'ಹುಡುಗರು' ಮಾಡುವವರೆಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಬೇರೆನೇ ಅಭಿಪ್ರಾಯ ಇತ್ತು: ಶ್ರೀನಗರ ಕಿಟ್ಟಿ

By Vaishnavi Chandrashekar  |  First Published Dec 4, 2024, 11:13 AM IST

ಹುಡುಗರು ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಅಪ್ಪು ಜೊತೆಗೆ ಕಳೆದ ಸಮಯವನ್ನು ಎಂಜಾಯ್ ಮಾಡಿದ್ದಾಗ ಕಿಟ್ಟಿ ಹಂಚಿಕೊಂಡಿದ್ದಾರೆ.


2011ರಲ್ಲಿ ಕನ್ನಡ ಚಿತ್ರರಂಗ ಕಂಡ ಸೂಪರ್ ಹಿಟ್ ಸಿನಿಮಾ ಅಂದ್ರೆ ಹುಡುಗರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಲೂಸ್ ಮಾದಾ ಯೋಗಿ ಮತ್ತು ಶ್ರೀನಗರ ಕಿಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಸಿನಿಮಾ ಇದು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿರುವ ಚಿತ್ರ ಇದಾಗಿದ್ದು ಕೆ ಮಹದೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಹುಡುಗರು ಚಿತ್ರದಲ್ಲಿ ನಟಿಸಿರುವ ಅನುಭವವನ್ನು ಕಿಟ್ಟಿ ಹಂಚಿಕೊಂಡಿದ್ದಾರೆ.

'ಹುಡುಗರ ಚಿತ್ರದಲ್ಲಿ ಆಫರ್ ಕೊಟ್ಟಿದ್ದು ರಾಘಣ್ಣ. ಕಾಲ್ ಮಾಡಿ ಸಿಡಿ ಕೊಟ್ಟು ಕಳುಹಿಸಿದ್ದರು...ಅದನ್ನು ನೋಡಿ ಆ ಮೂವರಲ್ಲಿ ನಿಮಗೆ ಒಂದು ಪಾತ್ರ ಕೊಡ್ತೀನಿ ಅಂದ್ರು. ಅಂದೇ ಶೂಟಿಂಗ್‌ನಲ್ಲಿದ್ದರೂ ಕ್ಯಾರವಾನ್‌ನಲ್ಲಿ ಸಿನಿಮಾ ನೋಡಿ ಮೂರು ಗಂಟೆಯಲ್ಲಿ ಕರೆ ಮಾಡಿ ಯಾವ ಪಾತ್ರ ಮಾಡುತ್ತೀನಿ ಎಂದು ಹೇಳಿದ್ದೆ. ಅಪ್ಪು ಜೊತೆ ತೆರೆ ಹಂಚಿಕೊಳ್ಳುವುದೇ ಖುಷಿ ವಿಚಾರ ಅದರಲ್ಲೂ ಅಣ್ಣಾವ್ರ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ಇನ್ನೂ ದೊಡ್ಡ ಖುಷಿ ಇತ್ತು. ತಕ್ಷಣ ನಾಗಶೇಖರ್ ಮತ್ತು ಕೆ.ಮಂಜು ಅವರಿಗೆ ಕರೆ ಮಾಡಿದೆ, ನೀನು ಏನೂ ಯೋಚನೆ ಮಾಡಬೇಡ ಯಾವ ಪಾತ್ರ ಇದ್ದರೂ ಮಾಡು ಎಂದು ಹೇಳಿದ್ದರು' ಎಂದು ಬಿ ಗಣಪತಿ ಯೂಟ್ಯೂಬ್ ಚಾನೆಲ್‌ನಲ್ಲಿ ಶ್ರೀನಗರ ಕಿಟ್ಟಿ ಮಾತನಾಡಿದ್ದಾರೆ. 

Tap to resize

Latest Videos

ನಿಮ್ಮ ಕನಸಿನಲ್ಲಿ ಹಾವು ಬರ್ತಿದ್ಯಾ? ಹಾಗಿದ್ರೆ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ

'ಹುಡುಗರು ಸಿನಿಮಾ ಶೂಟಿಂಗ್‌ ದಿನಗಳಲ್ಲಿ ಬೇರೆ ದಿನಗಳನ್ನು ತೋರಿಸಿತ್ತು. ದೂರದಲ್ಲಿ ನಿಂತುಕೊಂಡು ಇವ್ರು ಹೀಗ್ ಇರ್ಬೇಕು ಹಾಗ್ ಇರ್ಬೇಕು ಅಂದುಕೊಂಡಿದ್ದೆ ಆದರೆ ದೊಡ್ಡಮೆ ಯಾವತ್ತಿದ್ದರೂ ದೊಡ್ಡ ಮನೆನೇ ಅನ್ನೋದು ಪ್ರೂವ್ ಆಯ್ತು. ಅಪ್ಪು ಮತ್ತು ನಾನು ಹೆಚ್ಚಾಗಿ ಹೊರಗಡೆ ಯಾವತ್ತೂ ಭೇಟಿ ಆಗಿದ್ದಿಲ್ಲ ಆದರೆ ಹೆಚ್ಚು ಸಮಯ ಕಳೆದಿದ್ದು ಹುಡುಗರು ಸಿನಿಮಾ ಸಮಯದಲ್ಲಿ. ನಾವು ಎಲ್ಲೋ ಪೋಲಿ ಮಾಡಿಕೊಂಡಿದ್ದರೂ ಅವರು ನಮ್ಮೊಟ್ಟಿಗೆ ಸೇರಿಕೊಂಡು ತಮಾಷೆ ಮಾಡುತ್ತಿದ್ದರು. ನೆಕ್ಸಟ್‌ ದಿನ ಸಿನಿಮಾ ಶೂಟಿಂಗ್ ಇರುವಾಗ ಅಪ್ಪು ಕೇಳುತ್ತಿದ್ದರು ನೀವು ನಾಳೆ ಎಷ್ಟು ಗಂಟೆಗೆ ಶೂಟಿಂಗ್‌ಗೆ ಬರ್ತೀರಾ ಅಂತ ನಾನು ಸರ್ ಮ್ಯಾನೇಜರ್ ಹೇಳಿದ್ದಾರೆ 7 ರಿಂದ 8 ಅಂದೆ. ಇಲ್ಲ ಇಲ್ಲ ನೀವು ಎಷ್ಟು ಗಂಟೆಗೆ ಬರ್ತೀರಾ ಹೇಳಿ ಅಂತ ಅಪ್ಪು ಕೇಳಿದ್ದರು ಆಗ ನಾನು ಸರ್ 8.30 ರಿಂದ 9 ಅಂತ ಹೇಳಿದೆ. ತಕ್ಷಣವೇ ಎಲ್ಲರನ್ನು ಕರೆದು ನಾಳೆ ಶೂಟಿಂಗ್ 9 ಗಂಟೆಗೆ ಎಂದು ಹೇಳಿ ಬಿಟ್ಟರು' ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ. 

ಶೂ, ಚಪ್ಪಲಿಯಿಂದ ಪಾದ ವಾಸನೆ ಬರ್ತಿದ್ಯಾ? ಟೆನ್ಶನ್ ಕಮ್ಮಿ ಮಾಡುತ್ತೆ ಈ ಟ್ರಿಕ್

'ನಮ್ಮನ್ನು ಕೇಳಿ ಟೈಂ ಬದಲಾಯಿಸುವ ಅಗತ್ಯ ಇರಲಿಲ್ಲ ಅಂದುಕೊಳ್ಳುತ್ತಾರೆ ಆದರೆ ಪ್ರತಿಯೊಬ್ಬರಿಗೂ ಪ್ರಾಮುಖ್ಯತೆ ನೀಡುತ್ತಾರೆ. ಸಂಜೆ ನಿಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎನ್ನುತ್ತಿದ್ದರು...ರಾತ್ರಿ ಕಬೋರ್ಡ್ ಓಪನ್ ಮಾಡಿ ನೋಡಿದರೆ ಶಾಕ್...ಏನ್ ಸರ್ ಇದು ಅಂತ ಕೇಳಿದ್ದೆ....ನೀವು ರಿಲಾಕ್ಸ್‌ ಆಗಿ ಕೆಲಸ ಮಾಡಿ ಟೆನ್ಶನ್‌ ತೆಗೆದುಕೊಳ್ಳಬೇಡಿ..ನೀವು ಕೂಲ್ ಆಗಿ ಕೆಲಸ ಮಾಡುತ್ತಿರುವುದಕ್ಕೆ ಅಲ್ಲಿ ರಿಸಲ್ಟ್‌ ಕಾಣಿಸುತ್ತಿರುವುದು ಅಂದ್ರು. ಅವರ ಬಗ್ಗೆ ನಾವು ಎಷ್ಟು ಮಾತನಾಡಿದ್ದರು ಸಾಲದು ಆದರೆ ನಮ್ಮ ಜೊತೆ ಈಗಲೂ ಇದ್ದಾರೆ' ಎಂದಿದ್ದಾರೆ ಕಿಟ್ಟಿ. 

 

click me!