ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಶ್ರೀಮುರಳಿ 'ಬಘೀರ' ಸಿನಿಮಾ; ವಾರ ಕಳೆಯುತ್ತಿದ್ದಂತೆ ಇಳಿಕೆ ಆಯ್ತಾ ಗಳಿಕೆ ಆಯ್ತಾ?

Published : Nov 06, 2024, 11:18 AM ISTUpdated : Nov 06, 2024, 11:27 AM IST
ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಶ್ರೀಮುರಳಿ 'ಬಘೀರ' ಸಿನಿಮಾ; ವಾರ ಕಳೆಯುತ್ತಿದ್ದಂತೆ ಇಳಿಕೆ ಆಯ್ತಾ ಗಳಿಕೆ ಆಯ್ತಾ?

ಸಾರಾಂಶ

ಹೊಂಬಾಳೆ ಫಿಲ್ಮಂ ನಿರ್ಮಾಣ ಮಾಡಿರುವ ಬಘೀರ ಸಿನಿಮಾ ಗಳಿಗೆ ಎಷ್ಟು? ವಾರ ಕಳೆಯುತ್ತಿದ್ದಂತೆ ಪ್ರೇಕ್ಷಕರು ಕಡಿಮೆ ಆಗಿದ್ದಾರಾ?

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ರುಕ್ಮಿಣಿ ವಸಂತ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಬಘೀರ ಸಿನಿಮಾ ಅಕ್ಟೋಬರ್ 31ರಂದು ರಾಜ್ಯಾದ್ಯಂತ ರಿಲೀಸ್ ಕಂಡಿದೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮಂ ನಿರ್ಮಾಣ ಮಾಡಿದ್ದಾರೆ. ಚಿತ್ರದ ಮೆರಗು ಹೆಚ್ಚಿಸಲು ಅಚ್ಯುತ್ ಕುಮಾರ್, ರಂಗಾಯಣ ರಘು ಮತ್ತು ಪ್ರಕಾಶ್ ರಾಜ್‌ ನಟಿಸಿದ್ದಾರೆ. ರಿಲೀಸ್‌ ಆದ ದಿನದಿಂದ ಸಖತ್ ಪಾಸಿಟಿವ್ ರೆಸ್ಪಾನ್ಸ್‌ ಪಡೆಯುತ್ತಿರುವ ಬಘೀರ ಚಿತ್ರದ ಕಲೆಕ್ಷನ್ ಮೇಲೆ ಸಿನಿ ರಸಿಕರ ಗಮನವಿದೆ. ಹಾಗಿದ್ರೆ 6 ದಿನಗಳಲ್ಲಿ ಬಘೀರ ಮಾಡಿರುವ ಕಲೆಕ್ಷನ್ ಎಷ್ಟು?

ಕಲೆಕ್ಷನ್ ಪಟ್ಟಿ:

ಸುಮಾರು 210ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಘೀರ ಸಿನಿಮಾ ರಿಲೀಸ್ ಅಗಿದೆ. ಮೊದಲ ಸಲ ಶ್ರೀಮುರಳ ಡಬಲ್ ರೂಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ ಇಷ್ಟ ಪಡುವ ಜನರಿಗೆ ಮಾಸ್‌ ಎಲಿಮೆಂಟ್‌ ಇದೆ..ಕ್ಲಾಸ್ ಇಷ್ಟ ಪಡುವ ಜನರಿಗೆ ಪಕ್ಕಾ ಕ್ಲಾಸ್ ಎಲಿಮೆಂಟ್ ಇದೆ. ಇನ್ನು ಮುರಳಿ ಮತ್ತು ರುಕ್ಮಿಣಿ ಲವ್ ಎಲಿಮೆಂಟ್ ಸೂಪರ್ ಅಂತಾರೆ ಫ್ಯಾನ್ಸ್. ಇಷ್ಟೆಲ್ಲಾ ಪಾಸಿಟಿವ್ ಪ್ರತಿಕ್ರಿಯೆ ಪಡೆಯುತ್ತಿರುವ ಬಘೀರ ಸಿನಿಮಾ ಮೊದಲ ದಿನ 3.25 ಕೋಟಿ ರೂ. ಕಲೆಕ್ಷನ್ ಮಾಡಿದೆ, ಎರಡನೇ ದಿನ 3.30 ಕೋಟಿ ರೂ., ಮೂರನೇ ದಿನ 3.50 ಕೋಟಿ ರೂ.,ನಾಲ್ಕನೇ ದಿನ 3.15 ಕೋಟಿ ರೂ., ಐದನೇ ದಿನ 1.50 ಕೋಟಿ ರೂ., ಆರನೇ ದಿನ 1 ಕೋಟಿ ರೂ. ಒಟ್ಟು 6 ದಿನಗಳ ಕಲೆಕ್ಷನ್ 15.65 ಕೋಟಿ ರೂಪಾಯಿಗಳು ಎಂದು ಖಾಸಗಿ ವೆಬ್‌ ಪೋರ್ಟಲ್ ವರದಿ ಮಾಡಿದೆ. 

ಸಾರ ಅಲಿ ಖಾನ್‌ ಹೆಸರಿನಲ್ಲಿ 41 ಕೋಟಿ ರೂ.; ಕಷ್ಟಪಟ್ಟು ದುಡಿದಿದ್ದು ಎಷ್ಟು?

ಇನ್ನು ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವುದರಿಂದ ತೆಲುಗು ಮಂದಿ ಕೂಡ ಸಿನಿಮಾ ನೋಡಿದ್ದಾರೆ. ಲಿಮಿಟೆಡ್‌ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡಲಾಗಿದೆ ಆದರೆ ಕಲೆಕ್ಷನ್ ನಿರೀಕ್ಷೆಗಿಂತ ಕಡಿಮೆ ಆಗಿದೆ ಎನ್ನಬಹುದು. ಸುಮಾರು 1.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಹಾಗೆ  ಕಳೆದ ಒಂದೆರಡು ದಿನಗಳಿಂದ 10-15 ಲಕ್ಷ ರೂ. ಗಳಿಸಿದೆ. ಬಘೀರ ಸಿನಿಮಾ ಮತ್ತೆ ವೀಕೆಂಡ್‌ನಲ್ಲಿ ತಮ್ಮ ಕಲೆಕ್ಷನ್‌ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹಲವು ದಿನಗಳ ನಂತರ ಶ್ರೀಮುರಳಿ ನಟನೆಯ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದೆ. ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ರೀಲ್ಸ್ ಕ್ರಿಯೇಟ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ