಿ ಹಾಗು ಕೆಜಿಎಫ್ ಮೂಲಕ ಪ್ರಶಾಂತ್ ನೀಲ್ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಇನ್ನು ಜೂನಿಯರ್ ಎನ್‌ಟಿಆರ್ ಅವರು ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾ ಹಾಡಿಗೆ ಆಸ್ಕರ್ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. ಈ ಮೂವರೂ ದಿಗ್ಗಜರು ಶ್ರಾವಣ ಮಾಸದ ಶನಿವಾರದಂದು ಒಂದಾಗಿ ಶ್ರೀ ಕೃಷ್ಣನ ದರ್ಶನ್ ಪಡೆದು ಧನ್ಯತೆ ಅನುಭವಿಸಿದ್ದಾರೆ.
ಪತ್ನಿ ವಿಜಯಲಕ್ಷ್ಮೀ ನೆನೆದು ದರ್ಶನ್ ಕಣ್ಣೀರು ಹಾಕಿದ್ರಾ? ಪಶ್ಚಾತ್ತಾಪದ ಮಾತುಗಳು ಬಂದಿವೆಯಾ?
ಇನ್ನು ರಿಷಬ್ ಶೆಟ್ಟಿ ಅವರು ಇತ್ತೀಚೆಗಷ್ಟೇ ತಮ್ಮ ಕಾಂತಾರ ಸಿನಿಮಾದ ಅಮೋಘ ಅಭಿನಯಕ್ಕಾಗಿ 'ಶ್ರೇಷ್ಠ ನಟ' ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಜೊತೆಗೆ, ನಿನ್ನೆ, ಅಂದರೆ 30 ಆಗಸ್ಟ್ 2024ರಂದು ತಮ್ಮ ನಿರ್ಮಾಣದ 'ಲಾಫಿಂಗ್ ಬುದ್ಧ' ಸಿನಿಮಾ ಬಿಡುಗಡೆ ಮಾಡಿ ಆ ಖುಷಿಯನ್ನೂ ಅನುಭವಿಸುತ್ತಿದ್ದಾರೆ. ಪೋಷಕ ನಟರಾಗಿ ಗುರುತಿಸಿಕೊಂಡಿದ್ದ ಪ್ರಮೋದ್ ಶೆಟ್ಟಿ ಅವರು ಲಾಫಿಂಗ್ ಬುದ್ಧ ಸಿನಿಮಾ ಮೂಲಕ ಹೀರೋ ಆಗಿ ಹೊಸ ಪಟ್ಟ ಹೊತ್ತು ಮೆರೆಯುತ್ತಿದ್ದಾರೆ.
ಉಡುಪಿ ಕೃಷ್ಣ ಮಠದಲ್ಲಿ ಜೂ. ಎನ್ ಟಿ ಆರ್ ಹೀಗೆ ಹೇಳಿಕೆ ನೀಡಿದ್ದಾರೆ. '40ವರ್ಷದಿಂದ ನನ್ನ ಅಮ್ಮನಿಗೆ ಒಂದು ಆಸೆ ಇತ್ತು. ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ಇದೆಲ್ಲವೂ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ. ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ರಿಷಬ್ ಜೊತೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ.
ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ನಾನು ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ. ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ರಿಷಬ್ ಅವರಿಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿ ನೀಡಿದೆ. ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ' ಎಂದಿದ್ದಾರೆ ಉಡುಪಿಗೆ ಬಂದಿರುವ ನಟ ಜೂನಿಯರ್ ಎನ್‌ಟಿಆರ್.